For Quick Alerts
  ALLOW NOTIFICATIONS  
  For Daily Alerts

  ಒಂದೇ ತೆರನಾದ ಎಂಟು ಐಶಾರಾಮಿ ಕಾರು ಖರೀದಿಸಿದ ಪವನ್ ಕಲ್ಯಾಣ್!

  |

  ನಟ ಪವನ್ ಕಲ್ಯಾಣ್ ತೆಲುಗು ಚಿತ್ರರಂಗದ ಅತ್ಯಂತ ದುಬಾರಿ ನಟ. ಸಿನಿಮಾ-ರಾಜಕೀಯ ಎರಡರಲ್ಲೂ ಸಕ್ರಿಯವಾಗಿರುವ ಪವನ್ ಕಲ್ಯಾಣ್‌ಗೆ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರಿ ದೊಡ್ಡ ಅಭಿಮಾನಿ ಬಳಗವಿದೆ.

  ಪವರ್ ಸ್ಟಾರ್ ಎಂದೇ ಖ್ಯಾತರಾಗಿರುವ ಪವನ್ ಕಲ್ಯಾಣ್ 'ಜನಸೇನಾ' ಪಕ್ಷ ಕಟ್ಟಿ ಆಂಧ್ರದಲ್ಲಿ ಪ್ರಬಲ ವಿಪಕ್ಷವಾಗಿ ಬೆಳೆಯುತ್ತಿದ್ದಾರೆ. ಜಗನ್ ಸರ್ಕಾರವನ್ನು ಅಡಿಗಡಿಗೆ ಟೀಕಿಸುತ್ತಿರುವ, ಪ್ರತಿಭಟನೆಗಳನ್ನು ಮಾಡುತ್ತಿರುವ ಪವನ್ ಕಲ್ಯಾಣ್ ಮುಂದಿನ ಚುನಾವಣೆ ಮೇಲೆ ದೃಷ್ಟಿ ನೆಟ್ಟಿದೆ.

  ಇದೀಗ ಪವನ್ ಕಲ್ಯಾಣ್ ಸಿನಿಮಾಗಳಿಂದ ತುಸು ಬಿಡುವು ಪಡೆದಿದ್ದು ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಲು ಮುಂದಾಗಿದ್ದಾರೆ. ಈ ನಡುವೆ ಪವನ್ ಕಲ್ಯಾಣ್ ಒಂದೇ ಮಾದರಿಯ ಎಂಟು ಐಶಾರಾಮಿ ಕಾರುಗಳನ್ನು ಖರೀದಿಸಿರುವುದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.

  ಚಿತ್ರ ವೈರಲ್ ಆಗಿದೆ

  ಚಿತ್ರ ವೈರಲ್ ಆಗಿದೆ

  ಹೌದು, ಪವನ್ ಕಲ್ಯಾಣ್ ಒಂದೇ ಮಾದರಿಯ ಒಂದೇ ಸರಣಿ ಸಂಖ್ಯೆಯ ಒಟ್ಟು ಎಂಟು ಮಹೀಂದ್ರಾ ಸ್ಕಾರ್ಪಿಯೋ ವಾಹನಗಳನ್ನು ಖರೀದಿಸಿದ್ದಾರೆ. ಎಂಟೂ ಕಾರುಗಳು ಒಂದೇ ದಿನ ಪವನ್‌ರ ಜನಸೇನಾ ಪಕ್ಷದ ಕಚೇರಿಯ ಬಳಿ ಬಂದಿದ್ದು, ಎಂಟೂ ವಾಹನಗಳನ್ನು ಸಾಲಾಗಿ ನಿಲ್ಲಿಸಿ ಪೂಜೆ ಮಾಡಲಾಗಿರುವ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ವಿಶೇಷವಾಗಿ ಮಾಡಿಫೈ ಮಾಡಿಸಲಾಗಿದೆ

  ವಿಶೇಷವಾಗಿ ಮಾಡಿಫೈ ಮಾಡಿಸಲಾಗಿದೆ

  ಈ ಎಂಟೂ ಸ್ಕಾರ್ಪಿಯೋ ವಾಹನಗಳು ಸಾಮಾನ್ಯ ಸ್ಕಾರ್ಪಿಯೋ ವಾಹನಗಳಲ್ಲ ಬದಲಿಗೆ ವಿಶೇಷವಾಗಿ ಇಂಟೀರಿಯರ್ ಮಾಡಿಸಲಾಗಿರುವ, ಅಗತ್ಯಕ್ಕೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಈ ವಾಹನಗಳಿಗೆ ಮಾಡಿಸಲಾಗಿದೆ ಎನ್ನಲಾಗುತ್ತಿದೆ. ಪ್ರತಿಯೊಂದುಸ್ಕಾರ್ಪಿಯೋ ವಾಹನಕ್ಕೆ 14-16 ಲಕ್ಷ ಹಣ ನೀಡಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ.

  ಬೆಂಬಲಿಗರು, ಸಿಬ್ಬಂದಿಗಾಗಿ ಕಾರು

  ಬೆಂಬಲಿಗರು, ಸಿಬ್ಬಂದಿಗಾಗಿ ಕಾರು

  ಈ ಎಂಟು ಕಾರುಗಳನ್ನು ಪವನ್ ಕಲ್ಯಾಣ್ ತಮ್ಮ ಬೆಂಬಲಿಗರು ಹಾಗೂ ಸಿಬ್ಬಂದಿಗಾಗಿ ಖರೀದಿಸಿದ್ದಾರೆ. ಅಕ್ಟೋಬರ್ 05 ರಂದು ಪವನ್ ಕಲ್ಯಾಣ್ ರಾಜ್ಯದಾದ್ಯಂತ ಪ್ರವಾಸ ಮಾಡಲಿದ್ದು, ರಾಜ್ಯ ಸರ್ಕಾರದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ ಮಾಡಲಿದ್ದಾರೆ. ಹಾಗಾಗಿ ತಮ್ಮ ಸಿಬ್ಬಂದಿ ಹಾಗೂ ಬೆಂಬಲಿಗರಿಗಾಗಿ ಈ ವಾಹನಗಳನ್ನು ಪವನ್ ಕಲ್ಯಾಣ್ ಖರೀದಿಸಿದ್ದಾರೆ.

  ವಿಶೇಷ ಕ್ಯಾರಾವ್ಯಾನ್ ಸಿದ್ಧಮಾಡಿಕೊಂಡಿದ್ದಾರೆ

  ವಿಶೇಷ ಕ್ಯಾರಾವ್ಯಾನ್ ಸಿದ್ಧಮಾಡಿಕೊಂಡಿದ್ದಾರೆ

  ಆಂಧ್ರ ರಾಜಕೀಯದಲ್ಲಿ ಕಪ್ಪು ಬಣ್ಣದ ಸ್ಕಾರ್ಪಿಯೋಗೆ ತನ್ನದೇ ಆದ ಬೆಲೆ, ಗೌರವ ಇದೆ. ಯಾವುದೇ ರಫ್ ಆಂಡ್ ಟಫ್ ರಾಜಕಾರಣಿ ತನ್ನ ಕಾರಿನ ಹಿಂದೆ ಕೆಲವು ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರುಗಳನ್ನು ಹೊಂದಿರುತ್ತಾನೆ. ಫ್ರಾಕ್ಷನಿಸ್ಟ್‌ಗಳ ಮೆಚ್ಚಿನ ಕಾರು ಸ್ಕಾರ್ಪಿಯೋ. ಆಂಧ್ರದ ಹಲವು ರಾಜಕಾರಣಿಗಳು ತಮ್ಮ ಬೆಂಗಾವಲು ಕಾರುಗಳಾಗಿ ಸ್ಕಾರ್ಪಿಯೋ ಕಾರನ್ನು ಬಳಸುತ್ತಾರೆ. ಇದೀಗ ಪವನ್ ಕಲ್ಯಾಣ್ ಸಹ ಇದೇ ಕಾರು ಖರೀದಿಸಿದ್ದಾರೆ. ಜೊತೆಗೆ ತಮ್ಮ ರಾಜ್ಯ ಪ್ರವಾಸಕ್ಕಾಗಿ ಐಶಾರಾಮಿ ವಿಶೇಷ ಕ್ಯಾರಾವ್ಯಾನ್ ವಾಹನವನ್ನು ಸಹ ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ.

  English summary
  Actor, politician Pawan Kalyan purchased eight same cars for his party workers. He purchased eight Mahindra Scorpio cars.
  Monday, June 20, 2022, 11:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X