Just In
Don't Miss!
- News
ಬೆಳಗಾವಿಯಲ್ಲಿ ಕನ್ನಡಿಗರಾಗಿ ಪರಿವರ್ತನೆಯಾದವರ ಬಗ್ಗೆ ಸಮೀಕ್ಷೆ
- Education
SBI PO Mains Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Automobiles
ಹೋಂಡಾ ಗ್ರಾಜಿಯಾ 125 ಸ್ಪೋರ್ಟ್ಸ್ ಎಡಿಷನ್ ಟಿವಿಸಿ ಬಿಡುಗಡೆ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Sports
'ಗಬ್ಬಾ'ದಲ್ಲಿ ಮನಗೆದ್ದ ಭಾರತೀಯ ಬಡ ಆಟಗಾರರ ಮನಮುಟ್ಟುವ ಕತೆ!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಕೀಲ್ ಸಾಬ್ ಟೀಸರ್: ರಗಡ್ ವಕೀಲನಾಗಿ ಪವನ್ ಕಲ್ಯಾಣ್
ಪವನ್ ಕಲ್ಯಾಣ್ ಅಭಿಮಾನಿಗಳು ಬಹುನಿರೀಕ್ಷೆಯಿಂದ ಕಾಯುತ್ತಿದ್ದ 'ವಕೀಲ್ ಸಾಬ್' ಸಿನಿಮಾದ ಟೀಸರ್ ಸಕ್ರಾಂತಿಯಂದು ಬಿಡುಗಡೆ ಆಗಿದೆ.
ಮೂರು ವರ್ಷಗಳ ನಂತರ ಪವನ್ ಕಲ್ಯಾಣ್ ನಟಿಸುತ್ತಿರುವ 'ವಕೀಲ್ ಸಾಬ್' ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದ್ದು, ಪವನ್ ಕಲ್ಯಾಣ್ ಸಖತ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಕಾನೂನುಬದ್ಧ ನ್ಯಾಯಕ್ಕಾಗಿ ಹೋರಾಡುವ ವಕೀಲನಾಗಿ ಜೊತೆಗೆ ಅವಶ್ಯಕತೆ ಬಿದ್ದರೆ ಕಾನೂನು ಕೈಗೆತ್ತಿಕೊಂಡು ಪುಂಡರ ಮೂಳೆ ಮುರಿಯುವ ರಗಡ್ ವ್ಯಕ್ತಿಯಾಗಿ ಪವನ್ ಕಾಣಿಸಿಕೊಂಡಿದ್ದಾರೆ.

ಟೀಸರ್ ತುಂಬೆಲ್ಲಾ ಬರೀ ಪವನ್ ಕಲ್ಯಾಣ್
ಟೀಸರ್ ಅಂತೂ ಪವನ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತಿದೆ. ಇಡೀಯ ಟೀಸರ್‌ನಲ್ಲಿ ಪವನ್ ಕಲ್ಯಾಣ್ ಬಿಟ್ಟರೆ ಇನ್ನಾವ ಪಾತ್ರದಾರಿಗಳ ಮುಖವೂ ಕಾಣುವುದಿಲ್ಲ. ಟೀಸರ್ ತುಂಬೆಲ್ಲಾ ಪವನ್ ಕಲ್ಯಾಣ್ ಅವರೇ ತುಂಬಿದ್ದಾರೆ.

ಖಡಕ್ ಡೈಲಾಗ್ ಹೊಡೆಯುವ ಪವನ್
ಕಪ್ಪು ಕೋಟು ಧರಿಸಿ, 'ಅಬ್ಜೆಕ್ಷನ್ ಯುರ್ ಹಾನರ್' ಎನ್ನುವ ಪವನ್ ಕಲ್ಯಾಣ್, ' ಕೋಟು ಧರಿಸಿ ನ್ಯಾಯಾಲಯದಲ್ಲಿ ವಾದಿಸುವುದೂ ಗೊತ್ತು, ಅದೇ ಕೋಟು ಬಿಚ್ಚಿ ಹೊಡೆಯುವುದು ಗೊತ್ತು' ಎಂಬ ಡೈಲಾಗ್‌ಗಳನ್ನು ಹೊಡೆದಿದ್ದಾರೆ ಪವನ್ ಕಲ್ಯಾಣ್.

ಹಿಂದಿಯ ಪಿಂಕ್ ಸಿನಿಮಾ ರೀಮೇಕ್
'ವಕೀಲ್ ಸಾಬ್' ಸಿನಿಮಾವು ಹಿಂದಿಯ 'ಪಿಂಕ್' ಸಿನಿಮಾದ ರೀಮೇಕ್ ಆಗಿದೆ. ಆದರೆ ಮೂಲ ಸಿನಿಮಾಕ್ಕೂ 'ವಕೀಲ್ ಸಾಬ್' ಗೂ ಸಾಕಷ್ಟು ವ್ಯತ್ಯಾಸವಿದೆ. ಪವನ್ ಕಲ್ಯಾಣ್ ಅಭಿಮಾನಿಗಳ ನಿರೀಕ್ಷೆ ಹಾಗೂ ಪವನ್ ಕಲ್ಯಾಣ್ ಇಮೇಜ್ ಗೆ ತಕ್ಕಂತೆ ಸಿನಿಮಾದ ಕತೆಯನ್ನು ಬದಲಾವಣೆ ಮಾಡಲಾಗಿದೆ.

ಪವನ್ ಪ್ರೇಯಸಿಯಾಗಿ ಶ್ರುತಿ ಹಾಸನ್
'ವಕೀಲ್ ಸಾಬ್' ಸಿನಿಮಾದಲ್ಲಿ ಪವನ್ ಕಲ್ಯಾಣ್ ಪ್ರೇಯಸಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ. ಜೊತೆಗೆ ನಿವೇತಾ ಥಾಮಸ್, ಅಂಜಲಿ, ಅನನ್ಯಾ ನಾಗಲ್ಲ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ಶ್ರೀರಾಮ್ ವೇಣು ನಿರ್ದೇಶಿಸಿದ್ದಾರೆ. ನಿರ್ಮಾಣ ದಿಲ್ ರಾಜು ಅದ್ದು. ಸಂಗೀತ ನೀಡಿರುವವರು ಎಸ್ ತಮನ್.