For Quick Alerts
  ALLOW NOTIFICATIONS  
  For Daily Alerts

  ದಸರಾ ಹಬ್ಬಕ್ಕೆ ಪವನ್ ಕಲ್ಯಾಣ್ ಸರ್ಪ್ರೈಸ್ ಉಡುಗೊರೆ

  |

  2018ರಲ್ಲಿ ತೆರೆಕಂಡ 'ಅಜ್ಞಾತವಾಸಿ' ಚಿತ್ರದ ಬಳಿಕ ಪವನ್ ಕಲ್ಯಾಣ್ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಂಡರು. ಆಂಧ್ರ ಪ್ರದೇಶ ಚುನಾವಣೆಯಲ್ಲಿ ಸೋಲು ಸಹ ಕಂಡರು. ಇದೀಗ, ಮತ್ತೆ ಪವನ್ ಕಲ್ಯಾಣ್ ಟಾಲಿವುಡ್‌ಗೆ ಕಂಬ್ಯಾಕ್ ಮಾಡ್ತಿದ್ದಾರೆ.

  ಎರಡು ವರ್ಷದ ನಂತರ 'ವಕೀಲ್ ಸಾಬ್' ಚಿತ್ರದ ಮೂಲಕ ತೆಲುಗು ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಬಿಡುಗಡೆಗೆ ಪ್ಲಾನ್ ಮಾಡಿದೆ.

  ಪವನ್ ಕಲ್ಯಾಣ್ ಬಿಗ್‌ಬಜೆಟ್ ಸಿನಿಮಾ ನವೆಂಬರ್ ನಲ್ಲಿ ಪ್ರಾರಂಭ: ಹೆಸರೇನು ಗೊತ್ತೆ?ಪವನ್ ಕಲ್ಯಾಣ್ ಬಿಗ್‌ಬಜೆಟ್ ಸಿನಿಮಾ ನವೆಂಬರ್ ನಲ್ಲಿ ಪ್ರಾರಂಭ: ಹೆಸರೇನು ಗೊತ್ತೆ?

  ಈ ಮಧ್ಯೆ ದಸರಾ ಹಬ್ಬದ ಪ್ರಯುಕ್ತ ಚಿತ್ರದ ಟೀಸರ್ ರಿಲೀಸ್ ಮಾಡಲು ಮುಂದಾಗಿದೆ. ಅಕ್ಟೋಬರ್ 25 ರಂದು ಸಂಜೆ 5 ಗಂಟೆಗೆ ವಕೀಲ್ ಸಾಬ್ ಚಿತ್ರದ ಅಧಿಕೃತ ಟೀಸರ್ ಬಿಡುಗಡೆಯಾಗಲಿದೆ.

  ಅಂದ್ಹಾಗೆ, ಈ ಚಿತ್ರ ಹಿಂದಿಯ ಪಿಂಕ್ ಸಿನಿಮಾದ ರೀಮೇಕ್. ಹಿಂದಿಯಲ್ಲಿ ಸಿನಿಮಾ ನಿರ್ಮಿಸಿದ್ದ ಬೋನಿ ಕಪೂರ್ ಅವರೇ ತೆಲುಗಿನಲ್ಲೂ ಬಂಡವಾಳ ಹಾಕಿದ್ದಾರೆ. ಶ್ರೀರಾಮ್ ವೇಣು ಈ ಚಿತ್ರ ನಿರ್ದೇಶಿಸಿದ್ದಾರೆ.

  ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಪವನ್ ಕಲ್ಯಾಣ್ ಮಾಡಿದ್ದಾರೆ. ಪಿಕೆ ಜೊತೆಯಲ್ಲಿ ನಿವೇತಾ ಥಾಮಸ್, ಅಂಜನಲಿ, ಅನನ್ಯ ನಾಗಳ್ಳ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  English summary
  Power Star Pawan Kalyan's Vakeel Saab Teaser on October 25th 5 PM. this is Power Star's come back movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X