For Quick Alerts
  ALLOW NOTIFICATIONS  
  For Daily Alerts

  ಮಾಜಿ ಪತ್ನಿಯರಿಗೆ ಕೊಟ್ಟ ಹಣ, ಆಸ್ತಿಯ ಲೆಕ್ಕ ಕೊಟ್ಟ ಪವನ್ ಕಲ್ಯಾಣ್

  |

  ನಟ ಪವನ್ ಕಲ್ಯಾಣ್ ರಾಜಕಾರಣಿಯಾಗಿಯೂ ಆಂಧ್ರ ಹಾಗೂ ತೆಲಂಗಾಣ ರಾಜ್ಯದಲ್ಲಿ ಸಕ್ರಿಯರಾಗಿದ್ದಾರೆ. ಜನಸೇನಾ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿರುವ ಪವನ್ ಕಲ್ಯಾಣ್ ಆಂಧ್ರದಲ್ಲಿ ಆಡಳಿತಾರೂಢ ವೈಸಿಪಿ ಪಕ್ಷದ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿದೆ.

  ಇತ್ತೀಚೆಗೆ ವೈಸಿಪಿ ಪಕ್ಷದ ಕೊಡಲಿ ನಾನಿ, ನಟಿ, ರಾಜಕಾರಣಿ ರೋಜಾ ಇನ್ನಿತರರು ಪವನ್ ಕಲ್ಯಾಣ್ ಬಗ್ಗೆ ವೈಯಕ್ತಿಕ ಮಟ್ಟಕ್ಕಿಳಿದು ವಾಗ್ದಾಳಿ ನಡೆಸಿದ್ದರು. ಪವನ್ ಕಲ್ಯಾಣ್ ಮೂರು ವಿವಾಹವಾಗಿರುವ ಬಗ್ಗೆಯೂ ವೈಸಿಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಆಗಾಗ್ಗೆ ವಾಗ್ದಾಳಿ ಮಾಡುವುದುಂಟು.

  ಇಂದು ಮಂಗಳಗಿರಿಯಲ್ಲಿ ನಡೆದ ಜನಸೇನಾ ಪಕ್ಷದ ಕಾರ್ಯಕ್ರಮದಲ್ಲಿ ಅತ್ಯುಗ್ರವಾಗಿ ಮಾತನಾಡಿರುವ ಪವನ್ ಕಲ್ಯಾಣ್, ಕೈಯಲ್ಲಿ ಚಪ್ಪಲಿ ಹಿಡಿದು ವೈಸಿಪಿ ಪಕ್ಷದವರಿಗೆ ವಾರ್ನಿಂಗ್ ನೀಡಿದ್ದಾರೆ. ಇದರ ಜೊತೆಗೆ ತಮ್ಮ ಮೂರು ಮದುವೆ, ವಿಚ್ಛೇದನ ನೀಡಿದ ಇಬ್ಬರು ಪತ್ನಿಯರಿಗೆ ನೀಡಿದ ಹಣ, ಆಸ್ತಿಯ ಬಗ್ಗೆಯೂ ಮಾತನಾಡಿದ್ದಾರೆ.

  ಮಾಜಿ ಪತ್ನಿಯರಿಗೆ ಕೊಟ್ಟ ಹಣ-ಆಸ್ತಿ ಲೆಕ್ಕ

  ಮಾಜಿ ಪತ್ನಿಯರಿಗೆ ಕೊಟ್ಟ ಹಣ-ಆಸ್ತಿ ಲೆಕ್ಕ

  ''ಮಾತನಾಡಿದರೆ ಮೂರು ಮದುವೆ ಆದವನು ಎನ್ನುತ್ತೀರ. ಹೌದು ಮೂರು ಮದುವೆ ಆಗಿದ್ದೇನೆ. ನೀವು ಆಗಿರಿ ಬೇಡ ಎಂದವರ್ಯಾರು? ಮೊದಲು ಮದುವೆಯಾದೆ ಆದರೆ ಅದೇಕೋ ವರ್ಕೌಟ್ ಆಗಲಿಲ್ಲ. ಅವರಿಗೆ ಐದು ಕೋಟಿ ನೀಡಿ ವಿಚ್ಛೇಧನ ಪಡೆದೆ. ಬಳಿಕ ಎರಡನೇ ಮದುವೆ ಆದೆ ಅವರಿಗೆ ಉಳಿದ ಆಸ್ತಿಯನ್ನೆಲ್ಲ ಕೊಟ್ಟುಬಿಟ್ಟೆ. ಆ ನಂತರ ಹೌದು ಮೂರನೇ ಮದುವೆಯನ್ನೂ ಆಗಿದ್ದೇನೆ'' ಎಂದಿದ್ದಾರೆ ಪವನ್ ಕಲ್ಯಾಣ್.

  ಮನೆಗೆ ನುಗ್ಗಿ ಹೊಡೆಯುತ್ತೇನೆ ಎಂದ ಪವನ್

  ಮನೆಗೆ ನುಗ್ಗಿ ಹೊಡೆಯುತ್ತೇನೆ ಎಂದ ಪವನ್

  ''ನಾನು ಮೂರು ಮದುವೆ ಆಗಿರುವ ಬಗ್ಗೆ ಪದೇ ಪದೇ ಮಾತನಾಡುವ ನೀವು, ಒಂದು ಮದುವೆ ಆಗಿ ಮೂವತ್ತು ಹೆಣ್ಣುಗಳೊಂದಿಗೆ ಸಂಬಂಧ ಇರಿಸಿಕೊಂಡಿರುವ ಲಂಪಟರು ನೀವು. ನಿಮ್ಮ ಮನೆಗಳಿಗೆ ನುಗ್ಗಿ ಶರ್ಟ್ ಕಾಲರ್ ಹಿಡಿದು ದರ-ದರನೆ ಹೊರಗೆ ಎಳೆದುಕೊಂಡು ಬಂದು ಹೊಡೆಯುತ್ತೇನೆ ಜಾಗೃತೆ. ಇನ್ನೊಮ್ಮೆ ನನ್ನ ಬಗ್ಗೆ ಮಾತನಾಡೀರಿ ಎಚ್ಚರಿಕೆ'' ಎಂದಿದ್ದಾರೆ ಪವನ್ ಕಲ್ಯಾಣ್.

  ಕೇಸು ದಾಖಲಿಸಿದ್ದ ಮೊದಲ ಪತ್ನಿ!

  ಕೇಸು ದಾಖಲಿಸಿದ್ದ ಮೊದಲ ಪತ್ನಿ!

  ಪವನ್ ಕಲ್ಯಾಣ್ ಮೊದಲಿಗೆ 1997 ರಲ್ಲಿ ನಂದಿನಿ ಎಂಬುವರನ್ನು ಮದುವೆಯಾದರು ಆದರೆ ಆ ಮದುವೆ ಎರಡು ವರ್ಷಕ್ಕಿಂತಲೂ ಹೆಚ್ಚು ಸಮಯ ಇರಲಿಲ್ಲ. ವಿವಾಹಿತನಾಗಿದ್ದಾಗಲೇ ನಟಿ ರೇಣು ದೇಸಾಯಿ ಜೊತೆ ಲಿವ್‌ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು ಪವನ್ ಕಲ್ಯಾಣ್. ನಂದಿನಿ, ಪವನ್ ವಿರುದ್ಧ ಮರುಮದುವೆಯ ಪ್ರಕರಣ ದಾಖಲಿಸಿದರು. ಬಳಿಕ ಪವನ್ ಕಲ್ಯಾಣ್ 2007 ರಲ್ಲಿ 5 ಕೋಟಿ ರುಪಾಯಿ ಜೀವನಾಂಶ ನೀಡಿ ವಿಚ್ಛೇಧನ ಪಡೆದುಕೊಂಡರು.

  ರಷ್ಯನ್ ಮಹಿಳೆ ಅನ್ನಾ ಜೊತೆ ವಿವಾಹ

  ರಷ್ಯನ್ ಮಹಿಳೆ ಅನ್ನಾ ಜೊತೆ ವಿವಾಹ

  ಬಳಿಕ ರೇಣು ದೇಸಾಯಿಯನ್ನು ಪವನ್ ಕಲ್ಯಾಣ್ ವಿವಾಹವಾದರು. ಅವರೊಟ್ಟಿಗೆ ಎರಡು ಮಕ್ಕಳನ್ನು ಸಹ ಪಡೆದರು ಪವನ್ ಕಲ್ಯಾಣ್, ಬಳಿಕ 2012 ರಲ್ಲಿ ವಿಚ್ಛೇಧನ ಪಡೆದುಕೊಂಡು ಇಬ್ಬರೂ ದೂರಾದರು. ಇವರಿಗೆ ಆಸ್ತಿಯನ್ನು ಕೊಟ್ಟಿದ್ದೇನೆಂದು ಪವನ್ ಈಗ ಹೇಳಿಕೊಂಡಿದ್ದಾರೆ. ಬಳಿಕ ಪವನ್ ಕಲ್ಯಾಣ್ ತಮ್ಮ 'ತೀನ್ ಮಾರ್' ಸಿನಿಮಾದ ಚಿತ್ರೀಕರಣಕ್ಕೆ ರಷ್ಯಾಕ್ಕೆ ಹೋಗಿದ್ದಾಗ ಅಲ್ಲಿ ಅನ್ನಾ ಲೆಜ್ನೇವಾ ಹೆಸರಿನ ರಷ್ಯನ್ ಯುವತಿಯನ್ನು ಭೇಟಿಯಾದರು. ಅವರನ್ನು 2013 ರಲ್ಲಿ ವಿವಾಹವಾದರು ಬಳಿಕ ಅವರೊಂದಿಗೆ ಇಬ್ಬರು ಮಕ್ಕಳನ್ನು ಪಡೆದರು. ಇದೀಗ ಅನ್ನಾ ಜೊತೆಗೆ ವಾಸವಿದ್ದಾರೆ ಪವನ್ ಕಲ್ಯಾಣ್.

  English summary
  Actor and politician Pawan Kalyan said he gave 5 crore rs to his first wife Nandini and many valuable asset to second wife Renu Desai. He is now living with his third wife.
  Tuesday, October 18, 2022, 17:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X