For Quick Alerts
  ALLOW NOTIFICATIONS  
  For Daily Alerts

  ಏಕ್ದಂ ಸಂಭಾವನೆ ಹೆಚ್ಚಿಸಿಕೊಂಡ ನಟಿ ಪೂಜಾ ಹೆಗ್ಡೆ.!

  |

  ತಮಿಳಿನ 'ಮೂಗಮುಡಿ' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಟಿ ಪೂಜಾ ಹೆಗ್ಡೆ. ತೆಲುಗಿನ 'ಒಕ ಲೈಲಾ ಕೋಸಂ', 'ಮುಕುಂದ', 'ದುವ್ವದ ಜಗನ್ನಾಥಂ', 'ಸಾಕ್ಷ್ಯಂ', 'ಮಹರ್ಷಿ' ಚಿತ್ರಗಳ ಮೂಲಕ ಟಾಲಿವುಡ್ ನಲ್ಲಿ ಗುರುತಿಸಿಕೊಂಡವರು ಇದೇ ಪೂಜಾ ಹೆಗ್ಡೆ.

  ತೆಲುಗಿನಲ್ಲಿ ಸಖತ್ ಬಿಜಿಯಿರುವ ಈಕೆ ಬಾಲಿವುಡ್ ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಜೊತೆಗೆ 'ಮೊಹೆಂಜೊ ದಾರೋ' ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ನಟಿ ಪೂಜಾ ಹೆಗ್ಡೆಗೆ ಬಾಲಿವುಡ್ ನಲ್ಲೂ ಡಿಮ್ಯಾಂಡ್ ಇದೆ.

  ಪೂಜಾ ಹೆಗ್ಡೆ ಅಭಿನಯದ ಹಿಂದಿ ಚಿತ್ರ 'ಹೌಸ್ ಫುಲ್-4' ಹಿಟ್ ಆಗಿದೆ. ಹೀಗಾಗಿ, ಚಿತ್ರವೊಂದಕ್ಕೆ ಪೂಜಾ ಹೆಗ್ಡೆ ಪಡೆಯುವ ಸಂಭಾವನೆ 1.5 ಕೋಟಿ ದಾಟಿದ್ಯಂತೆ. ಪೂಜಾ ಹೆಗ್ಡೆ ನಟನೆಯ ತೆಲುಗು ಚಿತ್ರ 'ಅಲಾ ವೈಕುಂಠಪುರಮುಲೋ' ಇನ್ನೇನು ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಪೂಜಾ ಹೆಗ್ಡೆ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

  ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠಪುರಮುಲೋ' ಸಿನಿಮಾ ಹಿಟ್ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದ್ದರಿಂದ, ಸಿಕ್ಕಾಪಟ್ಟೆ ಆಫರ್ಸ್ ಹೊಂದಿರುವ ಪೂಜಾ ಹೆಗ್ಡೆ, ತಮ್ಮ ಸಂಭಾವನೆಯನ್ನ ಏಕ್ದಂ ಹೈಕ್ ಮಾಡಿಕೊಂಡಿದ್ದಾರೆ.

  ತಮ್ಮ ಮುಂದಿನ ಚಿತ್ರಕ್ಕೆ 2.5 ಕೋಟಿ ಸಂಭಾವನೆಯನ್ನ ಪೂಜಾ ಹೆಗ್ಡೆ ಕೇಳಿದ್ದಾರಂತೆ ಎಂಬ ಅಂತೆ-ಕಂತೆ ಸಿನಿ ಅಂಗಳದಲ್ಲಿ ಕೇಳಿಬರುತ್ತಿದೆ. ಅಂದ್ಹಾಗೆ, ಪೂಜಾ ಹೆಗ್ಡೆ ಸದ್ಯ 'ಜಾನ್' ಚಿತ್ರದಲ್ಲಿ ಬಿಜಿಯಿದ್ದಾರೆ. ಸಲ್ಮಾನ್ ಖಾನ್ ಜೊತೆಗೂ ಪೂಜಾ ಹೆಗ್ಡೆ ತೆರೆಹಂಚಿಕೊಳ್ಳುತ್ತಾರೆ ಎಂಬ ಸುದ್ದಿಯೂ ಇದೆ.

  English summary
  Pooja Hegde has hiked her remuneration for upcoming movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X