For Quick Alerts
  ALLOW NOTIFICATIONS  
  For Daily Alerts

  ತೆಲುಗು ಹೀರೋಗಳಿಗೆ ಅದೃಷ್ಟ ತಂದು ಕೊಟ್ಟ ಪೂಜಾ ಹೆಗ್ಡೆ

  |
  ನ್ಯೂಝೀಲ್ಯಾಂಡ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲ್ಲು ಅರ್ಜುನ್ | ALLU ARJUN | NEWZEALAND | FILMIBEAT KANNADA

  ನಟಿ ಪೂಜಾ ಹೆಗ್ಡೆ ತೆಲುಗು ಚಿತ್ರರಂಗದಲ್ಲಿ ಸದ್ಯ ಬೇಡಿಕೆಯ ನಟಿಯಾಗಿದ್ದಾರೆ. ಸ್ಟಾರ್ ನಟರ ಸಿನಿಮಾಗಳಿಗೆ ಪೂಜಾ ಮೊದಲ ಆಯ್ಕೆಯಾಗಿದ್ದಾರೆ.

  ಪೂಜಾ ಹೆಗ್ಡೆ ಯಾವ ನಟನಿಗೆ ಜೋಡಿಯಾಗುತ್ತಾರೋ ಆ ನಟನ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಮಾಡುತ್ತಿದೆ. ಸದ್ಯ, 'ಅಲ ವೈಕುಂಟಪುರಂ ಲೊ' ಸಿನಿಮಾದಲ್ಲಿ ಅಲ್ಲು ಅರ್ಜುನ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. 'ಅಲ ವೈಕುಂಟಪುರಂ ಲೊ' ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ದೊಡ್ಡ ಕಲೆಕ್ಷನ್ ಮಾಡಿದೆ.

  ಏಕ್ದಂ ಸಂಭಾವನೆ ಹೆಚ್ಚಿಸಿಕೊಂಡ ನಟಿ ಪೂಜಾ ಹೆಗ್ಡೆ.!ಏಕ್ದಂ ಸಂಭಾವನೆ ಹೆಚ್ಚಿಸಿಕೊಂಡ ನಟಿ ಪೂಜಾ ಹೆಗ್ಡೆ.!

  ಮಹೇಶ್ ಬಾಬು 'ಮಹರ್ಷಿ' ಸಿನಿಮಾಗೆ ಪೂಜಾ ಹೆಗ್ಡೆ ಹೀರೋಯಿನ್. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 175 ಕೋಟಿ ಗಳಿಕೆ ಮಾಡಿದೆ. ಇದು ಮಹೇಶ್ ಬಾಬು ಕೆರಿಯರ್ ನಲ್ಲಿಯೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿದೆ.

  'ರಂಗಸ್ಥಳಂ' ಸಿನಿಮಾ 214 ಕೋಟಿ ಗಳಿಕೆ ಮಾಡಿದೆ. ಇದು ರಾಮ್ ಚರಣ್ ಸಿನಿಮಾ ಕೆರಿಯರ್ ನಲ್ಲಿಯೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಗಿದೆ.

  ಬಾಲಿವುಡ್ ತುಂಬಾ ಪೂಜಾ ಹೆಗ್ಡೆ ಪ್ಯಾರ್ ಬಗ್ಗೆ ಗುಲ್ಲೋ ಗುಲ್ಲು.!ಬಾಲಿವುಡ್ ತುಂಬಾ ಪೂಜಾ ಹೆಗ್ಡೆ ಪ್ಯಾರ್ ಬಗ್ಗೆ ಗುಲ್ಲೋ ಗುಲ್ಲು.!

  'ಅರವಿಂದ್ ಸಮೇತ' ಸಿನಿಮಾ ಜೂನಿಯರ್ ಎನ್ ಟಿ ಆರ್ ಕೆರಿಯರ್ ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಗಳಿಕೆ 158 ಕೋಟಿ. ವಿಶೇಷ ಅಂದರೆ, ಈ ಸಿನಿಮಾದ ನಾಯಕಿ ಕೂಡ ಪೂಜಾ ಹೆಗ್ಡೆ.

  ಈ ರೀತಿ ಸ್ಟಾರ್ ಹೀರೋಗಳ ಜೊತೆಗೆ ಪೂಜಾ ಹೆಗ್ಡೆ ನಟಿಸಿದ ಎಲ್ಲ ಸಿನಿಮಾಗಳು ಅವರ ಕೆರಿಯರ್ ನ ಬೆಸ್ಟ್ ಸಿನಿಮಾಗಳಾಗಿವೆ.

  English summary
  Actress Pooja Hegde lucky girl for telugu heros.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X