For Quick Alerts
  ALLOW NOTIFICATIONS  
  For Daily Alerts

  ಕಾಜಲ್ ಜೊತೆಗೆ ಆಚಾರ್ಯ ಚಿತ್ರಕ್ಕೆ ಮತ್ತೊರ್ವ ಸ್ಟಾರ್ ನಟಿ ಎಂಟ್ರಿ?

  |

  ಮೆಗಾಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಚಿತ್ರದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಕಾಜಲ್ ಅಗರ್‌ವಾಲ್ ಈ ಚಿತ್ರದಲ್ಲಿ ನಾಯಕಿಯಾಗಿದ್ದು, ಚಿರುಗೆ ಜೋಡಿಯಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ರಾಮ್ ಚರಣ್ ತೇಜ ಸಹ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

  ಇದೀಗ, ಆಚಾರ್ಯ ಚಿತ್ರತಂಡಕ್ಕೆ ಮತ್ತೊರ್ವ ಸ್ಟಾರ್ ನಟಿ ಎಂಟ್ರಿಯಾಗುತ್ತಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಪಿಂಕ್ ವಿಲ್ ವೆಬ್‌ಸೈಟ್ ಸುದ್ದಿ ಮಾಡಿರುವಂತೆ ಪೂಜಾ ಹೆಗ್ಡೆ ಆಚಾರ್ಯ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  'ದಕ್ಷಿಣ ಭಾರತ ಸಿನಿಮಾದಲ್ಲಿ ಸೊಂಟ ತೋರಿಸಿದರೆ ಸಾಕು': ಪೂಜಾ ಹೆಗ್ಡೆ ವಿವಾದ

  ಈ ಚಿತ್ರದಲ್ಲಿ ರಾಮ್ ಚರಣ್ ತೇಜ ಅವರಿಗೆ ಜೋಡಿಯಾಗಿ ಪೂಜಾ ಹೆಗ್ಡೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಕುರಿತು ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ, ಮೂಲಗಳ ಈ ವಿಚಾರವನ್ನು ಬಹಿರಂಗಪಡಿಸಿವೆ.

  ಈ ಹಿಂದೆ ರಾಮ್ ಚರಣ್ ತೇಜ ನಟಿಸಿದ್ದ ರಂಗಸ್ಥಲಂ ಚಿತ್ರದಲ್ಲಿ ಹಾಡೊಂದಕ್ಕೆ ಪೂಜಾ ಹೆಗ್ಡೆ ಹೆಜ್ಜೆ ಹಾಕಿದ್ದರು. ಅದನ್ನು ಬಿಟ್ಟರೆ ಇದುವರೆಗೂ ಮೆಗಾಹೀರೋ ಜೊತೆ ಸ್ಕ್ರೀನ್ ಶೇರ್ ಮಾಡಿಲ್ಲ. ಬಹುಶಃ ಆಚಾರ್ಯ ಚಿತ್ರದ ಮೂಲಕ ಈ ಜೋಡಿ ಮೊದಲ ಸಲ ಒಂದಾಗಬಹುದು.

  ಕೊರಟಲಾ ಶಿವ ಈ ಚಿತ್ರ ನಿರ್ದೇಶನ ಮಾಡ್ತಿದ್ದು, ಆರಂಭದಲ್ಲಿ ತ್ರಿಷಾ ಕೃಷ್ಣನ್ ನಾಯಕಿ ಎಂದು ಹೇಳಲಾಗಿತ್ತು. ನಂತರ ತ್ರಿಷಾ ಈ ಪ್ರಾಜೆಕ್ಟ್‌ನಿಂದ ಹಿಂದೆ ಸರಿದರು. ಕಾಜಲ್ ಅಗರ್ ವಾಲ್ ಬಂದರು.

  ಮೆಗಾ ಸ್ಟಾರ್ ಚಿರಂಜೀವಿ 'ಆಚಾರ್ಯ' ಸಿನಿಮಾದಲ್ಲಿ ಕನ್ನಡದ ಖ್ಯಾತ ನಟ

  ಅಂದ್ಹಾಗೆ, ಆಚಾರ್ಯ ಚಿತ್ರದಲ್ಲಿ ರಾಮ್ ಚರಣ್ ತೇಜ ಅತಿಥಿ ಪಾತ್ರ ನಿರ್ವಹಿಸುತ್ತಿದ್ದಾರೆ. ಪೂಜಾ ಹೆಗ್ಡೆ ಅವರದ್ದು ಸಹ ಅತಿಥಿ ಪಾತ್ರವೇ ಆಗಿರಲಿದೆ. ಇನ್ನುಳಿದಂತೆ ಪೂಜಾ ನಟನೆಯ ರಾಧೇ ಶ್ಯಾಮ್ ಹಾಗೂ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಚಿತ್ರಗಳು ಬಿಡುಗಡೆಗೆ ಸಜ್ಜಾಗಿದೆ.

  Jayashree ಮಾಡಿದ ಮೆಸೇಜ್ ಸ್ಕ್ರೀನ್ ಶಾಟ್ ಹಂಚಿಕೊಂಡ Rekha Rani | Filmibeat Kannada
  English summary
  Indian actress Pooja Hegde will be pairing up with Ram Charan in Acharya movie says source.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X