ದಕ್ಷಿಣ ಭಾರತದ ಖ್ಯಾತ ಹಾಸ್ಯ ನಟ ಸುತ್ತಿ ವೇಲು ಇನ್ನಿಲ್ಲ

ಸುದೀರ್ಘ ಸಮಯದಿಂದ ಹೃದ್ರೋಗದಿಂದ ಬಳಲುತ್ತಿದ್ದ ಅವರು ಭಾನುವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಕರಾವಳಿ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯವರಾದ ಸುತ್ತಿ ವೇಲು ಬೆಳ್ಳಿಪರದೆಗೆ 1980ರಲ್ಲಿ ಅಡಿಯಿಟ್ಟರು. ಬಳಿಕ ಅವರು ಸುಮಾರು 200ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ನಟ ಚಿರಂಜೀವಿ ಜೊತೆ ಅಭಿನಯದ ಚೆಂಟಬ್ಬಾಯಿ ಹಾಗೂ ನಾಲುಗು ಸ್ತಂಭಾಲಾಟ ಚಿತ್ರಗಳ ಮೂಲಕ ಅವರು ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ತಮ್ಮದೇ ಆದಂತಹ ಹಾಸ್ಯ ಶೈಲಿಗೆ ಹೆಸರಾಗಿದ್ದ ಸುತ್ತಿ ವೇಲು ಅವರಿಗೆ ಆಂಧ್ರ ಪ್ರದೇಶದ ಸರ್ಕಾರ ಕೊಡುವ ನಂದಿ ಪ್ರಶಸ್ತಿ ಪುರಸ್ಕೃತರು. ಸುತ್ತಿ ವೇಲು ಅವರಿಗೆ ಮೂವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದಾನೆ. ಅವರ ಅಂತಿಮ ಸಂಸ್ಕಾರ ಚೆನ್ನೈನಲ್ಲಿ ಭಾನುವಾರ ಸಂಜೆ ನೆರವೇರಿತು. (ಏಜೆನ್ಸೀಸ್)
More from Filmibeat
English summary
Telugu films comedy actor K Lakshmi Narasimha Rao, popularly known as Sutti Velu, died in Chennai today. He was 65. Sutti Velu had been unwell for some time and the end came early today following a heart-related problem.


Click it and Unblock the Notifications











