ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ ಪ್ರಭಾಸ್: ಜುಲೈ 10ರಂದು ಫಸ್ಟ್ ಲುಕ್ ರಿಲೀಸ್

By Avani Malnad

ಪ್ರಭಾಸ್ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಅವರ ಮುಂಬರುವ ಚಿತ್ರದ ಫಸ್ಟ್ ಲುಕ್ ಮತ್ತು ಶೀರ್ಷಿಕೆ ಜುಲೈ 10ರಂದು ಬಿಡುಗಡೆಯಾಗಲಿದೆ. 'ಪ್ರಭಾಸ್ 20' ಎಂಬ ತಾತ್ಕಾಲಿಕ ಶೀರ್ಷಿಕೆಯ ಚಿತ್ರ ಹಲವು ಸಮಯದಿಂದ ಸುದ್ದಿಯಲ್ಲಿದೆ. ಪ್ರಭಾಸ್ ಫ್ಯಾನ್ಸ್ ಕಾತರದಿಂದ ಕಾಯುತ್ತಿರುವ ಚಿತ್ರದ ಬಗ್ಗೆ ಹೊಸ ಅಪ್‌ಡೇಟ್ ಅವರಿಗೆ ಖುಷಿ ನೀಡಿದೆ.

ರಾಧಾಕೃಷ್ಣ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಎರಡು ವರ್ಷಗಳಿಂದ ಸಿನಿಮಾ ತಯಾರಿ ನಡೆಯುತ್ತಿದೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ಪೂರ್ಣಗೊಳಿಸಿ ಮುಂದಿನ ವರ್ಷ ತೆರೆಗೆ ತರಲು ಚಿತ್ರತಂಡ ಉದ್ದೇಶಿಸಿದೆ. ಅದರ ಫಸ್ಟ್ ಲುಕ್ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಅನಾವರಣಗೊಳ್ಳಲಿದೆ. ಮುಂದೆ ಓದಿ...

ಶೀರ್ಷಿಕೆ ಮತ್ತು ಫಸ್ಟ್ ಲುಕ್

ಶೀರ್ಷಿಕೆ ಮತ್ತು ಫಸ್ಟ್ ಲುಕ್

'ಪ್ರಭಾಸ್ 20'ರ ನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ ಈ ಅಚ್ಚರಿಯ ಪ್ರಕಟಣೆ ನೀಡಿದೆ. ಜುಲೈ 10ರಂದು ಬೆಳಿಗ್ಗೆ 10 ಗಂಟೆಗೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ನೈಜ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಬಿಡುಗಡೆಯಾಗಲಿದೆ ಎಂದು ಟ್ವಿಟ್ಟರ್‌ನಲ್ಲಿ ಅದು ತಿಳಿಸಿದೆ.

ಕನ್ನಡದಲ್ಲಿ ಬಿಡುಗಡೆಯಿಲ್ಲ?

ಕನ್ನಡದಲ್ಲಿ ಬಿಡುಗಡೆಯಿಲ್ಲ?

ಈ ಚಿತ್ರದ ಪೋಸ್ಟರ್ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಕೂಡ ಬಿಡುಗಡೆಯಾಗಲಿದೆ ಎನ್ನಲಾಗಿದೆ. ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಆದರೆ ಕನ್ನಡದಲ್ಲಿ ಪೋಸ್ಟರ್ ಬಿಡುಗಡೆಯ ಪ್ರಸ್ತಾಪವಿಲ್ಲ. ಹೀಗಾಗಿ ಕನ್ನಡಕ್ಕೆ ಈ ಚಿತ್ರ ಡಬ್ ಆಗಿ ಬಿಡುಗಡೆಯಾಗುವುದು ಅನುಮಾನ.

ಜೋತಿಷಿಯ ಪಾತ್ರದಲ್ಲಿ ಪ್ರಭಾಸ್?

ಜೋತಿಷಿಯ ಪಾತ್ರದಲ್ಲಿ ಪ್ರಭಾಸ್?

'ಪ್ರಭಾಸ್ 20' ಕಾಲಾಂತರದ ಪ್ರೇಮಕಥೆಯ ಚಿತ್ರವಾಗಿದ್ದು, ಇಟಲಿ ದೇಶದ ಹಿನ್ನೆಲೆಯನ್ನು ಹೊಂದಿದೆ ಎನ್ನಲಾಗಿದೆ. ಪ್ರಭಾಸ್ ಇದರಲ್ಲಿ ಜೋತಿಷಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಪೂಜಾ ಹೆಗ್ಡೆ ರಾಜಕುಮಾರಿಯಾಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದರ ಬಗ್ಗೆ ಚಿತ್ರತಂಡ ಅಧಿಕೃತ ವಿವರಣೆ ನೀಡಿಲ್ಲ.

ಜಾರ್ಜಿಯಾದಲ್ಲಿ ಚಿತ್ರೀಕರಣ

ಜಾರ್ಜಿಯಾದಲ್ಲಿ ಚಿತ್ರೀಕರಣ

ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಲ್ಲದೆ, ಪ್ರಿಯದರ್ಶಿನಿ ಹಾಗೂ ಬಾಲಿವುಡ್ ನಟ ಭಾಗ್ಯಶ್ರೀ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಭಾಗ್ಯಶ್ರೀ, ಯುರೋಪ್‌ನಲ್ಲಿ 1970ರ ಅವಧಿಯಲ್ಲಿ ನಡೆಯುವ ಕಥೆ ಇದು. ಇದು ಮೂಲತಃ ಲವ್ ಸ್ಟೋರಿ ಎಂದು ಮಾಹಿತಿ ನೀಡಿದ್ದರು. ಲಾಕ್ ಡೌನ್ ಆರಂಭಕ್ಕೂ ಮುನ್ನ ಚಿತ್ರತಂಡ ಜಾರ್ಜಿಯಾದಲ್ಲಿ ಸುಮಾರು 20 ದೃಶ್ಯಗಳನ್ನು ಸೆರೆಹಿಡಿದಿತ್ತು.

More from Filmibeat

English summary
Telugu actor Prabhas starrer Prabhas 20's title, first look posters to be released on 10th July.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X