For Quick Alerts
  ALLOW NOTIFICATIONS  
  For Daily Alerts

  'ಆದಿಪುರುಷ್' ರಿಲೀಸ್‌ಗೆ ಇಟ್ಟಿರೋ ಹೊಸ ಮುಹೂರ್ತನೂ ಸರಿಯಿಲ್ಲ: ಪ್ರಭಾಸ್‌ಗೆ ಸಂಕಷ್ಟ ತಪ್ಪಿದ್ದಲ್ಲ!

  |

  ಪ್ರಭಾಸ್ ಸಿನಿಮಾ 'ಆದಿಪುರುಷ್'ಗಾಗಿ ಎಲ್ಲರೂ ಎದುರು ನೋಡುತ್ತಿದ್ದರು. ರಾಮನ ಅವತಾರದಲ್ಲಿ ಯಂಗ್ ರೆಬೆಲ್‌ಸ್ಟಾರ್ ನೋಡಲು ತುದಿಗಾಲಲ್ಲಿ ನಿಂತಿದ್ದರು. ಅಭಿಮಾನಿಗಳ ನಿರೀಕ್ಷೆಯಂತೆ ದಸರಾಗೆ ಚಿಕ್ಕದೊಂದು ಟೀಸರ್ ರಿಲೀಸ್ ಮಾಡಿದ್ದರು. ಇಲ್ಲಿಂದ ಇಡೀ ತಂಡ ಇಕ್ಕಟ್ಟಿಗೆ ಸಿಲುಕುತ್ತಲೇ ಇದೆ.

  'ಆದಿಪುರುಷ್' ಟೀಸರ್ ಸಿನಿಪ್ರಿಯರಿಗೆ ಇಷ್ಟ ಆಗಲಿಲ್ಲ. ಸಿನಿಮಾದ ಒಂದೊಂದು ಫ್ರೇಮ್ ಅನ್ನೂ ಇಟ್ಟು ಟ್ರೋಲ್ ಮಾಡಲು ಶುರು ಮಾಡಿದ್ದರು. ಇನ್ನು ಟೀಸರ್ ಟ್ರೋಲ್ ಆಗಿದ್ದು ನೋಡಿ, 2023ರ ಜನವರಿ 12ರಂದು ರಿಲೀಸ್ ಆಗಬೇಕಿದ್ದು ಸಿನಿಮಾವನ್ನು ಪೋಸ್ಟ್‌ ಪೋನ್ ಮಾಡಲು ಮುಂದಾಗಿದ್ದರು.

  'ಆದಿಪುರುಷ್' ಗ್ರಾಫಿಕ್ಸ್ ಬಗ್ಗೆ ರೊಚ್ಚಿಗೆದ್ದ ಫ್ಯಾನ್ಸ್: ಬಹಿರಂಗ ಪತ್ರ ಬರೆದ ಗ್ರಾಫಿಕ್ಸ್ ಕಂಪನಿ!'ಆದಿಪುರುಷ್' ಗ್ರಾಫಿಕ್ಸ್ ಬಗ್ಗೆ ರೊಚ್ಚಿಗೆದ್ದ ಫ್ಯಾನ್ಸ್: ಬಹಿರಂಗ ಪತ್ರ ಬರೆದ ಗ್ರಾಫಿಕ್ಸ್ ಕಂಪನಿ!

  ಅಭಿಮಾನಿಗಳು ನಿರೀಕ್ಷೆ ಮಾಡಿದ್ದಂತೆ 'ಆದಿಪುರುಷ್' ತಂಡ ಸಿನಿಮಾ ರಿಲೀಸ್ ಡೇಟ್ ಅನ್ನು ಪೋಸ್ಟ್‌ಪೋನ್ ಮಾಡಿದ್ದಾರೆ. ಜೊತೆಗೆ ಹೊಸ ರಿಲೀಸ್ ಡೇಟ್‌ ಅನ್ನೂ ಅನೌನ್ಸ್ ಮಾಡಿದ್ದಾರೆ. ಆದ್ರೀಗ ಆದೂ ಕೂಡ ಪ್ರಭಾಸ್ ಅಭಿಮಾನಿಗಳ ನಿದ್ದೆಕೆಡಿಸಿದೆ. ಅದಕ್ಕೆ ಕಾರಣವೇನು ಅಂತ ತಿಳಿಯಲು ಮುಂದೆ ಓದಿ.

  ಸಂಕಷ್ಟ ತಂದ 'ಆದಿಪುರುಷ್' ಹೊಸ ರಿಲೀಸ್ ಡೇಟ್‌

  ಸಂಕಷ್ಟ ತಂದ 'ಆದಿಪುರುಷ್' ಹೊಸ ರಿಲೀಸ್ ಡೇಟ್‌

  'ಆದಿಪುರುಷ್' ಟೀಸರ್ ರಿಲೀಸ್ ಆದಲ್ಲಿಂದ ಸಿನಿಮಾ ವಿವಾದದಲ್ಲಿಯೇ ಸಿಕ್ಕಿಕೊಂಡಿದೆ. ಯಂಗ್ ರೆಬೆಲ್ ಅಭಿಮಾನಿಗಳು ಸಿನಿಮಾ ಮೇಲೆ ಇಟ್ಟುಕೊಂಡಿದ್ದ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ನಿರ್ದೇಶಕ ಓಂ ರಾವತ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಹೀಗಾಗಿ 'ಆದಿಪುರುಷ್' ಗ್ರಾಫಿಕ್ಸ್ ಮೇಲೆ ಚಿತ್ರತಂಡ ವರ್ಕ್‌ಔಟ್ ಮಾಡುತ್ತಿದೆ. ಈ ಕಾರಣಕ್ಕೆ ಸಿನಿಮಾ ಬಿಡುಗಡೆಯನ್ನು ಹೆಚ್ಚು ಕಡಿಮೆ 6 ತಿಂಗಳು ಮುಂದೂಡಿದೆ. ಆದ್ರೀಗ ಆ ದಿನ ಕೂಡ ಸರಿಯಿಲ್ಲ ಎನ್ನುತ್ತಿದ್ದಾರೆ.

  ದೊಡ್ಡ ಸಿನಿಮಾ ಜೊತೆ 'ಆದಿಪುರುಷ್' ಸೆಣೆಸಾಟ!

  ದೊಡ್ಡ ಸಿನಿಮಾ ಜೊತೆ 'ಆದಿಪುರುಷ್' ಸೆಣೆಸಾಟ!

  'ಆದಿಪುರುಷ್' ಸಿನಿಮಾ ಮುಂದಿನ ವರ್ಷ ಜೂನ್ 16ರಂದು ರಿಲೀಸ್ ಆಗುತ್ತಿದೆ. ಆದರೆ, ಇದೇ ದಿನ ಹಾಲಿವುಡ್‌ ಮೂರು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿದೆ. ಜೂನ್ 2ರಂದು ಮೋಸ್ಟ್‌ ಎಕ್ಸ್‌ಪೆಕ್ಟೆಡ್ ಸಿನಿಮಾ 'ಸೈಡರ್ ಮ್ಯಾನ್: ಎಕ್ರಾಸ್‌ ದಿ ಸ್ಪೈಡರ್ ವರ್ಸ್' ರಿಲೀಸ್ ಆಗುತ್ತಿದೆ. ಜೂನ್ 9ರಂದು 'ಟ್ರಾನ್ಸ್‌ಫಾರ್ಮರ್ಸ್: ರೈಸ್‌ ಆಫ್‌ ದಿ ಬೀಸ್ಟ್', ಹಾಗೇ ಜೂನ್ 23ಕ್ಕೆ 'ದಿ ಫ್ಲ್ಯಾಶ್' ಬಿಡುಗಡೆಯಾಗುತ್ತಿದೆ. ಹೀಗಾಗಿ ಹಾಲಿವುಡ್ ಸಿನಿಮಾ ಜೊತೆ ಸೆಣೆಸಾಡಬೇಕಿದೆ.

  'ಆದಿಪುರುಷ್' ಸಿನಿಮಾ ಜವಾನ್ ಟಕ್ಕರ್!

  'ಆದಿಪುರುಷ್' ಸಿನಿಮಾ ಜವಾನ್ ಟಕ್ಕರ್!

  ಶಾರುಖ್ ಖಾನ್ ಅಭಿನಯದ ಸಿನಿಮಾ 'ಜವಾನ್' ಸಿನಿಮಾ ಕೂಡ ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಈ ಸಿನಿಮಾವನ್ನು ಅಟ್ಲಿ ನಿರ್ದೇಶನ ಮಾಡುತ್ತಿದ್ದು, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿಯೂ ಬಿಡುಗಡೆಯಾಗುತ್ತಿದೆ. ಈ ಕಾರಣಕ್ಕೆ ಸೌತ್‌ನಲ್ಲೂ ಸಿನಿಮಾ ಗ್ರ್ಯಾಂಡ್‌ ಕಮ್ಮಿ ಅಂದ್ರೂ ಮೂರು ವಾರ ಥಿಯೇಟರ್‌ನಲ್ಲಿ ಇರುತ್ತೆ ಅನ್ನೋ ನಿರೀಕ್ಷೆಯಿದೆ. ಒಂದು ವೇಳೆ ಸಿನಿಮಾ ಕ್ಲಿಕ್ ಆದರೆ, 'ಆದಿಪುರುಷ್'ಗೆ ಥಿಯೇಟರ್‌ ಸಿಗೋದು ಅನುಮಾನ.

  ಮಳೆಗಾಲ.. ಶಾಲೆಗಳು ಪುನರಾರಂಭ

  ಮಳೆಗಾಲ.. ಶಾಲೆಗಳು ಪುನರಾರಂಭ

  'ಆದಿಪುರುಷ್' ಸಿನಿಮಾ ಜೂನ್‌ನಲ್ಲಿ ರಿಲೀಸ್ ಆಗುತ್ತಿರುವುದಕ್ಕೆ ಫ್ಯಾನ್ಸ್ ಕಿಡಿಕಾರುತ್ತಿದ್ದಾರೆ. ಜೂನ್ ತಿಂಗಳಲ್ಲಿ ಮಳೆಗಾಲ ಆರಂಭ ಆಗಿರುತ್ತೆ. ಅಲ್ಲದೆ ಶಾಲೆಗಳು ಆರಂಭ ಆಗಿರುತ್ತವೆ. ಈ ವೇಳೆ ಫ್ಯಾಮಿಲಿ ಸಿನಿಮಾಗಳ ಕಡೆ ಗಮನ ಹರಿಸೋದಿಲ್ಲ ಅನ್ನೋ ಮಾತಿದೆ. ಹೀಗಾಗಿ ಜೂನ್ 16 'ಆದಿಪುರುಷ್' ಬಿಡುಗಡೆಗೆ ಒಳ್ಳೆ ದಿನ ಅಲ್ಲ ಅಂತಿದ್ದಾರೆ.

  ವೇದಿಕೆ ಮೇಲೆ ಬೆವರುತ್ತಿದ್ದ ಪ್ರಭಾಸ್‌ಗೆ ದುಪ್ಪಟ್ಟ ಕೊಟ್ಟ ಕೃತಿ ಸನನ್: ಫ್ಯಾನ್ಸ್‌ಗೆ ಅನುಮಾನ!ವೇದಿಕೆ ಮೇಲೆ ಬೆವರುತ್ತಿದ್ದ ಪ್ರಭಾಸ್‌ಗೆ ದುಪ್ಪಟ್ಟ ಕೊಟ್ಟ ಕೃತಿ ಸನನ್: ಫ್ಯಾನ್ಸ್‌ಗೆ ಅನುಮಾನ!

  English summary
  Prabhas Adipurush Makers Picked Worst Date Ahead Of Big Movie Releases, Know More.
  Monday, November 7, 2022, 20:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X