twitter
    For Quick Alerts
    ALLOW NOTIFICATIONS  
    For Daily Alerts

    ಹೈದರಾಬಾದ್‌ ಪ್ರವಾಹ: ಸಂತ್ರಸ್ಥರ ನೆರವು ಧಾವಿಸಿದ ಚಿರಂಜೀವಿ-ಪ್ರಭಾಸ್

    |

    ಮಹೇಶ್ ಬಾಬು, ಜೂನಿಯರ್ ಎನ್ ಟಿ ಆರ್, ವಿಜಯ್ ದೇವರಕೊಂಡ ಬಳಿಕ ತೆಲುಗು ನಟ ಪ್ರಭಾಸ್ ಮತ್ತು ಮೆಗಾಸ್ಟಾರ್ ಚಿರಂಜೀವಿ ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೊಡ್ಡ ಮಟ್ಟದ ನೆರವು ಘೋಷಿಸಿದ್ದಾರೆ.

    ತೀವ್ರ ಮಳೆಯಿಂದಾಗಿ ಹೈದರಾಬಾದ್‌ನಲ್ಲಿ ಉಂಟಾಗಿರುವ ಪ್ರವಾಹದಿಂದ ಜನರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಸುಮಾರು 37 ಸಾವಿರಕ್ಕೂ ಹೆಚ್ಚು ಕುಟುಂಬಗಳು ಆಸ್ತಿ-ಪಾಸ್ತಿ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾರ್ವಜನಿಕರ ಜೊತೆ ತೆಲುಗು ಸ್ಟಾರ್ ನಟರು ನಿಂತಿದ್ದು, ಹೈದರಾಬಾದ್ ಪುನರ್ವಸತಿಗಾಗಿ ಧನಸಹಾಯ ಮಾಡುತ್ತಿದ್ದಾರೆ. ಮುಂದೆ ಓದಿ...

    1.5 ಕೋಟಿ ನೀಡಿದ ಪ್ರಭಾಸ್

    1.5 ಕೋಟಿ ನೀಡಿದ ಪ್ರಭಾಸ್

    ಹೈದರಾಬಾದ್ ಪುನರ್ವಸತಿಗಾಗಿ ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ತೆಲುಗು ನಟ ಪ್ರಭಾಸ್ 1.5 ಕೋಟಿ ದೇಣಿಗೆ ನೀಡಿದ್ದಾರೆ ಎಂದು ದಕ್ಷಿಣ ಭಾರತದ ಖ್ಯಾತ ನಿರ್ಮಾಪಕ ಹಾಗೂ ಪಿಆರ್ ರಾಜು ತಿಳಿಸಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

    ಹೈದರಾಬಾದ್‌ ಪ್ರವಾಹ: ನೆರವಿಗೆ ನಿಂತ ಮಹೇಶ್ ಬಾಬು, ಜೂ ಎನ್‌ಟಿಆರ್, ದೇವರಕೊಂಡಹೈದರಾಬಾದ್‌ ಪ್ರವಾಹ: ನೆರವಿಗೆ ನಿಂತ ಮಹೇಶ್ ಬಾಬು, ಜೂ ಎನ್‌ಟಿಆರ್, ದೇವರಕೊಂಡ

    1 ಕೋಟಿ ನೀಡಿದ ಚಿರಂಜೀವಿ

    1 ಕೋಟಿ ನೀಡಿದ ಚಿರಂಜೀವಿ

    ಹೈದರಾಬಾದ್ ಜನರ ನೋವಿಗೆ ಸ್ಪಂದಿಸಿರುವ ಮೆಗಾಸ್ಟಾರ್ ಚಿರಂಜೀವಿ ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ನೆರವು ಘೋಷಿಸಿದ್ದಾರೆ. ಆದಷ್ಟೂ ಬೇಗ ಹೈದರಾಬಾದ್ ಮೊದಲಿನಂತೆ ಆಗಬೇಕು ಎಂದು ಪ್ರಾರ್ಥಿಸಿದ್ದಾರೆ.

    50 ಲಕ್ಷ ನೀಡಿದ ನಾಗಾರ್ಜುನ

    50 ಲಕ್ಷ ನೀಡಿದ ನಾಗಾರ್ಜುನ

    ಹೈದರಾಬಾದ್ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗಾಗಿ ಅಕ್ಕಿನೇನಿ ನಾಗಾರ್ಜುನ ಸಹ ಸಹಾಯ ಮಾಡಿದ್ದು, ಸಿಎಂ ಪರಿಹಾರ ನಿಧಿಗೆ 50 ಲಕ್ಷ ಘೋಷಿಸಿದ್ದಾರೆ.

    ಸ್ಟಾರ್ ನಟರು ಕೊಡುಗೆ

    ಸ್ಟಾರ್ ನಟರು ಕೊಡುಗೆ

    ಈಗಾಗಲೇ ಸಿಎಂ ರಿಲೀಫ್ ಫಂಡ್‌ಗೆ ಮಹೇಶ್ ಬಾಬು 1 ಕೋಟಿ, ಜೂನಿಯರ್ ಎನ್‌ಟಿಆರ್ 50 ಲಕ್ಷ, ವಿಜಯ್ ದೇವರಕೊಂಡ 10 ಲಕ್ಷ ನೆರವು ನೀಡಿದ್ದಾರೆ. ಪ್ರವಾಹಕ್ಕೆ ತುತ್ತಾಗಿರುವ ಜನರಿಗೆ ಪುನರ್ವಸತಿ ಕಲ್ಪಿಸುವಂತೆ ಸಿಎಂಗೆ ಮನವಿ ಮಾಡಿದ್ದಾರೆ.

    English summary
    Hyderbad Flood: Telugu actor Prabhas donates 1.5 Crore and chiranjeevi donates 1 Crore and Nagarjuna donates 50 lakh to telangana CM relief fund for hyderabad.
    Wednesday, October 21, 2020, 14:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X