For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಸಿನಿಮಾ ಕಥೆ ಏನಾಯಿತು? ಇಲ್ಲಿದೆ ಮಾಹಿತಿ

  By ಫಿಲ್ಮ್ ಡೆಸ್ಕ್
  |

  ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿರುವ ಪ್ರಭಾಸ್ ಇತ್ತೀಚಿಗೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗೆ ಹೊಸ ಸಿನಿಮಾ ಅನೌನ್ಸ್ ಮಾಡಿ ಮತ್ತಷ್ಟು ಬ್ಯುಸಿಯಾಗಿದ್ದಾರೆ.

  ಪ್ರಭಾಸ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಸಲಾರ್ ಸಿನಿಮಾ ಘೋಷಣೆಯಾಗಿದೆ. ಈ ಸಿನಿಮಾ ಸದ್ಯದಲ್ಲೇ ಪ್ರಾರಂಭವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇದರ ಜೊತೆಗೆ ಪ್ರಭಾಸ್ ರಾಧೆ-ಶ್ಯಾಮ್ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ.

  ಪ್ರಭಾಸ್ ಅಭಿಮಾನಿಗಳಿಗೆ ಹಬ್ಬ: 2021 ರಲ್ಲಿ ಎರಡು ಸಿನಿಮಾ ಬಿಡುಗಡೆ!?ಪ್ರಭಾಸ್ ಅಭಿಮಾನಿಗಳಿಗೆ ಹಬ್ಬ: 2021 ರಲ್ಲಿ ಎರಡು ಸಿನಿಮಾ ಬಿಡುಗಡೆ!?

  ಆದಿಪುರುಷ ಸಿನಿಮಾ ಕೂಡ ಪ್ರಭಾಸ್ ಕೈಯಲ್ಲಿದೆ. ಆದರೆ ಸಲಾರ್ ಮತ್ತು ಆದಿಪುರುಷ್ ಸಿನಿಮಾ ಅನೌನ್ಸ್ ಆಗುವ ಮೊದಲೇ ಪ್ರಭಾಸ್ ಮಹಾನಟಿ ಖ್ಯಾತಿಯ ನಿರ್ದೇಶಕ ನಾಗ್ ಅವರ ಜೊತೆ ಸಿನಿಮಾ ಘೋಷಿಸಿದ್ದರು. ಈ ಸಿನಿಮಾಗಳ ಅಬ್ಬರದ ನಡುವೆ ನಾಗ್ ಅಶ್ವಿನ್ ಸಿನಿಮಾ ಏನಾಯಿತು, ಎಲ್ಲಿವರೆಗೆ ಬಂದಿದೆ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

  ಹೌದು, ಪ್ರಭಾಸ್ ಮತ್ತು ನಾಗ್ ಅಶ್ವಿನ್ ಕಾಂಬಿನೇಷನ್ ನ ಸಿನಿಮಾ ಈ ವರ್ಷ ಮೇ ತಿಂಗಳಿಂದ ಪ್ರಾರಂಭವಾಗಲಿದೆಯಂತೆ. ಪ್ರಭಾಸ್ ಸದ್ಯ ಆದಿಪುರುಷ್ ಮತ್ತು ಸಲಾರ್ ಸಿನಿಮಾಗಳ ಚಿತ್ರೀಕರಣವನ್ನು ಒಟ್ಟಿಗೆ ಮಾಡುವ ಸಾಧ್ಯತೆ ಇದೆ. ಬಳಿಕ ಮೇ ತಿಂಗಳಿಂದ ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾ ಪ್ರಾರಂಭಿಸಲಿದ್ದಾರೆ ಎನ್ನಲಾಗುತ್ತಿದೆ

  ಈ ನಡುವೆ ನಾಗ್ ಅಶ್ವಿನ್ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರಂತೆ. ನಾಗ್ ಅಶ್ವಿನ್ ಹೊಸ ಸಿನಿಮಾ ಮುಗಿದ ಬಳಿಕ ಪ್ರಭಾಸ್ ಜೊತೆಗಿನ ಇನ್ನು ಹೆಸರಿಡದ ಸಿನಿಮಾ ಪ್ರಾರಂಭಿಸಲಿದ್ದಾರೆ.

  ಅಂದಹಾಗೆ ಈ ಸಿನಿಮಾದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ದೀಪಿಕಾ ಪ್ರಭಾಸ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವೈಜಯಂತಿ ಮೂವಿಸ್ ನಲ್ಲಿ ನಿರ್ಮಾಣವಾಗುತ್ತಿದೆ. ಮೇ ತಿಂಗಳಲ್ಲಿ ಸೆಟ್ಟೇರುವ ಸಿನಿಮಾ ಮುಂದಿನ ವರ್ಷ 2022ಗೆ ರಿಲೀಸ್ ಆಗುವ ಸಾದ್ಯತೆ ಇದೆ.

  English summary
  Tollywood Actor Prabhas and Deepika Padukone movie will be going on floor may. Directed by Nag Ashwin.
  Saturday, January 2, 2021, 17:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X