For Quick Alerts
  ALLOW NOTIFICATIONS  
  For Daily Alerts

  Birthday Special: ರಾಜಮನೆತನದ ಕುಡಿ.. ಸಾವಿರಾರು ಕೋಟಿ ಸಂಪತ್ತು: ಆಸ್ತಿ ಮುಂದೆ ಪ್ರಭಾಸ್ ಸಂಪಾದನೆ ಲೆಕ್ಕಕ್ಕಿಲ್ಲ!

  |

  ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳಿಂದ ಆಪ್ತರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. 'ಈಶ್ವರ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರಭಾಸ್ ಮತ್ತೆ ಹಿಂತಿರುಗಿ ನೋಡಲೇಯಿಲ್ಲ. ಸೂಪರ್ ಹಿಟ್ ಸಿನಿಮಾಗಳ ಮೂಲಕ ಟಾಲಿವುಡ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಪ್ರಭಾಸ್, 'ಬಾಹುಬಲಿ'ಯಾಗಿ ಏಕ್‌ದಮ್ ಇಂಟರ್‌ ನ್ಯಾಷನಲ್ ಫಿಗರ್ ಆಗಿಬಿಟ್ಟರು. ರೆಬಲ್ ಸ್ಟಾರ್ ಕೃಷ್ಣಂರಾಜು ಸಿನಿ ವಾರಸುದಾರನಾಗಿ ಚಿತ್ರರಂಗ ಪ್ರವೇಶಿಸಿದ ಪ್ರಭಾಸ್ ಒಂದೊಂದೇ ಮೆಟ್ಟಿಲು ಏರುತ್ತಾ ಬಂದು ಇವತ್ತು ಭಾರತೀಯ ಚಿತ್ರರಂಗದಲ್ಲೇ ನಂಬರ್‌ ವನ್ ಸ್ಟಾರ್ ಮೆರೆಯುತ್ತಿದ್ದಾರೆ.

  ಖ್ಯಾತ ನಟ ಕೃಷ್ಣಂರಾಜು ಸಹೋದರ ಸೂರ್ಯ ನಾರಾಯಣ ರಾಜು ಹಾಗೂ ಶಿವಕುಮಾರಿ ಮಗ ಪ್ರಭಾಸ್. ಇವರ ಪೂರ್ಣ ಹೆಸರು ವೆಂಕಟ ಸತ್ಯನಾರಾಯಣ ಪ್ರಭಾಸ್ ಉಪ್ಪಲಪಾಟಿ. ಪ್ರಭಾಸ್ ಭೀಮವರಂನಲ್ಲಿ ಡಿಎನ್‌ಆರ್ ಸ್ಕೂಲ್‌ನಲ್ಲಿ ಓದಿದ ಪ್ರಭಾಸ್ ಮುಂದೆ ಹೈದರಾಬಾದ್‌ನ ಶ್ರೀ ಚೈತನ್ಯ ಕಾಲೇಜಿನಲ್ಲಿ ಬಿಟೆಕ್ ಪದವಿ ಪಡೆದರು. 'ವರ್ಷಂ' ಸಿನಿಮಾ ಮೂಲಕ ಪ್ರಭಾಸ್‌ಗೆ ದೊಡ್ಡ ಬ್ರೇಕ್ ಸಿಕ್ಕಿತ್ತು. 'ಬಿಲ್ಲಾ', 'ಛತ್ರಪತಿ' 'ಬಾಹುಬಲಿ' ಸರಣಿ ಚಿತ್ರಕ್ಕಾಗಿ ಐದಾರು ವರ್ಷ ಮೀಸಲಿಟ್ಟು ಯಂಗ್‌ ರೆಬಲ್ ಸ್ಟಾರ್ ಸಕ್ಸಸ್ ಕಂಡರು. 'ಬಾಹುಬಲಿ' ಆಗಿ ಪ್ರಭಾಸ್ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದರು. ಅಭಿಮಾನಿಗಳ ಪ್ರೀತಿಯ ಡಾರ್ಲಿಂಗ್ ಸದ್ಯ ಚಿತ್ರವೊಂದಕ್ಕೆ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಾರೆ.

  ಎರಡನೇ ಸಲ 'ಕಾಂತಾರ' ವೀಕ್ಷಿಸಿದ ಪ್ರಭಾಸ್; ತಡವಾಗಿ ವೀಕ್ಷಿಸಿದ ಪ್ರತಾಪ್ ಸಿಂಹರಿಂದ ಸಂದೇಶಎರಡನೇ ಸಲ 'ಕಾಂತಾರ' ವೀಕ್ಷಿಸಿದ ಪ್ರಭಾಸ್; ತಡವಾಗಿ ವೀಕ್ಷಿಸಿದ ಪ್ರತಾಪ್ ಸಿಂಹರಿಂದ ಸಂದೇಶ

  ಟಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಪ್ರಭಾಸ್ ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ. ಪ್ರತಿ ಸಿನಿಮಾ 300ರಿಂದ 500 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಲಿದೆ. ಅಷ್ಟರಮಟ್ಟಿಗೆ ಡಾರ್ಲಿಂಗ್ ನಂಬಿ ನಿರ್ಮಾಪಕರು ಹಣ ಸುರಿಯುತ್ತಿದ್ದಾರೆ. ಥಾಯ್ಲೆಂಡ್‌ನಲ್ಲಿರುವ ಮೇಡಂ ಟುಸ್ಸಾಡ್ಸ್ ವ್ಯಾಕ್ಸ್ ಸ್ಟ್ಯಾಚು ಮ್ಯೂಸಿಎಂನಲ್ಲಿ ಪ್ರಭಾಸ್ ವ್ಯಾಕ್ಸ್ ಸ್ಟ್ಯಾಚು ನಿರ್ಮಿಸಲಾಗಿದೆ. ಈ ಗೌರವ ಪಡೆದ ಮೊದಲ ಸೌತ್ ಸೂಪರ್ ಸ್ಟಾರ್ ಎನಿಸಿಕೊಂಡಿದ್ದರು. ಪ್ರಭಾಸ್ ಹೇಳಿ ಕೇಳಿ ರಾಜಮನೆತನದ ಕುಡಿ. ಅವರ ಒಟ್ಟು ಆಸ್ತಿಯ ಮುಂದೆ ಸಂಪಾದನೆ ಏನೇನು ಅಲ್ಲ ಎನ್ನಲಾಗುತ್ತದೆ.

  ಸಾವಿರಾರು ಕೋಟಿ ಒಡೆಯ ಪ್ರಭಾಸ್!

  ಸಾವಿರಾರು ಕೋಟಿ ಒಡೆಯ ಪ್ರಭಾಸ್!

  ಪ್ರಭಾಸ್ ತಾತ, ಮುತ್ತಾತ ಪಶ್ಚಿಮ ಗೋದಾವರಿಯಲ್ಲಿ ರಾಜರಾಗಿ ಆಳ್ವಿಕೆ ನಡೆಸಿದ್ದರು. ಪ್ರಭಾಸ್‌ಗೆ 'ಬಾಹುಬಲಿ' ರೀತಿಯ ಪಾತ್ರ ಸೂಕ್ತ, ರಕ್ತದಲ್ಲೇ ರಾಜಸ ಇದೆ ಎಂದು ರಾಜಮೌಳಿ ಕೂಡ ಹೇಳಿದ್ದರು. ಅವತ್ತಿನ ಕಾಲಕ್ಕೆ ಕುಟುಂಬಸ್ಥರು 100 ರೂಪಾಯಿ, 1000 ರೂಪಾಯಿಗೆ ಎಕರೆ ಜಾಗ ಖರೀದಿಸಿದ್ದರು. ಈಗ ಅಲ್ಲಿ ಒಂದು ಎಕರೆಗೆ ಕೋಟಿ ರೂಪಾಯಿ ಮೌಲ್ಯ ಇದೆ. ಹಾಗಾಗಿ ಪ್ರಭಾಸ್ ಬಳಿ ಸಾವಿರಾರು ಕೋಟಿ ಮೌಲ್ಯದ ಆಸ್ತಿ ಇರುವ ಅಂದಾಜಿದೆ. ಇನ್ನು ಪ್ರಭಾಸ್ ಚಿತ್ರವೊಂದಕ್ಕೆ 100 ಕೋಟಿ ರೂ. ಅಧಿಕ ಸಂಭಾವನೆ ಪಡೆಯುತ್ತಾರೆ. ಜಾಹೀರಾತು, ವ್ಯಾಪಾರ ವ್ಯವಹಾರಗಳಿಂದಲೂ ಕೋಟಿ ಕೋಟಿ ಆದಾಯ ಸಂಪಾದಿಸುತ್ತಾರೆ. ಅದಕ್ಕೆ ತಕ್ಕಂತೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ.

  ಹೋಟೆಲ್ ನಡೆಸಬೇಕು ಎಂದುಕೊಂಡಿದ್ದ ಪ್ರಭಾಸ್

  ಹೋಟೆಲ್ ನಡೆಸಬೇಕು ಎಂದುಕೊಂಡಿದ್ದ ಪ್ರಭಾಸ್

  ಸಾಮಾನ್ಯವಾಗಿ ಚಿತ್ರರಂಗದ ಹಿನ್ನಲೆ ಇರುವವರು ಚಿತ್ರರಂಗದ ಯಾವುದಾದರೂ ವಿಭಾಗದಲ್ಲಿ ಕೆಲಸ ಮಾಡಬೇಕು ಎಂದುಕೊಳ್ಳುತ್ತಾರೆ. ಆದರೆ ಪ್ರಭಾಸ್ ಮೊದಲು ಹೀರೊ ಆಗಬೇಕು ಎಂದುಕೊಂಡಿರಲಿಲ್ಲವಂತೆ.

  ಭೋಜನ ಪ್ರಿಯ ಪ್ರಭಾಸ್‌ಗೆ ಹೋಟೆಲ್ ಉದ್ಯಮಕ್ಕೆ ಕಾಲಿಡುವ ಆಸೆ ಇತ್ತಂತೆ. ಯಂಗ್ ರೆಬಲ್ ಸ್ಟಾರ್‌ಗೆ ಚಿಕನ್ ಬಿರಿಯಾನಿ ಅಂದರೆ ಬಹಳ ಇಷ್ಟ. ಮನೆಗೆ ಯಾರೇ ಹೋದರು ಹತ್ತಾರು ಬಗೆಯ ಭಕ್ಷ್ಯ ಭೋಜನ ಸಿದ್ದಪಡಿಸಿ ಇನ್ನುವಂತೆ ಹಠ ಹಿಡಿಯುತ್ತಾರೆ. ಈ ಬಗ್ಗೆ ಅವರ ಆಪ್ತರು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ.
  ಯಂಗ್ ರೆಬಲ್ ಸ್ಟಾರ್ ಮದುವೆ ಯಾವಾಗ?

  ಯಂಗ್ ರೆಬಲ್ ಸ್ಟಾರ್ ಮದುವೆ ಯಾವಾಗ?

  ವಯಸ್ಸು 40 ದಾಟಿದರೂ ಪ್ರಭಾಸ್ ಮಾತ್ರ ಮದುವೆ ಆಗುವ ಬಗ್ಗೆ ಚಿಂತಿಸಿದಂತೆ ಕಾಣುತ್ತಿಲ್ಲ. ಸಾಕಷ್ಟು ಬಾರಿ ಪ್ರಭಾಸ್ ಮದುವೆ ವಿಚಾರ ಕೇಳಿಬಂದಿತ್ತಾದರೂ ಯಾವುದು ಕನ್ಫರ್ಮ್ ಆಗಲಿಲ್ಲ. ಅನುಷ್ಕಾ ಶೆಟ್ಟಿ ಸೇರಿದಂತೆ ಕೆಲ ನಟಿಯರ ಜೊತೆಗೂ ಯಂಗ್ ರೆಬಲ್ ಸ್ಟಾರ್ ಹೆಸರು ತಳುಕು ಹಾಕಿಕೊಂಡಿತ್ತು. 'ಬಾಹುಬಲಿ' ಸಕ್ಸಸ್ ನಂತರ 6 ಸಾವಿರಕ್ಕೂ ಅಧಿಕ ಮದುವೆ ಪ್ರಪೋಷಲ್‌ಗಳು ಬಂದಿತ್ತಂತೆ. ಆದರೆ ಯಾವುದನ್ನು ಪ್ರಭಾಸ್ ಒಪ್ಪಲಿಲ್ಲ ಎಂದು ಸುದ್ದಿ ಆಗಿತ್ತು. ಅಭಿಮಾನಿಗಳು ನೆಚ್ಚಿನ ನಟನ ಮದುವೆ ಯಾವಾಗ ಎಂದು ಕೇಳುತ್ತಲೇ ಇರುತ್ತಾರೆ. ಸದ್ಯಕ್ಕಂತೂ ಆ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ.

  ಡಾರ್ಲಿಂಗ್ ಕೈಯಲ್ಲಿರುವ ಸಿನಿಮಾಗಳು

  ಡಾರ್ಲಿಂಗ್ ಕೈಯಲ್ಲಿರುವ ಸಿನಿಮಾಗಳು

  ಪ್ರಭಾಸ್ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಾತ್ರ ಬಣ್ಣ ಹಚ್ಚುತ್ತಿದ್ದಾರೆ. 'ಆದಿಪುರುಷ್' ಸಿನಿಮಾ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರದಲ್ಲಿ ರಾಮಾಯಣದ ಕಥೆಯನ್ನು ಹೇಳಲಾಗುತ್ತಿದೆ. ಇನ್ನು ನಾಗ್‌ ಅಶ್ವಿನ್ ನಿರ್ದೇಶನದ 'ಪ್ರಾಜೆಕ್ಟ್ K' ಹಾಗೂ ಪ್ರಶಾಂತ್ ನೀಲ್ ಸಾರಥ್ಯದ 'ಸಲಾರ್' ಸಿನಿಮಾ ಚಿತ್ರೀಕರಣ ನಡೀತಿದೆ. ಸೆಪ್ಟೆಂಬರ್‌ನಲ್ಲಿ ಆಕ್ಷನ್ ಎಂಟರ್‌ಟೈನರ್ 'ಸಲಾರ್' ಸಿನಿಮಾ ತೆರೆಗೆ ಬರಲಿದೆ. ಇನ್ನು ಮಾರುತಿ ನಿರ್ದೇಶನದ ಮತ್ತೊಂದು ಚಿತ್ರಕ್ಕೂ ಪ್ರಭಾಸ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  English summary
  Prabhas birthday Interesting facts to net worth, all about salaar actor. On his 43rd birthday, here's looking at some of the lesser-known facts about Prabhas. Know more.
  Sunday, October 23, 2022, 9:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X