Just In
Don't Miss!
- Lifestyle
ಶನಿವಾರದ ಭವಿಷ್ಯ ಹೇಗಿದೆ ನೋಡಿ
- Automobiles
17 ನಗರಗಳಲ್ಲಿ 22 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆದ ಎಂಜಿ ಮೋಟಾರ್
- News
ಭಾರತದಲ್ಲಿ ಫೆ.27 ಹಾಗೂ 28 ರಂದು ಕೊರೊನಾ ಲಸಿಕೆ ಪ್ರಕ್ರಿಯೆ ಇಲ್ಲ
- Sports
ಐಎಸ್ಎಲ್: ಕೇರಳಕ್ಕೆ ಸೋಲುಣಿಸಿದ ನಾರ್ಥ್ಈಸ್ಟ್ ಯುನೈಟೆಡ್ ಪ್ಲೇ ಆಫ್ ಗೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಫೆ. 26ರ ಮಾರುಕಟ್ಟೆ ದರ ಇಲ್ಲಿದೆ
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಭಾಸ್-ದೀಪಿಕಾ ಪಡುಕೋಣೆ ಸಿನಿಮಾ ಯಾವಾಗ? ಉತ್ತರ ಕೊಟ್ಟ ನಿರ್ದೇಶಕ
ಇದೇ ಮೊದಲ ಬಾರಿಗೆ ಪ್ರಭಾಸ್ ಒಟ್ಟಿಗೆ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಹಾಗೂ ಓಂ ರಾವತ್ ನಿರ್ದೇಶನದ 'ಆದಿಪುರುಷ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಈ ಎರಡೂ ಸಿನಿಮಾಗಳ ಬಳಿಕ ಪ್ರತಿಭಾವಂತ ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶಿಸಲಿರುವ ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ನಟಿಸಲಿದ್ದಾರೆ ಪ್ರಭಾಸ್. ಅದೇ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹಾಗೂ ಅಮಿತಾಬ್ ಬಚ್ಚನ್ ಸಹ ನಟಿಸಲಿದ್ದಾರೆ.
ಫೆಬ್ರವರಿ 26 ರಂದು ಸಿನಿಮಾದ ಬಗ್ಗೆ ಅಪ್‌ಡೇಟ್ ನೀಡುತ್ತೇನೆ ಎಂದಿದ್ದ ನಾಗ್ ಅಶ್ವಿನ್ ಆ ನಂತರ ಪ್ರಭಾಸ್ ಅಭಿಮಾನಿಗಳ ಕ್ಷಮೆ ಕೋರಿ, ಸಿನಿಮಾದ ಬಗ್ಗೆ ಅಪ್‌ಡೇಟ್ ನೀಡಲು ಇದು ಸೂಕ್ತ ಸಮಯವಲ್ಲ ಎಂದಿದ್ದರು. ಆದರೆ ಈಗ ಸಿನಿಮಾದ ಚಿತ್ರೀಕರಣ ಯಾವಾಗ ಪ್ರಾರಂಭವಾಗಲಿದೆ ಎಂಬ ಮಾಹಿತಿಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಶೆಡ್ಯೂಲ್ ಪ್ರಕಾರ ಪ್ರಭಾಸ್-ದೀಪಿಕಾ ಸಿನಿಮಾ ಮಾರ್ಚ್ ತಿಂಗಳಲ್ಲಿಯೇ ಪ್ರಾರಂಭವಾಗಬೇಕಿತ್ತು. ಆದರೆ ಕೊರೊನಾ ಬಂದು ರಾಧೆ-ಶ್ಯಾಮ್, ಸಲಾರ್, ಆದಿಪುರುಷ್ ಸಿನಿಮಾ ತಡವಾದ ಕಾರಣ ಪ್ರಭಾಸ್-ದೀಪಿಕಾ ಸಿನಿಮಾ ತಡವಾಗಿದೆ. ಈ ಸಿನಿಮಾದ ಚಿತ್ರೀಕರಣವು ಜೂನ್ ಅಥವಾ ಜುಲೈ ನಲ್ಲಿ ಪ್ರಾರಂಭವಾಗಲಿದೆ ಎಂದಿದ್ದಾರೆ ನಾಗ್ ಅಶ್ವಿನ್.
ಮುಂದುವರೆದು, 'ಆದಿಪುರುಷ್ ಸಿನಿಮಾದಲ್ಲಿ ರಾಮಾಯಣದ ಕತೆಯನ್ನು ಹೇಳಲಾಗುತ್ತಿದೆ. ಆ ಕತೆಯು ಭಾರತದ ಎಲ್ಲ ಭಾಷೆಯ, ಪ್ರದೇಶದ ಜನರಿಗೆ ರಿಲೇಟ್ ಆಗುವಂಥಹದ್ದು, ಆದಿಪುರುಷ್ ಬಳಿಕ ಪ್ರಭಾಸ್ ಮಾರುಕಟ್ಟೆ ಮೌಲ್ಯ 30% ಹೆಚ್ಚಾಗಲಿದೆ. ಹಾಗಾಗಿ 'ಆದಿಪುರುಷ್' ಸಿನಿಮಾ ನನ್ನ ನಿರ್ದೇಶನದ ಸಿನಿಮಾಕ್ಕೆ ಸಕಾರಾತ್ಮಕವಾಗಿ ಪರಿಗಣಿಸಲಿದೆ' ಎಂದಿದ್ದಾರೆ ನಾಗ್ ಅಶ್ವಿನ್.