Don't Miss!
- News
Shimoga airport; ಸಿವಿಲ್ ಏವಿಯೇಷನ್ ಕಾರ್ಯದರ್ಶಿಗಳ ಭೇಟಿ
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರಶಾಂತ್ ನೀಲ್ ಜೊತೆ ಪ್ರಭಾಸ್, ನಾನಿ, ಅಮಿತಾಬ್ ಬಚ್ಚನ್ ಕಾಣಿಸಿಕೊಂಡಿದ್ದೇಕೆ!
ಪ್ಯಾನ್ ಇಂಡಿಯಾ ಎನ್ನುವ ಟೈಟಲ್ ಅಡಿಯಲ್ಲಿ, ಚಿತ್ರರಂಗಗಳ ನಡುವೆ ಇದ್ದ ಅಂತರ ಕಡಿಮೆ ಮಾಡಲಾಗಿದೆ. ತಾರತಮ್ಯ, ಮೇಲು ಕೀಳು ಎನ್ನುವ ಅಭಿಪ್ರಾಯಗಳು ದೂರಾಗಿವೆ. ಕನ್ನಡ, ತೆಲುಗು, ತಮಿಳು, ಮಲಾಳಂ, ಹಿಂದಿ ಸಿನಿಮಾರಂಗ ಒಕ್ಕೂರಲಿನಿಂದ ಕಾರ್ಯ ಮಾಡಲು ಶುರುವಾಗಿದೆ.
ಪ್ಯಾನ್ ಇಂಡಿಯಾ ಹೆಸರಿನಲ್ಲಿ ಎಲ್ಲಾ ಭಾಷೆಯ ಸಿನಿಮಾಗಳು, ಎಲ್ಲಾ ಭಾಷೆಗಳಲ್ಲೂ ತೆರೆಕಂಡು, ಪ್ರೇಕ್ಷಕರನ್ನು ರಂಜನಿಸಲು ಮುಂದಾಗಿವೆ. ಇದು ಉತ್ತಮ ಬೆಳವಣಿಗಿಯೇ ಸರಿ. ಇನ್ನು ಕನ್ನಡದ ಸಿನಿಮಾ ಮತ್ತು ನಿರ್ದೇಶಕ, ತಂತ್ರಜ್ಞರು, ಕಲಾವಿದರಿಗೂ ಬೇಡಿಕೆ ಹೆಚ್ಚಿದೆ.
ಪೃಥ್ವಿರಾಜ್
-
ಪ್ರಶಾಂತ್
ನೀಲ್
ಭೇಟಿ
ಗುಟ್ಟೇನು?
'ಸಲಾರ್'
ಸಮಸ್ಯೆಯೇನು?
ಇದೇ ಸಾಲಿನಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಇದ್ದಾರೆ. ಪ್ರಶಾಂತ್ ನೀಲ್ ತೆಲುಗು ನಟರ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆದರೆ ಈಗ ಬೇರೆ ಸ್ಟಾರ್‌ಗಳ ಜೊತೆಗೆ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಪ್ರಭಾಸ್, ಅಮಿತಾಬ್ ಬಚ್ಚನ್, ನಾನಿ, ದುಲ್ಕರ್ ಅಲ್ಮಾನ್, ನಾಗ್ ಅಶ್ವಿನ್ ಜೊತೆಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಪ್ರಶಾಂತ್ ನೀಲ್, ಪ್ರಭಾಸ್, ಅಮಿತಾಬ್ ಬಚ್ಚನ್!
ಇದ್ದಕ್ಕಿದ್ದ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ದಿಗ್ಗಜರು ಇರುವ ಫೋಟೋ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಫೋಟೋನಲ್ಲಿ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್, ನಟ ಪ್ರಭಾಸ್ ಅಮಿತಾಬ್ ಬಚ್ಚನ್, ನಾನಿ, ದುಲ್ಖರ್ ಸಲ್ಮಾನ್, ನಿರ್ದೇಶಕ ನಾಗ್ ಅಶ್ವಿನ್, ರಾಘವೇಂದ್ರ ರಾವ್ ಕಾಣಿಸಿಕೊಂಡಿದ್ದಾರೆ. ಒಂದೇ ಫೋಟೋನಲ್ಲಿ ಇದಿಷ್ಟು ಮಂದಿ ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಇದನ್ನು ಪ್ಯಾನ್ ಇಂಡಿಯಾ ಫ್ರೇಮ್ ಅಂತಲೇ ಹೇಳಬಹುದು. ಅವರೆಲ್ಲೇ ಸೇರಿ ಹೊಸ ಸಿನಿಮಾ ಏನಾದರೂ ಮಾಡುತ್ತಿದ್ದಾರ ಎನ್ನುವ ಚರ್ಚೆ ಕೂಡ ಶುರುವಾಗಿದೆ. ಆದರೆ ಈ ಫೋಟೋ ಹಿಂದಿನ ಕಥೆಯೇನು ಎನ್ನುವುದನ್ನು ಮುಂದೆ ಓದಿ...
ಪ್ರಭಾಸ್
ನಟನೆಯ
'ಸಲಾರ್'ನಲ್ಲಿ
ಮಲಯಾಳಂ
ಸ್ಟಾರ್
ಹೀರೋ!

ಹೈದ್ರಾಬಾದ್‌ನಲ್ಲಿ ತೆಗೆದ ಫೋಟೋ!
ಇವರೆಲ್ಲರೂ ಸೇರಿರುವುದು ನಟ ಪ್ರಭಾಸ್ ಅಭಿನಯದ 'ಪ್ರಾಜೆಕ್ಟ್ ಕೆ' ಸಿನಿಮಾಗಾಗಿ. ಹಾಗಂತ ಇವರೆಲ್ಲಾ ಪ್ರಾಜೆಕ್ಟ್ ಕೆ ಸಿನಿಮಾದ ಭಾಗವಲ್ಲ ಅಥವಾ ಈ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ. ಬದಲಿಗೆ 'ಪ್ರಾಜೆಕ್ಟ್ ಕೆ' ಸಿನಿಮಾ ನಿರ್ಮಾಣ ಸಂಸ್ಥೆ ವೈಜಯಂತಿ ಫಿಲ್ಮ್ಸ್ ಹೊಸ ಕಚೇರಿಯನ್ನು ತೆರೆಯಲಾಗಿದೆ. ಈ ಕಚೇರಿಯ ಓಪನಿಂಗ್ ಸಲುವಾಗಿ ಎಲ್ಲಾ ತಾರೆಯರು ನಿರ್ದೇಶಕರು ಒಟ್ಟಿಗೆ ಸೇರಿದ್ದಾರೆ. ಗಚ್ಚಿಬೌಲಿಯಲ್ಲಿ ಈ ಕಚೇರಿಯನ್ನು ತೆರೆಯಲಾಗಿದ್ದು ಪ್ರಾಜೆಕ್ಟ್ ಕೆ ಚಿತ್ರಕ್ಕಾಗಿಯೇ ವಿಶೇಷವಾಗಿ ಈ ಕಚೇರಿಯನ್ನು ಮೀಸಲಿರಿಸಲಾಗಿದೆ.

ಪ್ರಾಜೆಕ್ಟ್ ಕೆ ಚಿತ್ರದಲ್ಲಿ ಪ್ರಭಾಸ್ ನಿರತ!
ನಟ ಪ್ರಭಾಸ ವಿಚಾರಕ್ಕೆ ಬರುವುದಾದರೆ ಪ್ರಭಾಸ್ ಸದ್ಯ 'ಪ್ರಾಜೆಕ್ಟ್ ಕೆ' ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದಲ್ಲಿ 'ಪ್ರಾಜೆಕ್ಟ್ ಕೆ' ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ನಟಿ ದೀಪಿಕಾ ಪಡುಕೋಣೆ ತೆರೆ ಹಂಚಿಕೊಂಡಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಶೂಟಿಂಗ್ ಹಂತದಲ್ಲಿರುವ ಚಿತ್ರ ಆದಷ್ಟು ಬೇಗ ಶೂಟಿಂಗ್ ಮುಗಿಸಿ ಮುಂದಿನ ಅಪ್ಡೇಟ್ ನೀಡುವ ತವಕದಲ್ಲಿದೆ. ಜೊತೆಗೆ ಈ ಚಿತ್ರದ ಟೈಟಲ್ ಮತ್ತು ನಟ ಪ್ರಭಾಸ್ ಲುಕ್ ಕೂಡ ರಿವೀಲ್ ಆಗಿಲ್ಲ.
ಮತ್ತೆ
ಹೆಚ್ಚಿತು
ಪ್ರಭಾಸ್
ಸಂಭಾವನೆ:
2ನೇ
ಸ್ಥಾನದಲ್ಲಿ
ಟಾಲಿವುಡ್
ಡಾರ್ಲಿಂಗ್!

ಸಲಾರ್ ಅಥವಾ ಪಾಜೆಕ್ಟ್ ಕೆ!
ನಟ ಪ್ರಭಾಸ್ 'ಪ್ರಾಜೆಕ್ಟ್ ಕೆ' ಸಿನಿಮಾ ಮಾತ್ರವಲ್ಲ, ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗೆ ಸಲಾರ್ ಸಿನಿಮಾ ಮಾಡುತ್ತಿದ್ದಾರೆ. ಇತ್ತ ಸಲಾರ್ ಸಿನಿಮಾದ ಕೆಲಸಗಳು ಕೂಡ ಭರದಿಂದ ಸಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಪ್ರಭಾಸ್ ಸಾಲು-ಸಾಲು ಸಿನಿಮಾಗಳು ತೆರೆಗೆ ಬರಲಿವೆ. ಮತ್ತೊಂದು ಕಡೆ ಆದಿಪುರುಷ್ ಸಿನಿಮಾ ಕೂಡ ರೆಡಿಯಾಗುತ್ತಿದೆ. ಮೊದಲು ಯಾವ ಚಿತ್ರ ತೆರೆಗೆ ಬರಲಿದೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ. ಸಲಾರ್, ಪ್ರಾಜೆಕ್ಟ್ ಕೆ, ಆದಿಪುರುಷ್ ಈ ಮೂರು ಚಿತ್ರಗಳಲ್ಲಿ ಆದಿಪುರುಷ್ ಸಿನಿಮಾ ಮೊದಲು ರಿಲೀಸ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಬಳಿಕ ಸಲಾರ್ ಅಥವಾ ಪ್ರಾಜೆಕ್ಟ್ ಕೆ, ಯಾವ ಸಿನಿಮಾ ತೆರೆಗೆ ಬರಲಿದೆ ಎನ್ನುವುದನ್ನು ನೋಡಬೇಕಿದೆ.