Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರಭಾಸ್ ಅಂದು ಧರಿಸಿದ್ದ 12 ಸಾವಿರ ರೂ. ಶರ್ಟ್ ಕೇವಲ 600 ರೂ.ಗೆ ಲಭ್ಯ?
ಬಾಹುಬಲಿ ಪ್ರಭಾಸ್ ಭಾಗಿಯಾಗಿದ್ದ 'ಅನ್‌ಸ್ಟಾಪಬಲ್'- 2 ಎಪಿಸೋಡ್ ಸೂಪರ್ ಹಿಟ್ ಆಗಿತ್ತು. ಬಾಲಕೃಷ್ಣ ತಮ್ಮ ಲವಲವಿಕೆಯ ಮಾತುಗಳಿಂದ ಪ್ರಭಾಸ್ ಬಗ್ಗೆ ಸಾಕಷ್ಟು ಸಂಗತಿಗಳನ್ನು ಅಭಿಮಾನಿಗಳಿಗೆ ತಿಳಿಸಿದ್ದರು. ಅಹಾ ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗಿದ್ದ ಈ ಟಾಕ್ ಶೋ ಎಪಿಸೋಡ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಅಭಿಮಾನಿಗಳು ಮುಗಿಬಿದ್ದು ಶೋ ನೋಡಿದ್ದರು.
ಬಹಳ ದಿನಗಳ ನಂತರ ಪ್ರಭಾಸ್ ಈ ರೀತಿ ಟಾಕ್ ಶೋವೊಂದರಲ್ಲಿ ಭಾಗಿ ಆಗಿದ್ದರು. ಆಪ್ತಮಿತ್ರ, ನಟ ಗೋಪಿಚಂದ್ ಜೊತೆ ಪ್ರಭಾಸ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಶೋ ಯಾವ ಮಟ್ಟಿಗೆ ಹಿಟ್ ಆಗಿತ್ತು ಅಂದರೆ ಅಭಿಮಾನಿಗಳು ಒಮ್ಮೆಲೆ ಶೋ ನೋಡಲು ಮುಂದಾದ ಪರಿಣಾಮ ಸರ್ವರ್ ಕ್ರ್ಯಾಶ್ ಆಗಿತ್ತು. ಇನ್ನು ಶೋನಲ್ಲಿ ಪ್ರಭಾಸ್ ಲುಕ್ ಸಖತ್ ಆಗಿತ್ತು. ಪ್ರಭಾಸ್ ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದೇ ಕಮ್ಮಿ. ಸಾಮಾನ್ಯವಾಗಿ ಕಪ್ಪು ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಳ್ತಿದ್ದ, ಡಾರ್ಲಿಂಗ್ 'ಅನ್‌ಸ್ಟಾಪಬಲ್'- 2 ಶೋಗೆ ಕೇಸರಿ, ಹಸಿರು ಮಿಶ್ರಿತ ಬ್ರ್ಯಾಂಡ್ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿ ಬಂದಿದ್ದರು.
ಪ್ರಭಾಸ್ ಹೇರ್‌ಸ್ಟೈಲ್, ಲುಕ್, ಡ್ರೆಸ್ಸಿಂಗ್ ಸ್ಟೈಲ್ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಪ್ರಭಾಸ್ ತೊಟ್ಟಿದ್ದ ಆ ಚೆಕ್ಸ್ ಶರ್ಟ್ ಹೈಲೆಟ್ ಆಗಿತ್ತು. ಅಭಿಮಾನಿಗಳು ಕೂಡಲೇ ಆ ಶರ್ಟ್ ಯಾವ್ದು? ಬೆಲೆ ಎಷ್ಟು ಎನ್ನುವುದನ್ನೆಲ್ಲಾ ಹುಡುಕಾಡಿದ್ದರು. ಅದು ಪೊಲೊ ರಾಪ್ಫ್ ರಾಲರನ್ ಮೆನ್ಸ್ ಮದ್ರಾಸ್ ಬಟನ್ ಡೌನ್ ಬ್ರ್ಯಾಂಡ್ ಶರ್ಟ್ ಎನ್ನುವುದು ಗೊತ್ತಾಗಿತ್ತು. ಬೆಲೆ ಬರೋಬ್ಬರಿ 11, 618 ರೂಪಾಯಿ ಎಂದು ತಿಳಿದು ಹುಬ್ಬೇರಿಸಿದ್ದರು. ಇಂತದ್ದೇ ಶರ್ಟ್‌ಗಳಿಗಾಗಿ ಆನ್‌ಲೈನ್‌ನಲ್ಲಿ ಹುಡಕಾಟ ನಡೆಸಿದ್ದರು. ಕೆಲವರಿಗೆ ಹೆಚ್ಚು ಕಡಿಮೆ ಇದೇ ರೀತಿಯ ಕಡಿಮೆ ಗುಣಮಟ್ಟದ ಶರ್ಟ್‌ಗಳು ಸಿಕ್ಕಿದ್ದವು. ಇದೀಗ ಇಂತದ್ದೇ ಶರ್ಟ್‌ಗಳಲ್ಲಿ ಆಂಧ್ರ, ತೆಲಂಗಾಣದ ಕೆಲ ಅಂಗಡಿಗಳಲ್ಲಿ ಮಾರಾಟಕ್ಕೆ ಇಡಲಾಗಿದೆ.

ಹೌದು ಪ್ರಭಾಸ್ 'ಅನ್‌ಸ್ಟಾಪಬಲ್'- 2 ಶೋನಲ್ಲಿ ತೊಟ್ಟಿದ್ದ ಮಾದರಿ ಶರ್ಟ್‌ಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಆದರೆ ಇದು ಪ್ರಭಾಸ್ ಧರಿಸಿದ್ದ ಶರ್ಟ್ ಬ್ರ್ಯಾಂಡ್‌ನ ಶರ್ಟ್ ಅಲ್ಲ. ಬದಲಿಗೆ ಅದನ್ನೇ ಹೋಲುವ ಶರ್ಟ್‌ಗಳು. ಸದ್ಯ ಆಂಧ್ರದ ಕೆಲ ಬಟ್ಟೆ ಅಂಗಡಿಗಳಲ್ಲಿ ಈ ಶರ್ಟ್‌ಗಳನ್ನು ಡಿಸ್‌ಪ್ಲೇ ಮಾಡಲಾಗಿದೆ. ಇದರ ಬೆಲೆ 600 ರೂಪಾಯಿ. ಪ್ರಭಾಸ್ ಅಭಿಮಾನಿಗಳು ಈ ಶರ್ಟ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕೆಲವರು ಈಗಾಗಲೇ ಶರ್ಟ್ ಕೊಂಡುಕೊಂಡಿದ್ದಾರೆ. ಒಟ್ನಲ್ಲಿ ಪ್ರಭಾಸ್ ಶೋವೊಂದಕ್ಕೆ ತೊಟ್ಟಿದ್ದ ಶರ್ಟ್ ಈ ಪಾಟಿ ಟ್ರೆಂಡ್ ಹುಟ್ಟಾಕಿರೋದು ನಿಜಕ್ಕೂ ಅಚ್ಚರಿ ಮೂಡಿಸಿದೆ.