For Quick Alerts
  ALLOW NOTIFICATIONS  
  For Daily Alerts

  ನ್ಯಾಯ ಮಾರ್ಗದಲ್ಲಿ ಅನ್ಯಾಯದ ಸರ್ವನಾಶಕ್ಕೆ ಬಂದ 'ಆದಿಪುರುಷ್': ಟೀಸರ್ ಸೂಪರ್ ಹಿಟ್.. ಆದರೆ?

  |

  ಬಾಹುಬಲಿ ಪ್ರಭಾಸ್ ನಟನೆಯ ಬಹುನಿರೀಕ್ಷಿತ 'ಆದಿಪುರುಷ್' ಸಿನಿಮಾ ಟೀಸರ್ ಬಿಡುಗಡೆಯಾಗಿ ಸಖತ್ ಸದ್ದು ಮಾಡ್ತಿದೆ. ಸರಯು ನದಿಯ ದಡ ಅಯೋಧ್ಯೆಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಟೀಸರ್ ರಿಲೀಸ್ ಆಯಿತು. ಇಡೀ ಚಿತ್ರತಂಡ ಈ ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ರಾಘವ ರಾಮನಾಗಿ ಪ್ರಭಾಸ್, ಜಾನಕಿಯಾಗಿ ಕೃತಿ ಸನೂನ್, ಲಂಕೇಶನಾಗಿ ಸೈಫ್ ಅಲಿಖಾನ್ ಮಿಂಚಿದ್ದಾರೆ.

  1 ನಿಮಿಷ 45 ಸೆಕೆಂಡ್‌ಗಳ ಟೀಸರ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ. ಗ್ರಾಫಿಕ್ಸ್ ಮಾಯಾಜಾಲದಲ್ಲಿ ರಾಮಾಯಣ ಕಾವ್ಯದ ದರ್ಶನವನ್ನು ಮಾಡಿಸಲಾಗಿದೆ. ಲಂಕೇಶನ ಅಟ್ಟಹಾಸ, ರಾಮ ಲಕ್ಷ್ಮಣರು ವಾನರ ಸೇನೆಯ ಜೊತೆ ಲಂಕೆ ಸೇತುವೆ ನಿರ್ಮಿಸಿ, ಅಸುರನ ಹುಟ್ಟಡಗಿಸಿ ಬರಲು ಹೋಗುವ ದೃಶ್ಯಗಳನ್ನು ಹೈಲೆಟ್ ಮಾಡಿ ಟೀಸರ್ ಕಟ್ ಮಾಡಿದ್ದಾರೆ. "ನ್ಯಾಯದ ಕೈಯಿಂದಲೇ ಅನ್ಯಾಯ ಸರ್ವನಾಶ", "ನ್ಯಾಯದ ಎರಡು ಪಾದಗಳಿಂದ ನಿನ್ನ ಅನ್ಯಾಯದ 10 ತಲೆಗಳನ್ನು ತುಳಿದು ಹಾಕಲು ಬರ್ತಾ ಇದ್ದೀನಿ" ಎನ್ನುವ ಡೈಲಾಗ್ಸ್ ಗಮನ ಸೆಳೆದಿದೆ.

  ದಶಕಂಠನಾಗಿ ರಾವಣನ ಆರ್ಭಟ ಹಾಗೂ ಹನುಮಂತನ ಬೆನ್ನೇರಿ ಬರುವ ರಾಮನ ದೃಶ್ಯಗಳು ಸಖತ್ ಥ್ರಿಲ್ಲಿಂಗ್ ಆಗಿದೆ. ಟೀಸರ್ ಪ್ರಭಾಸ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಅದರೆ ಬರೀ ಗ್ರಾಫಿಕ್ಸ್ ಆಯ್ತು. ರಜನಿಕಾಂತ್ ನಟನೆಯ ಕೊಚಡಿಯನ್ ಚಿತ್ರವನ್ನು ನೆನಪಿಸ್ತಿದೆ. ಸಹಜತೆ ಕಮ್ಮಿ ಇದೆ. ರಾಮನಾಗಿ ಪ್ರಭಾಸ್ ಲುಕ್ಸ್ ಕೂಡ ಅಷ್ಟೇನು ಚೆನ್ನಾಗಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ತ್ರಿಡಿಯಲ್ಲಿ ಸಿನಿಮಾ ಸಖತ್ ಥ್ರಿಲ್ ಕೊಡಲಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

  prabhas-starrer-adipurush-teaser-released

  ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರದಲ್ಲಿ ಮಿಂಚಿದ್ದು, ದೇವದತ್ ನಾಗೆ ಹನುಮಂತನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. 500 ಕೋಟಿ ರೂ. ವೆಚ್ಚದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರಪಂಚದ ನಾನಾ ಭಾಷೆಗಳಿಗೆ ಸಿನಿಮಾ ಡಬ್ ಆಗಿ ಬಿಡುಗಡೆಯಾಗಲಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 12ಕ್ಕೆ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.

  English summary
  Prabhas Starrer Adipurush Teaser Released. Adipurush is based on the epic Ramayana, showcasing the triumph of good over evil. Know more.
  Monday, October 3, 2022, 10:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X