For Quick Alerts
  ALLOW NOTIFICATIONS  
  For Daily Alerts

  ನಟಿ ಕೀರ್ತಿ ಸುರೇಶ್ ಗೆ ಸಾಥ್ ನೀಡಿದ ನಟ ಪ್ರಭಾಸ್

  |

  ದಕ್ಷಿಣ ಭಾರತೀಯ ಸಿನಮಾರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪೆಂಗ್ವಿನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಕೀರ್ತಿ ಸುರೇಶ್ ಈಗ ಗುಡ್ ಲಕ್ ಸಿನಿಮಾ ಮೂಲಕ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

  ಅಂದ್ಹಾಗೆ ಕೀರ್ತಿ ಸುರೇಶ್ ನಟಿಸಿರುವ 'ಗುಡ್ ಲಕ್' ಸಿನಿಮಾ ಟೀಸರ್ ರಿಲೀಸ್ ಆಗಿದೆ. ಸ್ವತಂತ್ರ್ಯ ದಿನಾಚರಣೆಯ ಪ್ರಯುಕ್ತ ಸಿನಿಮಾದ ಟೀಸರ್ ಅನ್ನು ಅಭಿಮಾನಿಗಳಿಗೆ ಗಿಫ್ಟ್ ಆಗಿ ನೀಡಿದೆ ಸಿನಿಮಾತಂಡ. ಗುಡ್ ಲಕ್ ಸಿನಿಮಾ ತಮಿಳು ಸೇರಿದ್ದಂತೆ ತೆಲುಗು ಮತ್ತು ಮಲಯಾಳಂನಲ್ಲಿ ರಿಲೀಸ್ ಆಗುತ್ತಿದೆ. ಮೂರು ಭಾಷೆಯಲ್ಲಿಯೂ ಟೀಸರ್ ರಿಲೀಸ್ ಆಗಿದೆ.

  ನಟ ಪ್ರಭಾಸ್ ಮುಂದಿನ ಸಿನಿಮಾಗೆ ಪ್ರಶಾಂತ್ ನೀಲ್ ನಿರ್ದೇಶನ.!

  ಕ್ರೀಡೆ ಆಧಾರಿತ ಸಿನಿಮಾ ಇದಾಗಿದ್ದು ಚಿತ್ರಕ್ಕೆ ನಾಗೇಶ್ ಕುಕುನೂರ್ ಆಕ್ಷನ್ ಕಟ್ ಹೇಳಿದ್ದಾರೆ. ವಿಶೇಷ ಅಂದರೆ ತೆಲುಗು ವರ್ಷನ್ ಟೀಸರ್ ಅನ್ನು ನಟ ಪ್ರಭಾಸ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

  ಇನ್ನೂ ತಮಿಳು ವರ್ಷನ್ ಟೀಸರ್ ಅನ್ನು ವಿಜಯ್ ಸೇತುಪತಿ ರಿಲೀಸ್ ಮಾಡಿದ್ರೆ, ಮಲಯಾಳಂ ವರ್ಷನ್ ಟೀಸರ್ ನಟ ಪೃಥ್ವಿರಾಜ್ ಬಿಡುಗಡೆ ಮಾಡಿದ್ದಾರೆ. ಚಿತ್ರದಲ್ಲಿ ನಟಿ ಕೀರ್ತಿ ಸುರೇಶ್ 1- ಮೀಟರ್ ರೈಫಲ್ ಶೂಟರ್ ಆಗಿ ನಟಿಸಿದ್ದಾರೆ. ಖ್ಯಾತ ನಟ ಜಗಪತಿ ಬಾಬು ಕೋಚ್ ಆಗಿ ಕಾಣಿಸಿಕೊಂಡಿದ್ದಾರೆ. ಆಧಿ ಪಿಣಿಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಈ ಸಿನಿಮಾ ವರ್ಷದ ಕೊನೆಯಲ್ಲಿ ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಇನ್ನೂ ವಿಶೇಷ ಅಂದರೆ ಕೀರ್ತಿ ಸುರೇಶ್ ಅಭಿನಯದ ಮತ್ತೊಂದು ಸಿನಿಮಾ ಮಿಸ್ ಇಂಡಿಯ ಚಿತ್ರ ಸಹ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಇದಲ್ಲದೆ ರಂಗ್ ದೆ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಮಹೇಶ್ ಬಾಬು ಜೊತೆ ಸರ್ಕಾರ್ ವಾರಿ ಪಾಟ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

  English summary
  Actor Prabhas unveiled Keerthy Suresh's Good luck sakhi Telugu version teaser.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X