For Quick Alerts
  ALLOW NOTIFICATIONS  
  For Daily Alerts

  ಎರಡನೇ ಸಲ 'ಕಾಂತಾರ' ವೀಕ್ಷಿಸಿದ ಪ್ರಭಾಸ್; ತಡವಾಗಿ ವೀಕ್ಷಿಸಿದ ಪ್ರತಾಪ್ ಸಿಂಹರಿಂದ ಸಂದೇಶ

  |

  ಭಾರತ ಚಿತ್ರರಂಗದಲ್ಲಿ ಸದ್ಯ ಕಾಂತಾರ ಹವಾ ಜೋರಾಗಿದೆ. ಮೊದಲಿಗೆ ಕನ್ನಡದಲ್ಲಿ ಮಾತ್ರ ತೆರೆಕಂಡಿದ್ದ ಕಾಂತಾರ ಪರಭಾಷಾ ಸಿನಿ ರಸಿಕರಿಂದ ಬೃಹತ್ ಪ್ರಶಂಸೆ ಗಿಟ್ಟಿಸಿಕೊಂಡು ಡಬ್ಬಿಂಗ್ ಬೇಡಿಕೆ ಪಡೆದುಕೊಂಡ ಕಾರಣ ಈಗ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್ ಆಗಿದೆ. ಹೀಗೆ ಏಕಭಾಷೆಯ ಚಿತ್ರವಾಗಿದ್ದ ಕಾಂತಾರ ಬೃಹತ್ ಸಕ್ಸಸ್ ಕಂಡ ಬೆನ್ನಲ್ಲೇ ಪ್ಯಾನ್ ಇಂಡಿಯಾ ಚಿತ್ರವಾಗಿ ಪರಿವರ್ತನೆಗೊಂಡಿದ್ದು, ಇಂದು ( ಅಕ್ಟೋಬರ್ 14 ) ಕಾಂತಾರ ಹಿಂದಿ ಅವತರಣಿಕೆ ಬಿಡುಗಡೆಯಾಗಿದೆ, ನಾಳೆ ( ಅಕ್ಟೋಬರ್ 15 ) ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆಗೊಳ್ಳುತ್ತಿದೆ ಮತ್ತು ಅಕ್ಟೋಬರ್ 20ರಂದು ಮಲಯಾಳಂನಲ್ಲಿ ಬಿಡುಗಡೆಗೊಳ್ಳಲಿದೆ.

  ಇನ್ನು ಇಂದು ತೆರೆಕಂಡ ಕಾಂತಾರ ಹಿಂದಿ ಅವತರಣಿಕೆ ಉತ್ತಮ ಪ್ರದರ್ಶನ ಪಡೆದುಕೊಳ್ಳುತ್ತಿದ್ದು, ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ. ಅತ್ತ ಕಾಂತಾರ ಚಿತ್ರದ ವಿಮರ್ಶೆ ಕಂಡು ನಿರೀಕ್ಷೆ ಹೆಚ್ಚಿಸಿಕೊಂಡಿರುವ ತೆಲುಗು ಪ್ರೇಕ್ಷಕರಿಗೆ ಇದೀಗ ಡಾರ್ಲಿಂಗ್ ಪ್ರಭಾಸ್ ಶೇರ್ ಮಾಡಿರುವ ಪೋಸ್ಟ್ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅದೂ ಅಲ್ಲದೇ ಪ್ರಭಾಸ್ ಕಾಂತಾರ ಚಿತ್ರವನ್ನು ಎರಡನೇ ಬಾರಿಗೆ ವೀಕ್ಷಿಸಿರುವುದು ವಿಶೇಷವಾಗಿದೆ.

  ಹೌದು, ಈ ಹಿಂದೆಯೇ ಕಾಂತಾರ ಚಿತ್ರವನ್ನು ಕನ್ನಡದಲ್ಲಿ ವೀಕ್ಷಿಸಿದ್ದ ಪ್ರಭಾಸ್ ಇದೀಗ ತೆಲುಗಿನಲ್ಲಿಯೂ ವೀಕ್ಷಿಸಿದ್ದಾರೆ ಹಾಗೂ ಈ ಕುರಿತಾಗಿ ತನ್ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಭಾಸ್ ಎರಡನೇ ಸಲ ತಾನು ಕಾಂತಾರ ವೀಕ್ಷಿಸಿದ್ದು ಇದೊಂದು ಅತ್ಯದ್ಭುತ ಅನುಭವವಾಗಿದೆ, ಈ ಚಿತ್ರ ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ ಎಂದು ಬರೆದುಕೊಂಡಿದ್ದಾರೆ.

  ಇನ್ನು ಕಾಂತಾರ ಚಿತ್ರವನ್ನು ಸಂಸದ ಪ್ರತಾಪ್ ಸಿಂಹ ಕೂಡ ವೀಕ್ಷಿಸಿದ್ದು, 'ತಡವಾಗಿ ಚಿತ್ರ ವೀಕ್ಷಿಸಿದ್ದೇನೆ, ಆದರೆ ನೀವು ತಡಮಾಡಬೇಡಿ ಎಂದು ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  English summary
  Prabhas watched Kantara movie for the second time. Read on
  Friday, October 14, 2022, 20:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X