For Quick Alerts
  ALLOW NOTIFICATIONS  
  For Daily Alerts

  ರಾಮ್‌ಗೋಪಾಲ್ ವರ್ಮಾ-ಪವನ್ ಕಲ್ಯಾಣ್ ವಿವಾದ: ಪ್ರಕಾಶ್ ರೈ ಪ್ರತಿಕ್ರಿಯೆ

  |

  ರಾಮ್ ಗೋಪಾಲ್ ವರ್ಮಾ ಹಾಗೂ ಪವನ್ ಕಲ್ಯಾಣ್ ಅಭಿಮಾನಿಗಳ ಮಧ್ಯೆ ಜಗಳ ತಾರಕಕ್ಕೇರಿಕೆ. ಕೆಲವು ದಿನಗಳ ಹಿಂದಷ್ಟೆ ವರ್ಮಾ ಕಚೇರಿಗೆ ನುಗ್ಗಿದ್ದ ಪವನ್ ಅಭಿಮಾನಿಗಳು ದಾಂಧಲೆ ಎಬ್ಬಿಸಿದ್ದರು.

  Aishwarya Rai ಗೆ ಸಂತಸದ ಸುದ್ದಿ! | Filmibeat Kannada

  ರಾಮ್ ಗೋಪಾಲ್ ವರ್ಮಾ, ಪವನ್ ಕಲ್ಯಾಣ್ ಬಗ್ಗೆ ಸಿನಿಮಾ ನಿರ್ದೇಶಿಸುವುದೇ ಇಬ್ಬರ ಇದಕ್ಕೆಲ್ಲಾ ಕಾರಣ. ಈಗಾಗಲೇ ಟ್ರೇಲರ್ ಬಿಡುಗಡೆ ಆಗಿರುವ 'ಪವರ್ ಸ್ಟಾರ್' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಸಹ ಆಗಲಿದೆ.

  ರಾಮ್ ಗೋಪಾಲ್ ವರ್ಮಾ ಕಚೇರಿಗೆ ನುಗ್ಗಿದ ಪವನ್ ಕಲ್ಯಾಣ್ ಅಭಿಮಾನಿಗಳುರಾಮ್ ಗೋಪಾಲ್ ವರ್ಮಾ ಕಚೇರಿಗೆ ನುಗ್ಗಿದ ಪವನ್ ಕಲ್ಯಾಣ್ ಅಭಿಮಾನಿಗಳು

  ರಾಮ್ ಗೋಪಾಲ್ ವರ್ಮಾ ಪವನ್ ಕಲ್ಯಾಣ್ ಬಗ್ಗೆ ಸಿನಿಮಾ ನಿರ್ಮಿಸಿದ್ದಕ್ಕೆ ಪ್ರತಿಯಾಗಿ ಪವನ್ ಅಭಿಮಾನಿಗಳು ರಾಮ್ ಗೋಪಾಲ್ ವರ್ಮಾ ಬಗ್ಗೆ ಸಿನಿಮಾ ನಿರ್ಮಿಸುತ್ತಿದ್ದಾರೆ. ಇದೀಗ ಈ ವಿವಾದದ ಬಗ್ಗೆ ಬಹುಭಾಷಾ ನಟ, ಪವನ್-ವರ್ಮಾ ಇಬ್ಬರಿಗೂ ಆಪ್ತವಾಗಿರುವ ಕನ್ನಡಿಕ ಪ್ರಕಾಶ್ ರೈ ಮಾತನಾಡಿದ್ದಾರೆ.

   ತೆಲುಗು ಮಾಧ್ಯಮಕ್ಕೆ ಪ್ರಕಾಶ್ ರೈ ಸಂದರ್ಶನ

  ತೆಲುಗು ಮಾಧ್ಯಮಕ್ಕೆ ಪ್ರಕಾಶ್ ರೈ ಸಂದರ್ಶನ

  ತೆಲುಗು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪ್ರಕಾಶ್ ರೈ, ರಾಮ್ ಗೋಪಾಲ್ ವರ್ಮಾ ಅವರ ಪ್ರತಿಭೆಯನ್ನು ಹೊಗಳಿದ್ದಾರೆ. ವರ್ಮಾ ಜೊತೆ ಹೆಚ್ಚಿಗೆ ಕೆಲಸ ಮಾಡಿಲ್ಲ ಆದರೆ ಅವರನ್ನು ಸಾಕಷ್ಟು ಬಾರಿ ಭೇಟಿ ಆಗಿದ್ದೇನೆ ಮಾತುಕತೆ ಸಹ ನಡೆಸಿದ್ದೇನೆ ಎಂದಿದ್ದಾರೆ.

  ರಾಮ್ ಗೋಪಾಲ್ ವರ್ಮಾ ಪ್ರತಿಭಾವಂತ: ಪ್ರಕಾಶ್ ರೈ

  ರಾಮ್ ಗೋಪಾಲ್ ವರ್ಮಾ ಪ್ರತಿಭಾವಂತ: ಪ್ರಕಾಶ್ ರೈ

  ರಾಮ್ ಗೋಪಾಲ್ ವರ್ಮಾ ಅತ್ಯಂತ ಬುದ್ಧಿವಂತ, ಸಾಕಷ್ಟು ಪ್ರತಿಭೆಯುಳ್ಳ ವ್ಯಕ್ತಿ. ವೈಯಕ್ತಿಕವಾಗಿ ಆತ ಎಂಥಹಾ ವ್ಯಕ್ತಿ ಎಂಬುದನ್ನು ನಾನು ಗಮನಿಸುವುದಿಲ್ಲ. ನಾನು ಆತನಿಂದ ಏನು ಕಲಿಯಬಹುದು ಎಂಬುದಷ್ಟೆ ನನ್ನ ಆಲೋಚನೆ ಆಗಿರುತ್ತದೆ ಎಂದಿದ್ದಾರೆ ರೈ.

  ಬೇರೆಯವರ ಜೀವನ ಕೆದಕುವ ರಾಮ್‌ಗೋಪಾಲ್ ವರ್ಮಾ ಜೀವನದ ಬಗ್ಗೆ ಸಿನಿಮಾ!ಬೇರೆಯವರ ಜೀವನ ಕೆದಕುವ ರಾಮ್‌ಗೋಪಾಲ್ ವರ್ಮಾ ಜೀವನದ ಬಗ್ಗೆ ಸಿನಿಮಾ!

  'ಪವರ್ ಸ್ಟಾರ್' ಸಿನಿಮಾ ನೋಡಬೇಕಿಲ್ಲ: ಪ್ರಕಾಶ್ ರೈ

  'ಪವರ್ ಸ್ಟಾರ್' ಸಿನಿಮಾ ನೋಡಬೇಕಿಲ್ಲ: ಪ್ರಕಾಶ್ ರೈ

  ಪವನ್ ಕಲ್ಯಾಣ್ ಬಗ್ಗೆ ವರ್ಮಾ ಮಾಡಿರುವ ಸಿನಿಮಾವನ್ನು ನೋಡಬೇಕಿಲ್ಲ, ಕುತೂಹಲಕ್ಕೂ ಅದರ ಬಗ್ಗೆ ಕಣ್ಣಾಡಿಸಬೇಕಿಲ್ಲ ಎಂದಿರುವ ಪ್ರಕಾಶ್ ರೈ. ಪವನ್ ಅಭಿಮಾನಿಗಳು ವರ್ಮಾ ಬಗ್ಗೆ ಸಿನಿಮಾ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯೇ ಪರಸ್ಪರ ಸ್ಪರ್ಧೆ ಇರಲಿ ಆದರೆ ಅದು ಆರೋಗ್ಯಕರವಾಗಿರಲಿ ಎಂದಿದ್ದಾರೆ.

  ಪವನ್ ಕಲ್ಯಾಣ್ ಗೌರವ ಇಂಚೂ ಕಡಿಮೆಯಾಗದು: ಪ್ರಕಾಶ್ ರೈ

  ಪವನ್ ಕಲ್ಯಾಣ್ ಗೌರವ ಇಂಚೂ ಕಡಿಮೆಯಾಗದು: ಪ್ರಕಾಶ್ ರೈ

  ಪವನ್ ಕಲ್ಯಾಣ್ ಬಗ್ಗೆ ವರ್ಮಾ ಕೆಟ್ಟದಾಗಿ ತೋರಿಸಿದ್ದರೂ ಸಹ ಪವನ್ ಕಲ್ಯಾಣ್ ಗೌರವ ಇಂಚು ಸಹ ಕಡಿಮೆ ಆಗುವುದಿಲ್ಲ. ಅದರ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಳ್ಳಬೇಕಿಲ್ಲ. ಪವನ್ ಅವರ ಕ್ರೇಜ್ ಒಂದು ಸಿನಿಮಾದಿಂದ ಸ್ವಲ್ಪವೂ ತಗ್ಗುವುದಿಲ್ಲ ಎಂದಿದ್ದಾರೆ.

  ಕೋಟಿ-ಕೋಟಿ ಗಳಿಸಿದ ರಾಮ್ ಗೋಪಾಲ್ ವರ್ಮಾ ನಾಯಕಿಗೆ ಕೊಟ್ಟಿದ್ದು ಇಷ್ಟೇ ಹಣಕೋಟಿ-ಕೋಟಿ ಗಳಿಸಿದ ರಾಮ್ ಗೋಪಾಲ್ ವರ್ಮಾ ನಾಯಕಿಗೆ ಕೊಟ್ಟಿದ್ದು ಇಷ್ಟೇ ಹಣ

  English summary
  Actor Pawan Kalyan talked about Ram Gopal Varma and Pawal Kalyan. He said Varma in intelligent.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X