twitter
    For Quick Alerts
    ALLOW NOTIFICATIONS  
    For Daily Alerts

    ಚುನಾವಣೆಯಲ್ಲಿ ಅಕ್ರಮ, ರೌಡಿಶೀಟರ್ ಒಳಬಂದಿದ್ದು ಹೇಗೆ: ಪ್ರಕಾಶ್ ರೈ ಪ್ರಶ್ನೆ

    |

    ತೆಲುಗು ಸಿನಿಮಾ ಉದ್ಯಮದ ಪ್ರತಿಷ್ಠಿತ ಚುನಾವಣೆಯಾಗಿದ್ದ ಮಾ (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಮುಗಿದಿದ್ದರೂ ವಿವಾದಗಳು ಇನ್ನೂ ಮುಗಿದಿಲ್ಲ.

    ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಕಾಶ್ ರೈ, ಮಂಚು ವಿಷ್ಣು ಎದುರು ಸೋತಿದ್ದಾರೆ. ಪ್ರಕಾಶ್ ರೈ ಸಿಂಡಿಕೇಟ್‌ನಿಂದ ಸ್ಪರ್ಧಿಸಿದ್ದ ಗೆದ್ದಿದ್ದ ಸದಸ್ಯರು ಸಹ ಫಲಿತಾಂಶ ಬಂದ ಬಳಿಕ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಮಂಚು ವಿಷ್ಣು ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದೂ ಆಗಿದೆ.

    ಆದರೆ ಮತದಾನಕ್ಕೆ ಮುಂಚೆ ಹಾಗೂ ಮತದಾನದ ದಿನ ಸಾಕಷ್ಟು ಗೊಂದಲಗಳು, ಗಲಾಟೆಗಳು ಆಗಿದ್ದವು. ಇದೀಗ ಪ್ರಕಾಶ್ ರೈ, ಅಕ್ರಮ ಮತದಾನದ ಆರೋಪಗಳನ್ನು ಮಾಡುತ್ತಿದ್ದು, ಮತಕೇಂದ್ರದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಿ ಎಂದು ಚುನಾವಣಾ ಅಧಿಕಾರಿಗೆ ಮನವಿ ಮಾಡಿದ್ದಾರೆ. ಇಂದು ಟ್ವೀಟ್‌ ಮಾಡಿ, ಮತದಾನ ಕೇಂದ್ರದಲ್ಲಿ ರೌಡಿ ಶೀಟರ್ ಹೇಗೆ ಪ್ರವೇಶ ಮಾಡಿದ ಎಂದು ಪ್ರಶ್ನೆ ಮಾಡಿದ್ದಾರೆ.

    Prakash Raj Alleged Rowdy sheeter Is Present In MAA Poling Booth

    ನುಕ್ಕಲ ಸಾಂಭ ಶಿವ ರಾವ್ ಎಂಬ ವ್ಯಕ್ತಿ 'ಮಾ' ಚುನಾವಣೆ ದಿವಸ ಮತಕೇಂದ್ರದಲ್ಲಿ ಹಾಜರಿದ್ದರು. ಅದಕ್ಕೆ ಸಂಬಂಧಿಸಿದ ಚಿತ್ರವನ್ನು ಪ್ರಕಾಶ್ ರೈ ಹಂಚಿಕೊಂಡಿದ್ದಾರೆ. ಅದೇ ವ್ಯಕ್ತಿ, ಮಂಚು ವಿಷ್ಣು ಜೊತೆಗೆ, ಹಿರಿಯ ನಟ ಮೋಹನ್‌ ಬಾಬು ಜೊತೆಗೆ ಹಾಗೂ ಸಿಎಂ ಜಗನ್ ಮೋಹನ್ ರೆಡ್ಡಿ ಜೊತೆಗೆ ಇರುವ ಚಿತ್ರವನ್ನೂ ಪ್ರಕಾಶ್ ರೈ ಹಂಚಿಕೊಂಡಿದ್ದಾರೆ.

    ''ಪ್ರಿಯ ಚುನಾವಣಾಧಿಕಾರಿ ಕೃಷ್ಣ ಮೋಹನ್ ಅವರೇ ಇದು ಕೇವಲ ಆರಂಭವಷ್ಟೆ. ನಮಗೆ ಸಿಸಿಟಿವಿ ಫುಟೇಜ್ ನೀಡಿ, ನಾವು ಜನರಿಗೆ ಹೇಳುತ್ತೇವೆ ಚುನಾವಣೆ ಹೇಗೆ ಆಗಿದೆಯೆಂದು'' ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ. ಈ ಮೊದಲು ಅವರು ಚುನಾವಣಾಧಿಕಾರಿಗೆ ಪತ್ರ ಬರೆದು ಚುನಾವಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಕೋರಿದ್ದರು.

    2017 ರಲ್ಲಿ ನುಕ್ಕಲ ಸಾಂಭಶಿವ ರಾವ್ ವಿರುದ್ಧ ದಾಖಲಾಗಿದ್ದ ಪ್ರಕರಣ ಮಾಹಿತಿ ಒಳಗೊಂಡ ಪತ್ರದ ಪ್ರತಿಯೊಂದನ್ನು ಹಂಚಿಕೊಂಡಿದ್ದಾರೆ ಪ್ರಕಾಶ್ ರೈ. ಅದರಲ್ಲಿ, ನುಕ್ಕಲ ಸಾಂಭ ಶಿವ ರಾವ್, ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಮಾಹಿತಿ ಇದೆ.

    English summary
    Actor Prakash Raj alleged rowdy sheeter Nukala Sambha Shiva Rao present in MAA election poling booth. Prakash Raj demand for CCTV footage of poling booth.
    Saturday, October 23, 2021, 21:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X