Just In
Don't Miss!
- Sports
ಅಜಿಂಕ್ಯ ರಹಾನೆ ಬಳಗಕ್ಕೆ ಕ್ವಾರಂಟೈನ್ ವಿನಾಯಿತಿ ನೀಡಿದ ಮಹಾರಾಷ್ಟ್ರ
- News
ಶಿವಮೊಗ್ಗದಲ್ಲಿ ಭಾರಿ ಸ್ಫೋಟ: ಕಂಪಿಸಿದ ಭೂಮಿ, ಜನತೆಯಲ್ಲಿ ಭಯ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಭಾಸ್ ಜೊತೆ ಸಿನಿಮಾದಲ್ಲಿ ನಟಿಸುವ ಆಸೆಯಿದೆಯೇ? ಹಾಗಿದ್ದರೆ ಹೀಗೆ ಮಾಡಿ
ಪ್ರಭಾಸ್ ಗೆ ನಾಯಕಿಯಾಗಲು ಟಾಪ್ ನಾಯಕಿಯರೇ ತುದಿಗಾಲಲ್ಲಿ ನಿಂತಿದ್ದಾರೆ. ಹಲವಾರು ನಟ-ನಟಿಯರು ಒಂದು ಸಿನಿಮಾದಲ್ಲಿ ಪ್ರಭಾಸ್ ಜೊತೆ ನಟಿಸಿದರೆ ತಮಗೆ ರಾಷ್ಟ್ರ ಮಟ್ಟದ ಗುರುತು ಸಿಗುತ್ತದೆಂದು ಹಾತೊರೆಯುತ್ತಾರೆ. ಆದರೆ ಇಂಥಹಾ ಅವಕಾಶ ದೊರೆಯುವುದು ಕೆಲವರಿಗಷ್ಟೆ.
ಪ್ರಭಾಸ್ ಜೊತೆ ನಟಿಸುವ ಆಸೆಯನ್ನು ಪೂರೈಸಿಕೊಳ್ಳುವ ಅವಕಾಶ ನೀಡುತ್ತಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಪ್ರಭಾಸ್ ಮುಂದಿನ ಸಿನಿಮಾ 'ಸಲಾರ್' ನಿರ್ದೇಶಿಸುತ್ತಿರುವ ಪ್ರಶಾಂತ್ ನೀಲ್, ತಮ್ಮ ಸಿನಿಮಾಕ್ಕಾಗಿ ಕಾಸ್ಟಿಂಗ್ ಕಾಲ್ ನೀಡಿದ್ದಾರೆ.
ಹುಷಾರ್... ಸೂರಿ ಸಿನಿಮಾಗಳ ಹೆಸರಿನಲ್ಲಿ 'ಕಾಗೆ' ಹಾರಿಸ್ತಿದ್ದಾರೆ
ಹೈದರಾಬಾದ್, ಬೆಂಗಳೂರು, ಚೆನ್ನೈಗಳಲ್ಲಿ ಆಡಿಶನ್ ನಡೆಯಲಿದ್ದು, ಸಲಾರ್ ಸಿನಿಮಾದಲ್ಲಿ ನಟಿಸಲು ಆಸಕ್ತಿ ಇರುವವರು ಇದೇ ತಿಂಗಳ 15 ನೇ ತಾರೀಖಿನಂದು, ಹೈದರಾಬಾದ್‌ನ ಸೆರಿಲಿಂಗಪಲ್ಲಿಯ ಅಲ್ಯೂಮೀನಿಯಂ ಕಾರ್ಖಾನೆಗೆ ಭೇಟಿ ನೀಡಬೇಕಿದೆ. ಅಲ್ಲಿ ಆಡಿಶನ್ ನಡೆಯಲಿದೆ.

ವಯಸ್ಸಿನ ನಿರ್ಭಂಧ ಇಲ್ಲ
ಯಾವುದೇ ವಯಸ್ಸಿನ ನಿರ್ಬಂಧವನ್ನು ವಿಧಿಸಿಲ್ಲವಾದ್ದರಿಂದ ಎಲ್ಲಾ ವಯೋಮಾನದವರು ಆಡಿಶನ್ ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಹೈದರಾಬಾದ್‌ನಲ್ಲಿ ಡಿಸೆಂಬರ್ 15 ರಂದು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಆಡಿಶನ್ ನಡೆಯಲಿದೆ. ಆಡಿಶನ್ ಗೆ ಸಂಬಂಧಿಸಿದಂತೆ ಸಂಪರ್ಕಿಸಲು ಮೂರು ಮೊಬೈಲ್ ಸಂಖ್ಯೆಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ ಪ್ರಶಾಂತ್ ನೀಲ್.

ಬೆಂಗಳೂರು-ಚೆನ್ನೈನಲ್ಲೂ ಆಡಿಶನ್
ಹೈದರಾಬಾದ್‌ನಲ್ಲಿ ಆಡಿಶನ್ ಮುಗಿದ ನಂತರ ಸಲಾರ್ ಚಿತ್ರತಂಡವು ಬೆಂಗಳೂರು ಹಾಗೂ ಚೆನ್ನೈಗೆ ಸಹ ಭೇಟಿ ನೀಡಲಿದ್ದು, ಅಲ್ಲಿಯೂ ಆಡಿಶನ್ ನಡೆಸಲಿದ್ದಾರೆ. ಆಡಿಶನ್ ಗೆ ತೆರಳುವವರು, ತಮ್ಮ ಉತ್ತಮ ಚಿತ್ರಗಳು, ನಟನೆಯ ವಿಡಿಯೋ , ತಮ್ಮ ಸ್ವ-ವಿವರ ಒಯ್ದಿದ್ದರೆ ಉತ್ತಮ.

ಕೆಜಿಎಫ್ 2 ಮುಗಿದ ನಂತರ ಸಲಾರ್
'ಸಲಾರ್' ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಲಿದ್ದಾರೆ. ಕೆಜಿಎಫ್ 2 ಮುಗಿಯುವ ಹಂತದಲ್ಲಿದ್ದು, ಆ ಸಿನಿಮಾ ಮುಗಿದ ನಂತರ ಸಲಾರ್ ಪ್ರಾರಂಭ ಮಾಡುವ ಸಾಧ್ಯತೆ ಇದೆ. ಪ್ರಭಾಸ್ ಸಹ ರಾಧೆ-ಶ್ಯಾಮ್ ಮುಗಿಸಿದ್ದು, ಆದಿಪುರುಷ್ ಸಿನಿಮಾ ಪ್ರಾರಂಭಿಸುತ್ತಿದ್ದಾರೆ. ಸಲಾರ್ ಮತ್ತು ಆದಿಪುರುಷ್ ಒಟ್ಟಿಗೆ ಚಿತ್ರೀಕರಣ ಗೊಳ್ಳುವ ಸಾಧ್ಯತೆ ಇದೆ.

ಕೆಜಿಎಫ್ ಸಿನಿಮಾಕ್ಕೂ ಕಾಸ್ಟಿಂಗ್ ಕಾಲ್ ನೀಡಲಾಗಿತ್ತು
ಈ ಮೊದಲು ಕೆಜಿಎಫ್ ಸಿನಿಮಾಕ್ಕಾಗಿ ಸಹ ಪ್ರಶಾಂತ್ ನೀಲ್ ಆಡಿಶನ್ ಮಾಡಿದ್ದರು. ಆ ಸಿನಿಮಾದ ಆಡಿಶನ್‌ಗೆ ಕಿ.ಮೀ ಗಟ್ಟಲೆ ಕ್ಯೂ ನಿಂತಿದ್ದರು ಆಸಕ್ತರು. ಪೊಲೀಸ್ ಸಹಾಯ ಪಡೆದು ಜನರನ್ನು ನಿಯಂತ್ರಿಸಲಾಗಿತ್ತು. ಕಾಸ್ಟಿಂಗ್ ಕಾಲ್ ಎಂಬುದು ಪ್ರಶಾಂತ್ ನೀಲ್ ಅವರ ಪ್ರಚಾರ ತಂತ್ರವೂ ಹೌದು.