For Quick Alerts
  ALLOW NOTIFICATIONS  
  For Daily Alerts

  ಪ್ರಶಾಂತ್ ನೀಲ್-ಜೂ.ಎನ್‌ಟಿಆರ್ ಸಿನಿಮಾಕ್ಕೆ ಎದುರಾದ ವಿಘ್ನ?

  |

  ಕೆಜಿಎಫ್ ಸಿನಿಮಾದಿಂದ ರಾಷ್ಟ್ರಮಟ್ಟದ ಖ್ಯಾತಿಗಳಿಸಿರುವ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ 2 ಬಳಿಕ ತಮ್ಮ ಮುಂದಿನ ಸಿನಿಮಾವನ್ನು ದಕ್ಷಿಣ ಭಾರತದ ಖ್ಯಾತ ನಟ ಜೂ.ಎನ್‌ಟಿಆರ್ ಜೊತೆಗೆ ಮಾಡುತ್ತಿದ್ದಾರೆ.

  Drug Mafia 15 ಜನ ಹೀರೋ, ಹೀರೋಯಿನ್ ದಾಖಲೆಯನ್ನು ಸಾಕ್ಷಿ ಸಮೇತ ಪೋಲೀಸರ ಕೈಗೆ ಕೊಟ್ಟ ಇ,ಲಂಕೇಶ್ |

  ಜೂ.ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಒಟ್ಟಿಗೆ ಸಿನಿಮಾ ಮಾಡುತ್ತಿರುವ ವಿಚಾರ ಈಗಾಗಲೇ ಘೊಷಣೆಯಾಗಿದೆ. ಇದೇ ವರ್ಷಾಂತ್ಯಕ್ಕೆ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಲಾಗಿತ್ತು. ಆದರೆ ಸಿನಿಮಾಕ್ಕೆ ಈಗ ವಿಘ್ನವೊಂದು ಎದುರಾಗಿದೆ.

  ಸೂಪರ್ ಹಿಟ್ ಸಿನಿಮಾ ಕೈಬಿಟ್ಟು ಕೈ-ಕೈ ಹಿಸುಕಿಕೊಂಡಿದ್ದ ಜೂ.ಎನ್‌ಟಿಆರ್‌

  ಹೌದು, ಆರ್‌ಆರ್‌ಆರ್‌ ಸಿನಿಮಾ ಹಾಗೂ ಅದರ ನಿರ್ದೇಶಕ ರಾಜಮೌಳಿಯೇ ಪ್ರಶಾಂತ್ ನೀಲ್-ಜೂ.ಎನ್‌ಟಿಆರ್ ಸಿನಿಮಾಕ್ಕೆ ವಿಘ್ನವಾಗಿ ಪರಿಣಮಿಸಿದ್ದಾರೆ!

  ಆರ್‌ಆರ್‌ಆರ್‌ ಕಾರಣದಿಂದ ಪ್ರಶಾಂತ್ ನೀಲ್‌ ಸಿನಿಮಾಕ್ಕೆ ಹಿನ್ನಡೆ?

  ಆರ್‌ಆರ್‌ಆರ್‌ ಕಾರಣದಿಂದ ಪ್ರಶಾಂತ್ ನೀಲ್‌ ಸಿನಿಮಾಕ್ಕೆ ಹಿನ್ನಡೆ?

  ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್‌' ಸಿನಿಮಾ ಕೊರೊನಾ ಕಾರಣಕ್ಕೆ ಚಿತ್ರೀಕರಣ ಬಂದ್ ಆಗಿದೆ. ಸ್ವತಃ ರಾಜಮೌಳಿಗೂ ಸಹ ಕೊರೊನಾ ಆದ ಕಾರಣ ಚಿತ್ರೀಕರಣ ಇನ್ನಷ್ಟು ತಡವಾಗಿದೆ. ಈ ಸಿನಿಮಾ ತಡವಾದ ಪರಿಣಾಮ ಪ್ರಶಾಂತ್ ನೀಲ್-ಜೂ.ಎನ್‌ಟಿಆರ್ ಸಿನಿಮಾದ ಮೇಲೆ ಬೀಳುತ್ತಿದೆ.

  ಆರ್‌ಆರ್‌ಆರ್ ಚಿತ್ರೀಕರಣ ಇನ್ನಷ್ಟು ವಿಳಂಬ ಆಗಲಿದೆ

  ಆರ್‌ಆರ್‌ಆರ್ ಚಿತ್ರೀಕರಣ ಇನ್ನಷ್ಟು ವಿಳಂಬ ಆಗಲಿದೆ

  ಆರ್‌ಆರ್‌ಆರ್‌ ಸಿನಿಮಾ ಬಹುತಾರಾಗಣದ ಸಿನಿಮಾ ಆಗಿದ್ದು, ಎಲ್ಲಾ ದೊಡ್ಡ ಸ್ಟಾರ್‌ಗಳೇ ಸಿನಿಮಾದಲ್ಲಿದ್ದಾರೆ. ಅವರುಗಳ ಪರಸ್ಪರ ಡೇಟ್ಸ್ ಹೊಂದಿಕೆ ಆಗುವುದು ಸಹ ಸುಲಭದ ಕಾರ್ಯವಲ್ಲ. ಹಾಗಾಗಿ ಆರ್‌ಆರ್‌ಆರ್‌ ಸಿನಿಮಾ ಚಿತ್ರೀಕರಣ ಇನ್ನಷ್ಟು ತಡವಾಗಲಿದೆ.

  ಮಹೇಶ್ ಬಾಬು- ಜೂ. ಎನ್‌ಟಿಆರ್ ಫ್ಯಾನ್ಸ್ ಕಿತ್ತಾಟಕ್ಕೆ ಕಾರಣವಾಯ್ತು ಒಂದು ಡೈಲಾಗ್!

  ಆರ್‌ಆರ್‌ಆರ್ ಬಳಿಕ ತ್ರಿವಿಕ್ರಮ್ ಜೊತೆಗೆ ಸಿನಿಮಾ

  ಆರ್‌ಆರ್‌ಆರ್ ಬಳಿಕ ತ್ರಿವಿಕ್ರಮ್ ಜೊತೆಗೆ ಸಿನಿಮಾ

  ಆರ್‌ಆರ್‌ಆರ್‌ ಬಳಿಕ, ತ್ರಿವಿಕ್ರಮ್ ಜೊತೆಗೆ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ ಜೂ.ಎನ್‌ಟಿಆರ್ ಆ ಸಿನಿಮಾದ ನಂತರ ಪ್ರಶಾಂತ್ ನೀಲ್ ಜೊತೆಗೆ ಸಿನಿಮಾ ಮಾಡಬೇಕಿದೆ ಜೂ.ಎನ್‌ಟಿಆರ್. ಹಾಗಾಗಿ ಸಿನಿಮಾ ಮಾಡುವುದೋ ಬೇಡವೋ ಎಂಬ ಗೊಂದಲಕ್ಕೆ ಜೂ.ಎನ್‌ಟಿಆರ್ ಬಿದ್ದಿದ್ದಾರೆ ಎಂದು ಕೆಲವು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

  2022 ರ ವರೆಗೆ ಕಾಯುತ್ತಾರಾ ಪ್ರಶಾಂತ್ ನೀಲ್?

  2022 ರ ವರೆಗೆ ಕಾಯುತ್ತಾರಾ ಪ್ರಶಾಂತ್ ನೀಲ್?

  ಆರ್‌ಆರ್‌ಆರ್‌ ಚಿತ್ರೀಕರಣ ತಡವಾಗುತ್ತಿರುವ ಕಾರಣದಿಂದ ತ್ರಿವಿಕ್ರಮ್ ಸಿನಿಮಾ ಸಹ ತಡವಾಗುತ್ತಿದ್ದು, 2021 ರ ಅಂತ್ಯದವರೆಗೆ ಜೂ.ಎನ್‌ಟಿಆರ್‌ ಗೆ ಡೇಟ್ಸ್ ಇಲ್ಲದಾಗಿಯಂತೆ. ಸ್ವತಃ ಪ್ರಶಾಂತ್ ನೀಲ್ ಜೂ.ಎನ್‌ಟಿಆರ್‌ ಗೋಸ್ಕರ 2022 ರ ವರೆಗೆ ಕಾಯುತ್ತಾರಾ ಎಂಬ ಅನುಮಾನ ಎದುರಾಗಿದೆ.

  'RRR' ಸಿನಿಮಾದ ನಟಿ ಗರ್ಭಿಣಿ: ಮತ್ತೆ ನಾಯಕಿಯ ಹುಡುಕಾಟದಲ್ಲಿ ರಾಜಮೌಳಿ?

  English summary
  Director Prashanth Neel and Jr NTR movie facing problem due to RRR movie. Jr NTR has no dates till 2022.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X