Don't Miss!
- Sports
ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್; ಟಿ20 ಸರಣಿಗೆ ರೆಡಿ
- News
ISWA: ಆಸ್ಟ್ರೇಲಿಯಾದ ಅನಿವಾಸಿ ಭಾರತೀಯರೊಂದಿಗೆ ಸಚಿವ ಪ್ರಲ್ಹಾದ್ ಜೋಶಿ ನಿಯೋಗ ಭೇಟಿ
- Finance
Gold Rate Today: ಚಿನ್ನ ಸ್ಥಿರ: ಪ್ರಮುಖ ನಗರಗಳಲ್ಲಿ ಜು.3ರಂದು ಬೆಲೆ ಎಷ್ಟು
- Technology
ಶೀಘ್ರದಲ್ಲೇ ವಾಟ್ಸಾಪ್ ಸೇರಲಿದೆ ಅತಿ ಉಪಯುಕ್ತ ಫೀಚರ್ಸ್! ವಿಶೇಷತೆ ಏನು?
- Automobiles
ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್
- Lifestyle
Weekly Horoscope: ಜುಲೈ 3ರಿಂದ ಜುಲೈ 9ರ ವಾರ ಭವಿಷ್ಯ: ಮೇಷ, ಮಿಥುನ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರು ಆರ್ಥಿಕ ಲಾಭ ಪಡೆಯಬಹುದು
- Education
JNV Result 2022 : 6ನೇ ತರಗತಿ ತಾತ್ಕಾಲಿಕ ಆಯ್ಕೆ ಪಟ್ಟಿ ಜು.10ರಂದು ಪ್ರಕಟ ಸಾಧ್ಯತೆ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ಜೂ ಎನ್‌ಟಿಆರ್ ಜೊತೆ ಹೊಸ ಸಿನಿಮಾ, ಪೋಸ್ಟರ್ ಹೊರಬಿಟ್ಟ ಪ್ರಶಾಂತ್ ನೀಲ್
ಜೂ ಎನ್‌ಟಿಆರ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ 'ಕೆಜಿಎಫ್; ಚಾಪ್ಟರ್ 1' ಮುಗಿದಾಗಿನಿಂದಲೂ ಹರಿದಾಡುತ್ತಲೇ ಇದೆ. ಆದರೆ ಆ ಸುದ್ದಿ ಇಂದು ಖಾತ್ರಿಯಾಗಿದೆ.
ಜೂ ಎನ್‌ಟಿಆರ್ ಹುಟ್ಟುಹಬ್ಬದ ಪ್ರಯುಕ್ತ ಇಂದು ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಹಾಗೂ ಜೂ ಎನ್‌ಟಿಆರ್ ಕಾಂಬಿನೇಷನ್‌ನಲ್ಲಿ ಬರಲಿರುವ ಮುಂದಿನ ಸಿನಿಮಾದ ಸಣ್ಣ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ.
ಟ್ವಿಟ್ಟರ್ ಪ್ರಶಾಂತ್ ನೀಲ್ ಪೋಸ್ಟರ್ ಹಂಚಿಕೊಂಡಿದ್ದು, ಜೂ ಎನ್‌ಟಿಆರ್ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಹಾಗೂ ಜೂ ಎನ್‌ಟಿಆರ್ ಕಾಂಬಿನೇಷನ್‌ನ ಹೊಸ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ ಇದು ಜೂ ಎನ್‌ಟಿಆರ್ ಅವರ ನಟನೆಯ 31ನೇ ಸಿನಿಮಾ ಆಗಿರಲಿದೆ.

ರಕ್ತದಲ್ಲಿ ತೊಯ್ದ ನೆಲ
''ರಕ್ತದಲ್ಲಿ ತೋಯ್ದ ನೆಲವಷ್ಟೆ ನೆನಪಿನಲ್ಲಿಟ್ಟುಕೊಳ್ಳಲು ಯೋಗ್ಯವಾಗಿರುತ್ತದೆ. ಅವನ ನೆಲ, ಅವನ ಗಡಿ ರಕ್ತದಲ್ಲಿ ತೊಯ್ದಿದೆ, ಆದರೆ ಅವನ ರಕ್ತದಲ್ಲ'' ಎಂದು ಬರೆದಿದ್ದಾರೆ ಪ್ರಶಾಂತ್ ನೀಲ್. ಪವರ್‌ಫುಲ್ ಪದಗಳ ಮೂಲಕ ಫವರ್‌ಫುಲ್ ಕತೆಯೊಂದನ್ನು ಕಟ್ಟಿಕೊಡುವ ಮುನ್ಸೂಚನೆ ನೀಡಿದ್ದಾರೆ ನೀಲ್.

ಕತೆ ಏನಿರಬಹುದು?
ಪ್ರಶಾಂತ್ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ಜೂ ಎನ್‌ಟಿಆರ್ ಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತುಸು ವಯಸ್ಸಾದ ಪಾತ್ರದಲ್ಲಿ ಜೂ ಎನ್‌ಟಿಆರ್ ಕಾಣಿಸಿಕೊಂಡಂತಿದೆ. ಉದ್ದ ಮೀಸೆ ಬಿಟ್ಟು ತುಸು ಹಳ್ಳಿ ವ್ಯಕ್ತಿಯ ಲುಕ್ ಸಹ ಇದೆ. ನೀಲ್ ಬರೆದಿರುವ ಸಾಲುಗಳು, ಪೋಸ್ಟರ್‌ನಲ್ಲಿ ಜೂ ಎನ್‌ಟಿಆರ್‌ರ ಲುಕ್ ಅನ್ನು ಸಮೀಕರಿಸಿ ನೋಡಿದರೆ, ಹಳ್ಳಿಯೊಂದನ್ನು ದುಷ್ಟರಿಂದ ತಲೆತಲಾಂತರದಿಂದ ಕಾಪಾಡಿಕೊಂಡು ಬಂದ ಕುಟುಂಬ ಅಥವಾ ವ್ಯಕ್ತಿಯ ಕುರಿತಾದ ಕತೆಯನ್ನು ಈ ಸಿನಿಮಾ ಹೊಂದಿರಲಿದೆ ಎಂದು ಊಹಿಸಬಹುದು.

'ಸಲಾರ್' ಸಿನಿಮಾದಲ್ಲಿ ನೀಲ್ ಬ್ಯುಸಿ
ಪ್ರಶಾಂತ್ ನೀಲ್ ಪ್ರಸ್ತುತ ಪ್ರಭಾಸ್ ಜೊತೆ 'ಸಲಾರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾದ ಶೇ 40% ಭಾಗ ಚಿತ್ರೀಕರಣ ಮುಗಿದಿದೆ. 'ಸಲಾರ್' ಮುಗಿಸಿದ ಬಳಿಕ ಜೂ ಎನ್‌ಟಿಆರ್ ಸಿನಿಮಾದ ಚಿತ್ರೀಕರಣವನ್ನು ಪ್ರಶಾಂತ್ ನೀಲ್ ಆರಂಭಿಸಲಿದ್ದಾರೆ. ಜೂ ಎನ್‌ಟಿಆರ್, ಪ್ರಶಾಂತ್ ನೀಲ್‌ರ ಮೆಚ್ಚಿನ ನಟ, ಅವರಿಗಾಗಿ ಫವರ್‌ಫುಲ್ ಪಾತ್ರವನ್ನೇ ಬರೆದಿರುವುದಾಗಿ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ. ಇದಕ್ಕಾಗಿ ಹಲವು ಬಾರಿ ಜೂ ಎನ್‌ಟಿಆರ್ ಅನ್ನು ಭೇಟಿಯಾಗಿದ್ದಾಗಿಯೂ ನೀಲ್ ಹೇಳಿಕೊಂಡಿದ್ದಾರೆ.

ಜೂ ಎನ್‌ಟಿಆರ್ 30 ಸಿನಿಮಾದ ಪೋಸ್ಟರ್ ಬಿಡುಗಡೆ
ಇನ್ನು ನಟ ಜೂ ಎನ್‌ಟಿಆರ್ 'RRR' ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಇದೀಗ ಕೊರಟಾಲ ಶಿವ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಅನ್ನು ಇಂದಷ್ಟೆ ಬಿಡುಗಡೆ ಮಾಡಲಾಗಿದೆ. ಜೂ ಎನ್‌ಟಿಆರ್ ರವರ 30ನೇ ಸಿನಿಮಾಕ್ಕೂ ಇನ್ನೂ ಹೆಸರಿಟ್ಟಿಲ್ಲ, ಆದರೆ ಭರ್ಜರಿ ಆಕ್ಷನ್ ಸಿನಿಮಾ ಇದಾಗಿರಲಿದೆ. ಪೋಸ್ಟರ್‌ನಲ್ಲಿ ಕತ್ತಿ ಹಿಡಿದು ಸಮುದ್ರ ಮಧ್ಯದಲ್ಲಿ ನಿಂತಿರುವ ಜೂ ಎನ್‌ಟಿಆರ್‌ರ ಚಿತ್ರವಿದೆ. ಸಿನಿಮಾ ಬಗ್ಗೆ ಜೂ ಎನ್‌ಟಿಆರ್ ಅಭಿಮಾನಿಗಳು ಭಾರಿ ನಿರೀಕ್ಷೆಯಿಂದಿದ್ದಾರೆ.