twitter
    For Quick Alerts
    ALLOW NOTIFICATIONS  
    For Daily Alerts

    ಟಾಲಿವುಡ್‌ ಅನ್ನು ಹೊಗಳಿದ ಮೋದಿ, ಸ್ಯಾಂಡಲ್‌ವುಡ್ ಎಳೆದು ತಂದ ವರ್ಮಾ!

    |

    ಯಾವುದೇ ರಾಜ್ಯಕ್ಕೆ ಹೋದರು ಆ ರಾಜ್ಯದ ವಿಶೇಷತೆಗಳ ಬಗ್ಗೆ ಭಾಷಣಗಳಲ್ಲಿ ಉಲ್ಲೇಖ ಮಾಡುವುದು ಪ್ರಧಾನಿ ಮೋದಿಯವರ ಶೈಲಿ. ಶನಿವಾರ ಹೈದರಾಬಾದ್‌ಗೆ ಭೇಟಿ ನೀಡಿದ್ದ ಮೋದಿ ತೆಲುಗು ಚಿತ್ರರಂಗವನ್ನು ಹಾಡಿ ಹೊಗಳಿದ್ದಾರೆ.

    ಹೈದರಾಬಾದ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ''ತೆಲುಗು ಚಿತ್ರರಂಗ ಈಗ ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದೆ. ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲ ಇಡೀಯ ವಿಶ್ವದಲ್ಲಿ ಈಗ ತೆಲುಗು ಸಿನಿಮಾಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಒಟಿಟಿ ಆಗಲಿ ಚಿತ್ರಮಂದಿರಗಳೇ ಆಗಲಿ ತೆಲುಗು ಚಿತ್ರರಂಗ ಚರ್ಚೆಗಳನ್ನು ಎಬ್ಬಿಸುತ್ತಿದೆ. ಭಾರತದ ಹೊರಗೆ ಸಹ ತೆಲುಗು ಸಿನಿಮಾಗಳನ್ನು ನೋಡಲಾಗುತ್ತಿದೆ'' ಎಂದು ಪ್ರಧಾನಿ ಮೋದಿ ಹೇಳಿದ್ದರು. ಈ ಬಗ್ಗೆ ತೆಲುಗು ಚಿತ್ರರಂಗದ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಇದೇ ವಿಷಯವಾಗಿ ಟ್ವೀಟ್ ಮಾಡಿದ್ದ ರಾಮ್‌ ಗೋಪಾಲ್ ವರ್ಮಾ, ತೆಲುಗು ಚಿತ್ರರಂಗದ ಬಗ್ಗೆ ಮೋದಿ ಮಾತು ಕೇಳಿ ತೆಲುಗು ಚಿತ್ರರಂಗ ಖುಷಿ ಪಡಬೇಕಾಗಿಲ್ಲ ಎಂದಿದ್ದಾರೆ. ''ತೆಲುಗು ಚಿತ್ರರಂಗದವರು ಮೋದಿ ಮಾತು ಕೇಳಿ ಡ್ಯಾನ್ಸ್ ಮಾಡುವ ಅಗತ್ಯವಿಲ್ಲ. ಮೋದಿ ಕೇವಲ 'ಬಾಹುಬಲಿ', 'ಪುಷ್ಪ' ಸಿನಿಮಾವನ್ನಷ್ಟೆ ಗಮನದಲ್ಲಿಟ್ಟುಕೊಂಡು ಮಾತನಾಡಿದ್ದಾರೆ. ವರ್ಷಕ್ಕೆ ನಾವು ಮಾಡುವ ಇತರೆ 150 ಸಿನಿಮಾಗಳ ಬಗ್ಗೆ ಅವರು ಮಾತನಾಡಿಲ್ಲ. ರಾಜಮೌಳಿ ಹಾಗೂ ಅಲ್ಲು ಅರ್ಜುನ್ ಕನ್ನಡಿಗರಾಗಿದ್ದರೆ ಮೋದಿ ಸ್ಯಾಂಡಲ್‌ವುಡ್‌ ಅನ್ನು ಹೊಗಳಿರುತ್ತಿದ್ದರು'' ಎಂದಿದ್ದಾರೆ.

    Prime Minister Modi Praised Tollywood, Ram Gopal Varma Said No Need To Celebrate
    ರಾಮ್ ಗೋಪಾಲ್ ವರ್ಮಾ ಒಂದೇ ಟ್ವೀಟ್‌ ಮೂಲಕ ಮೂರು ವಿಷಯಗಳನ್ನು ಪ್ರಸ್ತುತಪಡಿಸಿದ್ದಾರೆ. ರಾಜಮೌಳಿ ಹಾಗೂ ಅಲ್ಲು ಅರ್ಜುನ್ ಇಬ್ಬರಿಂದಷ್ಟೆ ತೆಲುಗು ಚಿತ್ರರಂಗ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂದಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸಹ ವಾರ್ಷಿಕ ಸಕ್ಸಸ್ ರೇಟ್ ಕನ್ನಡ ಹಾಗೂ ಇತರ ಚಿತ್ರರಂಗದಂತೆ ಕಡಿಮೆಯೇ ಇದೆ ಎಂದು ಹೇಳಿದ್ದಾರೆ. ಜೊತೆಗೆ ಕನ್ನಡ ಸಿನಿಮಾ ಉದ್ಯಮದಲ್ಲಿ ರಾಜಮೌಳಿ, ಅಲ್ಲು ಅರ್ಜುನ್ ರೀತಿಯ ಗ್ಲೋಬಲ್ ಸ್ಟಾರ್‌ಗಳು ಇಲ್ಲವೆಂದು ಸಹ ಪರೋಕ್ಷವಾಗಿ ಹೇಳಿದ್ದಾರೆ.

    ರಾಮ್ ಗೋಪಾಲ್ ವರ್ಮಾ ತಮ್ಮ ಸಹಿ ಟ್ವೀಟ್‌ಗಳಿಂದಲೇ ಜನಪ್ರಿಯರು. ಈ ಹಿಂದೆಯೂ ಹಲವು ಬಾರಿ ತೆಲುಗು ಚಿತ್ರರಂಗದ ಸ್ಟಾರ್ ನಟ ನಿರ್ದೇಶಕರನ್ನು ಟ್ವೀಟ್‌ಗಳ ಮೂಲಕ ಮುಜುಗರಕ್ಕೆ ಈಡು ಮಾಡಿದ್ದಾರೆ. ಅದರಲ್ಲಿಯೂ ನಟ ಪವನ್ ಕಲ್ಯಾಣ್ ಬಗ್ಗೆ ಸತತವಾಗಿ ಋಣಾತ್ಮಕ ಟ್ವೀಟ್‌ಗಳನ್ನು ಮಾಡಿದ್ದರು. ಪವನ್ ಕಲ್ಯಾಣ್ ಬಗ್ಗೆ ಸಿನಿಮಾ ಸಹ ತೆಗೆದಿದ್ದರು ರಾಮ್ ಗೋಪಾಲ್ ವರ್ಮಾ.

    ಇನ್ನು ಪ್ರಧಾನಿ ಮೋದಿಯವರು ತೆಲುಗು ಸಿನಿಮಾಗಳನ್ನು ಹೊಗಳುತ್ತಿರುವುದು ಇದು ಮೊದಲೇನೂ ಅಲ್ಲ ಈ ಹಿಂದೆ ಕೆಲವು ಬಾರಿ ತಮ್ಮ ಭಾಷಣದಲ್ಲಿ ತೆಲುಗು ಸಿನಿಮಾ 'ಬಾಹುಬಲಿ'ಯ ಉಲ್ಲೇಖ ಮಾಡಿದ್ದರು.

    English summary
    Prime minister Narendra Modi praised Telugu movie industry. Director Ram Gopal Varma said there is no need to celebrate.
    Monday, February 7, 2022, 22:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X