For Quick Alerts
  ALLOW NOTIFICATIONS  
  For Daily Alerts

  ಸೌತ್ ಸೂಪರ್ ಸ್ಟಾರ್ ಕಾಲೆಳೆದರೇ ಪ್ರಿಯಾ ಹಾಸನ್?

  |

  ಬಿಂದಾಸ್ ಹುಡುಗಿ ಪ್ರಿಯಾ ಹಾಸನ್ ತಮ್ಮ ಬಿಂದಾಸ್ ನಡೆ-ನುಡಿಗೆ ಹೆಸರಾದವರು ಎಂಬುದು ತುಂಬಾ ಮಂದಿಗೆ ಗೊತ್ತಿರುವ ಸುದ್ದಿಯೇ. ಗೊತ್ತಿಲ್ಲದಿದ್ದರೆ ಕೇಳಿ, ಇತ್ತೀಚಿಗೆ ಪ್ರಿಯಾ, ಕನ್ನಡದ ಖ್ಯಾತ ನಟರೊಬ್ಬರ ಕಾಲು ಎಳೆದು ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. "ಕನ್ನಡದ ನಟರೇ ಏಕೆ ಬೇರೆ ಭಾಷೆಗೆ ಹೋಗಬೇಕು? ಅಲ್ಲಿನ ನಟರೂ ಇಲ್ಲಿಗೆ ಬರಲಿ" ಎಂಬುದು ಪ್ರಿಯಾ ಆಡಿದ ಮಾತು.

  ಮೊದಲೆಷ್ಟೂ ಕನ್ನಡದ ನಟರು ಪರಭಾಷೆಗೆ ಹೋಗಿದ್ದರೂ ಇತ್ತೀಚಿಗೆ ಪರಭಾಷೆಯಲ್ಲಿ ಸದ್ದು ಮಾಡಿರುವುದು ಕನ್ನಡದ ನಟ ಕಿಚ್ಚ ಸುದೀಪ್. ಅವರು ತೆಲುಗಿನ ಈಗ ಚಿತ್ರದಲ್ಲಿ ನಟಿಸಿ ಅಂತಾರಾಷ್ಷ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ಎಲ್ಲರಿಗೂ ಗೊತ್ತು. ಹೀಗಿರುವಾಗ, ಪ್ರಿಯಾ ಸುದೀಪ್ ಕುರಿತೇ ಈ ಮಾತು ಆಡಿದ್ದು ಎಂಬುದು ಎಲ್ಲರ ಸಹಜವಾದ ಅನಿಸಿಕೆ. ಆದರೆ ಪ್ರಿಯಾ ಮನಸ್ಸಿನಲ್ಲಿ ಅದೇನಿತ್ತೋ ಬಲ್ಲವರಾರು?

  ಪ್ರಿಯಾ ಆಡಿದ ಮಾತು ಸುದೀಪ್ ಕುರಿತೇ ಆಗಿದ್ದರೂ ಅದು ವಿಶೇಷ ಅರ್ಥವನ್ನೂ ಒಳಗೊಂಡಿದೆ. ಏಕೆಂದರೆ, ಪ್ರಿಯಾರನ್ನು ಇಲ್ಲಿಯವರೆಗೂ ಯಾವೊಬ್ಬ ಕನ್ನಡದ ನಟರೂ ತಮ್ಮ ಚಿತ್ರದಲ್ಲಿ ನಾಯಕಿಯನ್ನಾಗಿ ಮಾಡಿಕೊಂಡಿಲ್ಲ. ನಿರ್ದೇಶಕ, ನಿರ್ಮಾಪಕರೂ ಪ್ರಿಯಾ ಹಾಕಿಕೊಂಡು ಚಿತ್ರ ಮಾಡಿದ್ದು ಕಡಿಮೆಯೇ. ಆ ನೋವು ಪ್ರಿಯಾ ಅವರಿಗೆ ಕಾಡಿದ್ದಿರಬೇಕು. ಇಡೀ ಚಿತ್ರೋದ್ಯಮವೇ ಅವರನ್ನು ಬೇರೆಯದೇ ರೀತಿಯಲ್ಲಿ ಟ್ರೀಟ್ ಮಾಡಿರುವುದರಿಂದ ಸಹಜವಾಗಿಯೇ ಪ್ರಿಯಾ ಆ ಮಾತು ಹೇಳಿದ್ದಿರಬಹುದು.

  ಈಗಂತೂ ಜಂಭದ ಹುಡುಗಿ ಪ್ರಿಯಾ ಹಾಸನ್, ಸ್ಮಗ್ಲರ್ ಆಗಿದ್ದು ಗೊತ್ತೇ ಇದೆ. ಕನ್ನಡ ಚಿತ್ರರಂಗದಲ್ಲಿ ತಾವು ಇನ್ನೊಬ್ಬ ಮಾಲಾಶ್ರೀ ಆಗಲು ಹೊರಟಂತಿದೆ. ಒಂದಾದ ಮೇಲೊಂದು ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸುತ್ತಾ, ಹೆಸರಿಗೊಬ್ಬರು ನಾಯಕರನ್ನು ತಮ್ಮ ಚಿತ್ರದಲ್ಲಿ ಹಾಕಿಕೊಂಡು ಅವರೊಂದಿಗೆ ಕೇವಲ ಡ್ಯುಯೆಟ್ ಹಾಡಿ ಇಡೀ ಚಿತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಪ್ರಿಯಾ ವರಸೆ ಹೊಸದೇನಲ್ಲ. ಆದರೆ ಪರಭಾಷೆಯ ನಟನೊಬ್ಬನನ್ನು ಕನ್ನಡಕ್ಕೆ ಕರೆದು ಇಲ್ಲಿನ ನಾಯಕರಿಗೆ ಬಿಸಿಮುಟ್ಟಿಸುವ ಪ್ರಯತ್ನ ಮಾಡಿದ್ದಂತೂ ಹೌದು.

  ಇದೀಗ ಪ್ರಿಯಾ ಹಾಸನ್ ಹೊಸ ಚಿತ್ರವೊಂದನ್ನು ಶುರುಮಾಡಿದ್ದಾರೆ. ಅದಕ್ಕೆ ನಾಯಕ, ನಾಯಕಿ ಎಲ್ಲಾ ಅವರೇ. ಆದರೂ ಎಂದಿನಂತೆ ಹೆಸರಿಗೊಬ್ಬರು ನಾಯಕರಾಗಿ ತೆಲುಗಿನ ರಮಣ ಎನ್ನುವವರನ್ನು ಕನ್ನಡಕ್ಕೆ ಕರೆದುತಂದಿದ್ದಾರೆ ಪ್ರಿಯಾ. ಈ ನಟ ತೆಲುಗಿನಲ್ಲಿ ಈಗಾಗಲೇ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಕನ್ನಡದಲ್ಲಿ ಇದು ಮೊದಲ ಚಿತ್ರವಾಗಿದೆ. ಪ್ರಿಯಾ ಜೊತೆ ಸ್ಮಗ್ಲರ್ ಚಿತ್ರದಲ್ಲಿ ನಟಿಸುತ್ತಿರುವ ಇವರು ಪ್ರಿಯಾ ಆಡಿದ ಮಾತಿಗೆ ಪೆಚ್ಚು ನಗೆ ನಕ್ಕರು ಅಷ್ಟೇ! (ಒನ್ ಇಂಡಿಯಾ ಕನ್ನಡ)

  English summary
  Kannada Actress Priya Hassan told that, why should Kannada actors only to go other languages films, Others also should come to Kannada. She told this in her upcoming movie Smuggler Launch. The movie Hero is Telugu actor Ramana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X