Don't Miss!
- Sports
SA Vs Eng 1st ODI: ಚೇಸಿಂಗ್ನಲ್ಲಿ ಎಡವಿದ ಇಂಗ್ಲೆಂಡ್ : ದಕ್ಷಿಣ ಆಫ್ರಿಕಾಗೆ 27 ರನ್ಗಳ ಜಯ
- News
Assembly elections: ಪಿಯುಸಿ ಮತ್ತು ಎಸೆಸೆಲ್ಸಿ ಪರೀಕ್ಷೆಯ ನಂತರವೇ ರಾಜ್ಯ ವಿಧಾನಸಭೆ ಚುನಾವಣೆ?
- Automobiles
ವೈರಲ್: ಬೆಂಗಳೂರಿನಲ್ಲಿ ಕಾಣಿಸಿಕೊಂಡಿತು ಹೊಚ್ಚ ಹೊಸ ವಾಹನ... ಇದರ ಬಗ್ಗೆ ಗೊತ್ತಾ?
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕ್ರೈಂ ಥ್ರಿಲ್ಲಿಂಗ್ ಚಿತ್ರಕ್ಕೆ ಪ್ರಿಯಾ ಪ್ರಕಾಶ್ ವಾರಿಯರ್ ನಾಯಕಿ!
'ಒರು ಅದಾರ್ ಲವ್' ಸಿನಿಮಾ ದೊಡ್ಡ ಸಕ್ಸಸ್ ಕೊಟ್ಟಿಲ್ಲ. ಆದರು ಪ್ರಿಯಾ ಪ್ರಕಾಶ್ ವಾರಿಯರ್ ಕೈಯಲ್ಲಿ ಹೆಚ್ಚು ಹೆಚ್ಚು ಸಿನಿಮಾ ಸೇರುತ್ತಿದೆ. ಸೌತ್ ಇಂಡಸ್ಟ್ರಿಯಲ್ಲಿ ಸದ್ದು ಮಾಡುತ್ತಿರುವ ಪ್ರಿಯಾ ಆ ಕಡೆ ಬಾಲಿವುಡ್ನಲ್ಲೂ ಮಿಂಚುವ ಸೂಚನೆ ನೀಡಿದ್ದಾರೆ.
ಇದೀಗ, ಕ್ರೈಂ ಥ್ರಿಲ್ಲರ್ ಚಿತ್ರವೊಂದಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಕುಡಿಪುಡಿ ವಿಜಯ್ ಕುಮಾರ್ ನಿರ್ದೇಶನ ಮಾಡಲಿರುವ ಮುಂದಿನ ಚಿತ್ರದಲ್ಲಿ ಪ್ರಿಯಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.
ಈ ಕುರಿತು ಪ್ರಿಯಾ ಜೊತೆ ಮಾತುಕತೆಯೂ ಮುಗಿಸಿದ್ದು, ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಈ ಚಿತ್ರಕ್ಕೆ ನಾಯಕ ಯಾರು ಎಂಬುದು ಸದ್ಯಕ್ಕೆ ಅಂತಿಮವಾಗಿಲ್ಲ. ಬಾಬಿ ಸಿಂಹ ಮತ್ತು ವಿವೇಕ್ ಒಬೆರಾಯ್ ಇಬ್ಬರಲ್ಲಿ ಒಬ್ಬರನ್ನು ಹೀರೋ ಮಾಡಲು ನಿರ್ದೇಶಕರು ಚಿಂತಿಸಿದ್ದಾರಂತೆ.
ದರ್ಶನ್-ಶಿವಣ್ಣ
ಬಗ್ಗೆ
ಪ್ರಿಯಾ
ವಾರಿಯರ್
ಏನಂದ್ರು?
ಇಬ್ಬರು ನಟರ ಜೊತೆ ಮಾತುಕತೆ ನಡೆಯುತ್ತಿದ್ದು, ಈ ಚಿತ್ರವನ್ನು ನಾಲ್ಕು ಭಾಷೆಯಲ್ಲಿ ರಿಲೀಸ್ ಮಾಡಲು ಚಿಂತಿಸಿದ್ದಾರಂತೆ. ತೆಲುಗು, ಹಿಂದಿ, ತಮಿಳು ಹಾಗೂ ಕನ್ನಡದಲ್ಲಿ ಈ ಚಿತ್ರ ತೆರೆಗೆ ತರುವ ಸಾಧ್ಯತೆ ಇದೆಯಂತೆ.
ಈ ಬಗ್ಗೆ ನಿರ್ದೇಶಕ ವಿಜಯ್ ಪ್ರತಿಕ್ರಿಯಿಸಿದ್ದು, ''ನಾನು ಈ ಚಿತ್ರದ ಸ್ಕ್ರಿಪ್ಟ್ ಬರೆಯುವಾಗಲೇ ಪ್ರಿಯಾ ಅವರನ್ನ ಗಮನದಲ್ಲಿಟ್ಟುಕೊಂಡಿದ್ದೆ. ಒರು ಅದಾರ್ ಲವ್ ಚಿತ್ರದಲ್ಲಿ ಕಾಲೇಜ್ ಹುಡುಗಿಯಾಗಿದ್ದ ಪ್ರಿಯಾ ಈಗ ಶ್ರೀದೇವಿ ಬಂಗಲೆ ಚಿತ್ರಕ್ಕಾಗಿ ಸಂಪೂರ್ಣವಾಗಿ ಬದಲಾಗಿದ್ದಾರೆ. ನಾನು ಅವರಲ್ಲಿ ಅದ್ಭುತ ನಟನೆ ಹಾಗೂ ಆಸಕ್ತಿ ಹೊಂದಿರುವ ಕಲಾವಿದೆಯನ್ನು ನೋಡಿದ್ದೀನಿ'' ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇನ್ನು ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿರುವ 'ಶ್ರೀದೇವಿ ಬಂಗಲೆ' ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ತೆಲುಗು ನಟ ನಿತೀನ್ ಜೊತೆಯಲ್ಲಿ ಒಂದು ಸಿನಿಮಾ ಮಾಡ್ತಿದ್ದು, ಆ ಚಿತ್ರ ಈಗಾಗಲೇ ಸೆಟ್ಟೇರಿದೆ.