For Quick Alerts
  ALLOW NOTIFICATIONS  
  For Daily Alerts

  ಚಾರುಲತಾ ತೆಲುಗು ರೀಮೇಕ್ ನ್ಯೂಸ್ ಠುಸ್!

  |

  ದ್ವಾರಕೀಶ್ ನಿರ್ಮಾಣದ ಕನ್ನಡ ಚಿತ್ರ ಚಾರುಲತಾ, ತಮಿಳು ಹಾಗೂ ತೆಲುಗಿನಲ್ಲಿ ರೀಮೇಕ್ ಆಗಲಿರುವ ಸುದ್ದಿ ಎಲ್ಲೆಡೆ ಪ್ರಚಾರವಾಗಿತ್ತು. ಚಾರುಲತಾ ಪಾತ್ರಧಾರಿ ಪ್ರಿಯಾಮಣಿಗಂತೂ ಆಕಾಶಕ್ಕೆ ಹಾರಲು ಮೂರೇ ಗೇಣು ಎಂಬಂತಾಗಿತ್ತು. ಆದರೆ, ತೆಲುಗು ರೀಮೇಕ್ ನ್ಯೂಸ್ ಠುಸ್ ಆಗಿದೆ.

  ಅಂದರೆ, ಕನ್ನಡದಲ್ಲಿ ಚಾರುಲತಾ ಚಿತ್ರ ಶೂಟಿಂಗ್ ಹಂತದಲ್ಲಿರುವಾಗಲೇ ಬಂದಿದ್ದ ತಮಿಳಿನ ರಮೇಶ್ ಕೃಷ್ಣಮೂರ್ತಿ ಮತ್ತು ತೆಲುಗಿನ ಅಲ್ಲು ಅರವಿಂದ್, ತಾವು ಈ ಚಿತ್ರವನ್ನು ಮರು ನಿರ್ಮಾಣ ಮಾಡುತ್ತೇವೆ ಎಂದಿದ್ದರು. ನೀವೇ ನಮ್ಮ ಸಿನಿಮಾಗಳಲ್ಲೂ ಹೀರೋಯಿನ್ ಎಂದೂ ಪ್ರಿಯಾಮಣಿಗೆ ಹೇಳಿದ್ದರು. ಸಹಜವಾಗಿ ಪ್ರಿಯಾ ಖುಷಿಯಲ್ಲಿದ್ದರು.

  ಆದರೆ ಈಗ, ಈ ಮೊದಲು ಆಸಕ್ತಿ ತೋರಿಸಿದ್ದ ಗೀತಾ ಆರ್ಟ್ಸ್‌ ನ ಅಲ್ಲು ಅರವಿಂದ್‌ (ಅಲ್ಲು ಅರ್ಜುನ್ ತಂದೆ) ಈ ಪ್ರಾಜೆಕ್ಟಿನಿಂದ ಹಿಂದಕ್ಕೆ ಸರಿದಿದ್ದಾರೆ. ಅವರಿಗೆ ಅದೇನಾಯ್ತೋ ಗೊತ್ತಾಗಿಲ್ಲ. ಆದರೆ ಚಾರುಲತಾ ಚಿತ್ರವನ್ನು ತೆಲುಗಿಗೆ ರೀಮೇಕ್ ಮಾಡುವುದಿಲ್ಲ ಎಂದುಬಿಟ್ಟಿದ್ದಾರೆ.

  ಅಲ್ಲಿಗೆ, ಎರಡು ಭಾಷೆಗಳ ರೀಮೇಕ್ ಹಕ್ಕು ಸಿಕ್ಕ ಖುಷಿಯಲ್ಲಿದ್ದ ನಿರ್ಮಾಪಕ ದ್ವಾರಕೀಶ್, ಅರ್ಧ ಖುಷಿ ಮಾತ್ರ ಅನುಭವಿಸುವಂತಾಗಿದೆ. ಹೀಗಾಗಿ 'ಚಾರುಲತಾ' ಕನ್ನಡದಲ್ಲಿ ಬಿಡುಗಡೆಯಾದ ನಂತರ ತಮಿಳಿಗೆ ಮಾತ್ರ ರಿಮೇಕ್ ಆಗುತ್ತಿದೆ. ಪ್ರಿಯಾಮಣಿಗೆ ತೆಲುಗಿಗೆ ಈ ಚಿತ್ರದ ಮೂಲಕ ದರ್ಶನ ನೀಡುವ ಭಾಗ್ಯ ಇಲ್ಲವಾಗಿದೆ.

  ಮೂರು ಭಾಷೆಗಳ ಚಿತ್ರ ನಿರ್ದೇಶನದ ಕನಸು ಕಂಡಿದ್ದ ನಿರ್ದೇಶಕ ಪೊನ್ ಕುಮಾರನ್ (ಪಿ. ಕುಮಾರ್) ಮುಖವೀಗ ಆಕಾಶ ನೋಡುತ್ತಿದೆ. ಹಾಲಿವುಡ್ 'ಅಲೋನ್' ಚಿತ್ರವನ್ನು ಅನಧಿಕೃತವಾಗಿ ಚಾರುಲತಾ ಹೆಸರಿನಿಂದ ತರಲಿದ್ದ ನಿರ್ದೇಶಕ ಪಿ ಕುಮಾರ್ ಅವರ ಆಸೆಗೀಗ ಸ್ವಲ್ಪ ನಿರಾಸೆ ಮೂಡಿದೆ. ಸದ್ಯ ಕನ್ನಡ ಹಾಗೂ ತಮಿಳು ಅವರ ಕೈಬಿಟ್ಟಿಲ್ಲವೆಂಬ ಖುಷಿಯಿದೆ.

  ಪ್ರಿಯಾಮಣಿಗೆ ನಾಯಕರಾಗಿ ಸ್ಕಂದ ಇದ್ದಾರೆ. ಉಳಿದಂತೆ ತಮಿಳಿನ ಸೀತಾ, ಶರಣ್ಯ ಪೊನ್ವಾನನ್, ಸಾಯಿ ಶಶಿ, ರವಿಶಂಕರ್, ಮಾ. ಮಂಜುನಾಥ್, ಸುನೇತ್ರಾ, ಸುದರ್ಶನ್ ಮುಂತಾದವರ ತಾರಾ ಬಳಗ ಈ ಚಿತ್ರಕ್ಕಿದೆ. ಸುಂದರ್ ಸಿ ಬಾಬು ಸಂಗೀತ, ಪನೀರ್ ಸೆಲ್ವಂ ಛಾಯಾಗ್ರಹಣವಿದೆ. ಡಬ್ಬಿಂಗ ಕೂಡ ಮಾಡಿರುವ ಪ್ರಿಯಾಮಣಿ ರಾಷ್ಟ್ರಪ್ರಶಸ್ತಿಯ ಕನಸು ಕಾಣುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Priyamani Charulatha Movie is not remaking in Telugu and remakes only in Tamil. Telugu producer Allu aravind rejects to remake this in Telugu now. So, Kannada actor cum producer Dwarakish, actress Priyamani and director P Kumar's dream spoiled half in this way. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X