twitter
    For Quick Alerts
    ALLOW NOTIFICATIONS  
    For Daily Alerts

    ಜಗತ್ತಿನ ಅತಿ ವೇಗದ ಎಸ್‌ಯುವಿ ಕಾರು ಖರೀದಿಸಿ 'ಕೆಜಿಎಫ್' ಹೆಸರು ಹಾಕಿಸಿದ ನಿರ್ಮಾಪಕ!

    |

    ಸಿನಿಮಾ ಹಾಗೂ ಕ್ರಿಕೆಟ್ ಸೆಲೆಬ್ರಿಟಿಗಳಿಗೆ ಕಾರಿನ ಕ್ರೇಜ್ ಹೆಚ್ಚು. ಕ್ರಿಕೆಟ್‌ ಸೆಲೆಬ್ರಿಟಿಗಳಿಗಿಂತಲೂ ಸಿನಿಮಾದವರಿಗೆ ತುಸು ಹೆಚ್ಚೇ ಕಾರ್ ಕ್ರೇಜ್ ಎಂದರೆ ತಪ್ಪಿಲ್ಲ.

    ಭಾರತದಲ್ಲಿ ಸಿನಿಮಾ ಸೆಲೆಬ್ರಿಟಿಗಳು ಹಲವು ಅದ್ಭುತವಾದ ಕಾರ್ ಕಲೆಕ್ಷನ್‌ಗಳನ್ನು ಹೊಂದಿದ್ದಾರೆ. ಬಾಲಿವುಡ್‌ನ ತಾರೆಯರಂತೆ ದಕ್ಷಿಣ ಭಾರತದ ಕೆಲವು ಸ್ಟಾರ್ ನಟ-ನಟಿಯರು ಸಹ ಕೆಲವು ಅತಿ ವೇಗದ, ಐಶಾರಾಮಿ ಕಾರುಗಳನ್ನು ಚಲಾಯಿಸುತ್ತಾರೆ.

    2009-2014: ತಮಿಳುನಾಡು ರಾಜ್ಯ ಸಿನಿಮಾ ಪ್ರಶಸ್ತಿ ವಿತರಣೆ: ಇಲ್ಲಿದೆ ಪಟ್ಟಿ2009-2014: ತಮಿಳುನಾಡು ರಾಜ್ಯ ಸಿನಿಮಾ ಪ್ರಶಸ್ತಿ ವಿತರಣೆ: ಇಲ್ಲಿದೆ ಪಟ್ಟಿ

    ಇದೀಗ ಜಗತ್ತಿನ ಅತ್ಯಂತ ವೇಗದ ಎಸ್‌ಯುವ ಕಾರನ್ನು ದಕ್ಷಿಣ ಭಾರತದ ನಿರ್ಮಾಪರೊಬ್ಬರು ಖರೀದಿ ಮಾಡಿದ್ದಾರೆ. ಅವರೇ ಅಜಯ್ ಮೈಸೂರು.

    ಮೈಸೂರು ಮೂಲದವರು ಎನ್ನಲಾಗುವ ಅಜಯ್ ಮೈಸೂರು, ಈವರೆಗೆ ನಿರ್ಮಾಣ ಮಾಡಿರುವುದು ಒಂದೇ ತೆಲುಗು ಸಿನಿಮಾ ಅದು, 'ಅಮ್ಮ ರಾಜ್ಯಂಲ್ಲೊ ಕಡಪ ರೆಡ್ಲು' ರಾಮ್ ಗೋಪಾಲ್ ವರ್ಮಾ ನಿರ್ದೇಶನ ಮಾಡಿದ್ದ ಈ ಸಿನಿಮಾ ಅಷ್ಟೇನು ಒಳ್ಳೆಯ ಪ್ರದರ್ಶನ ಕಾಣಲಿಲ್ಲ. ಆದರೆ ಈಗ ಈ ನಿರ್ಮಾಪಕ ಸುದ್ದಿಯಲ್ಲಿರುವುದು ತಮ್ಮ ಐಶಾರಾಮಿ ಹಾಗೂ ಅತಿ ವೇಗದ ಕಾರಿನಿಂದ.

    ಜಗತ್ತಿನ ಅತಿ ವೇಗದ ಎಸ್‌ಯುವಿ ಮಾದರಿಯ ಕಾರೆಂದು ಹೆಸರಾಗಿರುವ ಆಸ್ಟಿನ್ ಮಾರ್ಟಿನ್ ಕಾರನ್ನು ಅಜಯ್ ಮೈಸೂರು ಖರೀದಿಸಿದ್ದಾರೆ. ದಕ್ಷಿಣ ಭಾರತದ ಹಲವು ಸೆಲೆಬ್ರಿಟಿಗಳು ಎಸ್‌ಯುವಿ ಮಾದರಿಯ ಲ್ಯಾಂಬೊರ್ಗಿನಿ ಉರುಸ್ ಕಾರಿನ ಹಿಂದೆ ಬಿದ್ದಿದ್ದರೆ ನಿರ್ಮಾಪಕ ಅಜಯ್ ಮೈಸೂರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉರುಸ್ ಗಿಂತಲೂ ವೇಗದ ಹಾಗೂ ಐಶಾರಾಮಿ ಆಗಿರುವ ಆಸ್ಟಿನ್ ಮಾರ್ಟಿನ್ ಕಾರನ್ನು ಖರೀದಿಸಿದ್ದಾರೆ.

    ಕಾರಿಗೆ 'ಕೆಜಿಎಫ್' ಹೆಸರಿಟ್ಟ ನಿರ್ಮಾಪಕ

    ಕಾರಿಗೆ 'ಕೆಜಿಎಫ್' ಹೆಸರಿಟ್ಟ ನಿರ್ಮಾಪಕ

    ಆಸ್ಟಿನ್ ಮಾರ್ಟಿನ್ ಡಿಬಿಎಕ್ಸ್ 707 ಕಾರನ್ನು ಅಜಯ್ ಮೈಸೂರು ಖರೀದಿಸಿದ್ದಾರೆ. ಆ ಕಾರಿಗೆ 'ಕೆಜಿಎಫ್' ಎಂದು ಹೆಸರು ಹಾಕಿಸಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಅಜಯ್ ಮೈಸೂರು ಕಾರಿನ ನಂಬರ್ ಬದಲಿಗೆ ನಂಬರ್ ಪ್ಲೇಟ್ ಮೇಲೆ ತಮ್ಮಿಷ್ಟದ ಹೆಸರು ಹಾಕಿಸುವ ಸವಲತ್ತು ಹೊಂದಿದ್ದಾರೆ. ಹಾಗಾಗಿ 'ಕೆಜಿಎಫ್' ಹೆಸರನ್ನು ಅಜಯ್ ಮೈಸೂರು ಹಾಕಿಸಿದ್ದಾರೆ.

    ಕಾರಿನ ಬೆಲೆ ಎಷ್ಟು ಕೋಟಿ?

    ಕಾರಿನ ಬೆಲೆ ಎಷ್ಟು ಕೋಟಿ?

    ಗಡುಕಪ್ಪು ಬಣ್ಣದ ಆಸ್ಟಿನ್ ಮಾರ್ಟಿನ್ ಡಿಬಿಎಕ್ಸ್ 707 ಕಾರನ್ನು ಅಜಯ್ ಮೈಸೂರು ಖರೀದಿಸಿದ್ದು, ಈ ಕಾರಿನ ಬೆಲೆ ಭಾರತದಲ್ಲಿ ಸುಮಾರು 4.50 ರಿಂದ 5 ಕೋಟಿ ಆಗುತ್ತದೆ. ಲ್ಯಾಂಬೊರ್ಗಿನಿ ಉರುಸ್‌ಗಿಂತಲೂ ಸುಮಾರು 1.50 ಕೋಟಿ ಹೆಚ್ಚಿನ ಬೆಲೆ ಹಾಗೂ ಉರುಸ್‌ಗಿಂತಲೂ ಹೆಚ್ಚಿನ ವೇಗ ಹಾಗೂ ಲಕ್ಷುರಿ ಹಾಗೂ ಸೇಫ್ಟಿಯನ್ನು ಈ ಕಾರು ಹೊಂದಿದೆ. ಕೇವಲ 3 ಸೆಕೆಂಡ್‌ನಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗವನ್ನು ಇದು ಪಡೆದುಕೊಳ್ಳುತ್ತದೆ. ಇದಕ್ಕಿಂತಲೂ ವೇಗವಾಗಿ ಓಡುವ ಮತ್ತೊಂದು ಎಸ್‌ಯುವಿ ಮಾದರಿ ಕಾರು ಪ್ರಪಂಚದಲ್ಲಿಲ್ಲ.

    ಯಶ್ ಮೇಲಿನ ಅಭಿಮಾನಕ್ಕೆ ಕಾರಿಗೆ 'ಕೆಜಿಎಫ್' ಎಂದು ಹೆಸರಿಟ್ಟ ನಿರ್ಮಾಪಕ

    ಯಶ್ ಮೇಲಿನ ಅಭಿಮಾನಕ್ಕೆ ಕಾರಿಗೆ 'ಕೆಜಿಎಫ್' ಎಂದು ಹೆಸರಿಟ್ಟ ನಿರ್ಮಾಪಕ

    ಅಜಯ್ ಮೈಸೂರು ವಿಷಯಕ್ಕೆ ಮರಳುವುದಾದರೆ ಇವರು 'ಅಮ್ಮ ರಾಜ್ಯಂಲೊ ಕಡಪ ರೆಡ್ಲು' ಸಿನಿಮಾದ ಬಳಿಕ ಇದೀಗ ಇನ್ನೆರಡು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. 'ಅಜಯ್ ಮೈಸೂರು ಪ್ರೊಡಕ್ಷನ್‌ಹೌಸ್' ಸ್ಥಾಪಿಸಿ ಆ ಮೂಲಕ '10 ಕ್ಲಾಸ್ ಡೈರೀಸ್' ಸಿನಿಮಾ ಪ್ರಾರಂಭಿಸಿದ್ದಾರೆ. ಅದರ ಹೊರತಾಗಿ 'ದಿ ಹ್ಯಾಂಗ್ ಮ್ಯಾನ್' ಹೆಸರಿನ ಸಿನಿಮಾ ಸಹ ಪ್ರಾರಂಭಿಸಿದ್ದಾರೆ. ಆಸ್ಟಿನ್ ಮಾರ್ಟಿನ್ ಡಿಬಿಎಕ್ಸ್ 707 ಕಾರನ್ನು ಪವನ್ ಕಲ್ಯಾಣ್ ಹುಟ್ಟುಹಬ್ಬದ ವಿಶೇಷವಾಗಿ ತಾವು ಖರೀದಿಸಿದ್ದಾಗಿ ಇವರು ಹೇಳಿದ್ದಾರೆ. ಅಲ್ಲದೆ ಕಾರಿಗೆ 'ಕೆಜಿಎಫ್' ಎಂದು ಯಶ್‌ ಮೇಲಿನ ಅಭಿಮಾನಕ್ಕೆ ಇಟ್ಟಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    ಕಾರಿನ ಗರಿಷ್ಟ ವೇಗ 310 ಕಿ.ಮೀ.

    ಕಾರಿನ ಗರಿಷ್ಟ ವೇಗ 310 ಕಿ.ಮೀ.

    ಈ ಕಾರಿನ ಗರಿಷ್ಟ ವೇಗ 310 ಕಿ.ಮೀ. ಈ ಕಾರು ಬರೋಬ್ಬರಿ 700 ಹಾರ್ಸ್‌ ಪವರ್ ಹೊಂದಿದೆ. ಇದರ ಶಕ್ತಿಯ ಅಂದಾಜು ಸಿಗಬೇಕೆಂದರೆ ಭಾರತದಲ್ಲಿ ಶಕ್ತಿಗೆ ಹೆಸರಾಗಿರುವ ಸ್ಕಾರ್ಪಿಯೋದ ಹಾರ್ಸ್‌ ಪವರ್ ಜೊತೆ ಹೋಲಿಸಬೇಕು. ಸ್ಕಾರ್ಪಿಯೋದ ಹಾರ್ಸ್ ಪವರ್ 102 ಆಸ್ಟಿನ್ ಮಾರ್ಟಿನ್‌ ಡಿಬಿಎಕ್ಸ್‌ನದ್ದು 700! ವೇಗ ಮಾತ್ರವೇ ಅಲ್ಲದೆ ಹಲವು ವಿನೂತನ ಸೇಫ್ಟಿ ಫೀಚರ್ಸ್‌ಗಳನ್ನು ಸಹ ಆಸ್ಟನ್ ಮಾರ್ಟಿನ್ ಹೊಂದಿದೆ. ಎಷ್ಟೇ ವೇಗದಲ್ಲಿ ಬ್ರೇಕ್ ಹೊಡೆದರೂ ಗಾಡಿ ಪಲ್ಟಿ ಹೊಡೆಯದಂತೆ ವಿನೂತನ ತಂತ್ರಜ್ಞಾನವನ್ನು ಈ ಕಾರಿನಲ್ಲಿ ಬಳಸಲಾಗಿದೆಯಂತೆ.

    Recommended Video

    Coffee Nadu Chandu | ಬಿಟ್ಟಿ ಸಲಹೆ ಕೊಟ್ಟವ್ರಿಗೆ ಚಂದು ಖಡಕ್ ಉತ್ತರ | Filmibeat Kannada

    English summary
    Telugu movie producer Ajay Mysore purchased worlds fastest SUV car Aston Martin DBX 707. He named his car on KGF.
    Tuesday, September 6, 2022, 9:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X