For Quick Alerts
  ALLOW NOTIFICATIONS  
  For Daily Alerts

  ನಟಿ ಶ್ರಾವಣಿ ಆತ್ಮಹತ್ಯೆ ಪ್ರಕರಣ: ನಿರ್ಮಾಪಕ ಪೊಲೀಸರಿಗೆ ಶರಣು

  |

  ತೆಲುಗಿನ ಟಿವಿ ನಟಿ, ನಿರೂಪಕಿ ಶ್ರಾವಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿದ್ದ ಸಿನಿಮಾ ನಿರ್ಮಾಪಕ ಇಂದು ತಾನಾಗಿಯೇ ಪೊಲೀಸರಿಗೆ ಶರಣಾಗಿದ್ದಾನೆ.

  ನಟಿ ಶ್ರಾವಣಿ ಸೆಪ್ಟೆಂಬರ್ 8 ರಂದು ಆತ್ಮಹತ್ಯೆಗೆ ಶರಣಾಗಿದ್ದರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ನಿರ್ಮಾಪಕ ಅಶೋಕ್ ರೆಡ್ಡಿ ತಲೆಮರೆಸಿಕೊಂಡಿದ್ದ ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಇಂದು ಆತನೇ ಪೊಲೀಸರ ಮುಂದೆ ಶರಣಾಗಿದ್ದಾನೆ.

  ನಟಿಯ ಆತ್ಮಹತ್ಯೆ ಪ್ರಕರಣ: ಇಬ್ಬರನ್ನು ಬಂಧಿಸಿದ ಪೊಲೀಸರು

  ಆತ್ಮಹತ್ಯೆ ಪ್ರಕರಣದ ಮೂರನೇ ಆರೋಪಿಯಾಗಿರುವ ನಿರ್ಮಾಪಕ ಅಶೋಕ್ ರೆಡ್ಡಿ ಇಂದು ಪಂಜಾಗುಟ್ಟಾ ಪೊಲೀಸ್ ಠಾಣೆಯಲ್ಲಿ ಎಸಿಪಿ ತಿರುಪತಣ್ಣ ಎದುರು ಹಾಜರಾಗಿ ಶರಣಾಗಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿದ ಮೂರೂ ಮಂದಿ ಆರೋಪಿಗಳು ಪೊಲೀಸರ ವಶದಲ್ಲಿರುವಂತಾಗಿದೆ.

  ಇಬ್ಬರನ್ನು ಮೊದಲೇ ಬಂಧಿಸಿದ್ದ ಪೊಲೀಸರು

  ಇಬ್ಬರನ್ನು ಮೊದಲೇ ಬಂಧಿಸಿದ್ದ ಪೊಲೀಸರು

  ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರಾವಣಿ ಪ್ರಿಯಕರ ದೇವರಾಜ್ ರೆಡ್ಡಿ ಹಾಗೂ ಮಾಜಿ ಪ್ರಿಯಕರ ಸಾಯಿಕೃಷ್ಣ ರೆಡ್ಡಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇದೀಗ ಮೂರನೇ ಆರೋಪಿ ಅಶೋಕ್ ರೆಡ್ಡಿ ಯನ್ನೂ ಸಹ ಪೊಲೀಸರು ಬಂಧಿಸಿದ್ದಾರೆ.

  ಮಾನಸಿಕ ಕಿರುಕುಳದಿಂದ ಶ್ರಾವಣಿ ಆತ್ಮಹತ್ಯೆ

  ಮಾನಸಿಕ ಕಿರುಕುಳದಿಂದ ಶ್ರಾವಣಿ ಆತ್ಮಹತ್ಯೆ

  ಮಾನಸಿಕ ಕಿರುಕುಳ ತಾಳಲಾರದೆ ಶ್ರಾವಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದ್ದು, ಶ್ರಾವಣಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸುವಲ್ಲಿ ಈ ಮೂವರ ಪಾತ್ರವಿದೆ ಎಂದು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

  ಗೆಳೆಯನ ಕಿರುಕುಳ: ಕಿರುತೆರೆ ನಟಿ ಶ್ರಾವಣಿ ಆತ್ಮಹತ್ಯೆಗೆ ಶರಣು

  ಮದುವೆಯಾಗಲು ನಿರಾಕರಿಸಿದ್ದ ದೇವರಾಜ್ ರೆಡ್ಡಿ

  ಮದುವೆಯಾಗಲು ನಿರಾಕರಿಸಿದ್ದ ದೇವರಾಜ್ ರೆಡ್ಡಿ

  ಪೊಲೀಸರು ಹೇಳಿರುವಂತೆ, ಶ್ರಾವಣಿ ಪ್ರಿಯಕರ ದೇವರಾಜ್ ರೆಡ್ಡಿ, ಶ್ರಾವಣಿಯನ್ನು ಮದುವೆಯಾಗಲು ನಿರಾಕರಿಸಿದ್ದನಂತೆ. ಶ್ರಾವಣಿ ಮನೆಯವರ ಹೇಳಿಕೆ ಪ್ರಕಾರ, ದೇವರಾಜ್ ರೆಡ್ಡಿ ಕೆಲವು ವಿಡಿಯೋಗಳನ್ನು ಇಟ್ಟುಕೊಂಡು ಶ್ರಾವಣಿಯನ್ನು ಬ್ಲಾಕ್‌ಮೇಲ್ ಮಾಡಿದ್ದನಂತೆ.

  TRP ಗೋಸ್ಕರ ನನ್ನ ಕುಟುಂಬದ ನೆಮ್ಮದಿ ಹಾಳು ಮಾಡಿದ್ದು ಇಷ್ಟ ಆಗಿಲ್ಲ| Raksh | Filmibeat Kannada
  ಶ್ರಾವಣಿ ಮೇಲೆ ಹಲ್ಲೆ ಮಾಡಿದ್ದ ಸಾಯಿಕೃಷ್ಣ

  ಶ್ರಾವಣಿ ಮೇಲೆ ಹಲ್ಲೆ ಮಾಡಿದ್ದ ಸಾಯಿಕೃಷ್ಣ

  ಇನ್ನು ಶ್ರಾವಣಿ ಮಾಜಿ ಪ್ರಿಯಕರ ಸಾಯಿಕೃಷ್ಣ, ಶ್ರಾವಣಿ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಹಲ್ಲೆ ಮಾಡಿದ್ದ. ಶ್ರಾವಣಿ ಕುಟುಂಬಸ್ಥರಿಗೆ ಆಕೆಯ ವಿರುದ್ಧ ದೂರು ಹೇಳಿ, ಮನೆಯವರಿಂದಲೂ ಶ್ರಾವಣಿ ಮೇಲೆ ಹಲ್ಲೆ ಆಗುವಂತೆ ಮಾಡಿದ್ದ. ನಿರ್ಮಾಪಕ ಅಶೋಕ್ ರೆಡ್ಡಿ ಸಹ ಶ್ರಾವಣಿ ಜೊತೆಗೆ ದೈಹಿಕ ಸಂಬಂಧ ಹೊಂದಿದ್ದ ಎನ್ನಲಾಗುತ್ತಿದೆ. ತನಿಖೆ ನಂತರ ಸತ್ಯಾಂಶ ಹೊರಬರಲಿದೆ.

  English summary
  Producer Ashok Reddy surrender himself to police. He is accused in Shravani suicide case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X