For Quick Alerts
  ALLOW NOTIFICATIONS  
  For Daily Alerts

  ಅವನಿಗೆ ಕೃತಜ್ಞತೆ ಇಲ್ಲ: ತೆಲುಗು ನಟ ನಾನಿ ಬಗ್ಗೆ ನಿರ್ಮಾಪಕ ಬೇಸರ

  |

  ನಟ-ನಟಿಯರು ಚಿತ್ರರಂಗದಲ್ಲಿ ಬೆಳೆದ ಮೇಲೆ ತಮ್ಮ ಸ್ಟಾರ್ ಪಟ್ಟಕ್ಕೆ ಕಾರಣರಾದವರನ್ನು ಮರೆತು ಬಿಡುತ್ತಾರೆ ಎಂಬುದು ಎಲ್ಲ ಚಿತ್ರರಂಗದಲ್ಲಿಯೂ ಇರುವ ಸಾಮಾನ್ಯ ಆರೋಪ. ಕೆಲವು ನಟ-ನಟಿಯರು ಇದಕ್ಕೆ ಹೊರತಾಗಿ ಇದ್ದಾರಷ್ಟೆ.

  ತೆಲುಗಿನ ಸ್ಟಾರ್ ನಟ ನಾನಿ ಬಗ್ಗೆ ಅವರ ವೃತ್ತಿ ಜೀವನದ ಆರಂಭದ ಸಮಯದಲ್ಲಿ ಹಿಟ್ ಸಿನಿಮಾದಲ್ಲಿ ಅವಕಾಶ ಕೊಟ್ಟ ನಿರ್ಮಾಪಕರೊಬ್ಬರು 'ನಾನಿಗೆ ಕೃತಜ್ಞತೆ ಇಲ್ಲ' ಎಂದು ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

  ನಾನಿ ಅವರು ಹೀರೋ ಆಗಿ ದೊಡ್ಡ ಹಿಟ್‌ಗಾಗಿ ಹುಡುಕುತ್ತಿದ್ದಾಗ 'ಪಿಲ್ಲ ಜಮೀನ್ದಾರ್‌' ಸಿನಿಮಾ ದೊಡ್ಡ ಹಿಟ್ ಆಯಿತು. ಆ ಸಿನಿಮಾದ ಬಳಿಕ ರಾಜಮೌಳಿ, ಗೌತಮ್ ವಾಸುದೇವ ಮೆನನ್ ಅಂಥಹಾ ದೊಡ್ಡ ನಿರ್ದೇಶಕರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆದರೆ 'ಪಿಲ್ಲ ಜಮೀನ್ದಾರ್' ಸಿನಿಮಾದ ನಿರ್ಮಾಪಕ ಡಿಎಸ್‌ ರಾವ್, ನಾನಿಗೆ ಕೃತಜ್ಞತೆ ಇಲ್ಲ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

  2011ರಲ್ಲಿ ಬಿಡುಗಡೆ ಆಗಿದ್ದ 'ಪಿಲ್ಲ ಜಮೀನ್ದಾರ್'

  2011ರಲ್ಲಿ ಬಿಡುಗಡೆ ಆಗಿದ್ದ 'ಪಿಲ್ಲ ಜಮೀನ್ದಾರ್'

  'ಪಿಲ್ಲ ಜಮೀನ್ದಾರ್' ಸಿನಿಮಾವನ್ನು ಬಹುತೇಕ ಹೊಸಬರನ್ನೇ ಹಾಕಿಕೊಂಡು 2011 ರಲ್ಲಿ ನಿರ್ಮಾಣ ಮಾಡಿದ್ದರು ಡಿ.ಆರ್.ರಾವ್. ಸಿನಿಮಾ ಮುಗಿದು ಬಿಡುಗಡೆ ಆಗಿ ಚೆನ್ನಾಗಿ ಪ್ರದರ್ಶನ ಕಂಡು ರಾವ್‌ಗೆ ದೊಡ್ಡ ಲಾಭವನ್ನೇ ತಂದುಕೊಟ್ಟಿತು. ನಾನಿಗೂ ಸಹ ದೊಡ್ಡ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಟ್ಟಿತು ಆ ಸಿನಿಮಾ.

  ಉಡುಗೊರೆ ಕೊಟ್ಟಿದ್ದರಂತೆ ನಾನಿಗೆ

  ಉಡುಗೊರೆ ಕೊಟ್ಟಿದ್ದರಂತೆ ನಾನಿಗೆ

  ಸಿನಿಮಾ ಹಿಟ್ ಆದ ಕಾರಣ ಚಿತ್ರದಲ್ಲಿ ನಟಿಸಿದ್ದ ನಟ-ನಟಿಯರಿಗೆ ಸಂಭಾವನೆ ಜೊತೆಗೆ ದುಬಾರಿ ಉಡುಗೊರೆಗಳನ್ನು ಕೊಟ್ಟರಂತೆ ನಿರ್ಮಾಪಕ ರಾವ್. ಆದರೆ ನಾನಿ ಅದಾಗಲೇ ಒಳ್ಳೆಯ ಸಂಭಾವನೆ ಪಡೆದಿದ್ದರೂ ಸಹ ಉಡುಗೊರೆ ರೂಪದಲ್ಲಿ ಸಿನಿಮಾವನ್ನು ವಿದೇಶದಲ್ಲಿ ಬಿಡುಗಡೆ ಮಾಡುವ ಹಕ್ಕನ್ನು ಕೊಡುವಂತೆ ಕೇಳಿಕೊಂಡಿದ್ದರು.

  ವಿದೇಶ ಬಿಡುಗಡೆ ಹಕ್ಕು ಉಚಿತವಾಗಿ ಕೊಟ್ಟ ನಿರ್ಮಾಪಕ

  ವಿದೇಶ ಬಿಡುಗಡೆ ಹಕ್ಕು ಉಚಿತವಾಗಿ ಕೊಟ್ಟ ನಿರ್ಮಾಪಕ

  ಅಂತೆಯೇ ರಾವ್ ಸಹ ಓವರ್‌ಸೀಸ್ ಬಿಡುಗಡೆ ಹಕ್ಕನ್ನು ಉಚಿತವಾಗಿ ನಾನಿಗೆ ಕೊಟ್ಟಿದ್ದಾರೆ. ವಿದೇಶಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಿದ ನಾನಿ ಸಾಕಷ್ಟು ಹಣವನ್ನು ಗಳಿಸಿದರು. ಆದರೆ ಹಕ್ಕುಗಳನ್ನು ಪಡೆದ ಬಳಿಕ ನನಗೆ ಧನ್ಯವಾದ ಸಹ ಸಲ್ಲಿಸಲಿಲ್ಲ. ಎಷ್ಟು ಕಲೆಕ್ಷನ್ ಆಯ್ತು ಎಂಬ ಮಾಹಿತಿಯನ್ನೂ ನೀಡಲಿಲ್ಲ. ಆ ವ್ಯಕ್ತಿಗೆ ಕೃತಜ್ಞತೆಯೇ ಇಲ್ಲ ಎಂದಿದ್ದಾರೆ ರಾವ್.

  ಗೆಳತಿ ಮಾಲಾಶ್ರೀ ದುಃಖಕ್ಕೆ ಪತ್ರದ ಮೂಲಕ ಸಮಾಧಾನ ಮಾಡಿದ ನಟಿ ಶ್ರುತಿ | Filmibeat Kannada
  ರಾಜಮೌಳಿ,ಗೌತಮ್ ಮೆನನ್ ಸಿನಿಮಾಗಳಲ್ಲಿ ನಟನೆ

  ರಾಜಮೌಳಿ,ಗೌತಮ್ ಮೆನನ್ ಸಿನಿಮಾಗಳಲ್ಲಿ ನಟನೆ

  'ಪಿಲ್ಲ ಜಮೀನ್ದಾರ್' ಸಿನಿಮಾದ ಬಳಿಕ ರಾಜಮೌಳಿ ನಿರ್ದೇಶಿಸಿ ಸುದೀಪ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ 'ಈಗ' ಸಿನಿಮಾದಲ್ಲಿ ನಾನಿ ನಟಿಸಿದರು. ಅದಾದ ಬಳಿಕ ಗೌತಮ್ ವಾಸುದೇವ್ ಮೆನನ್ ನಿರ್ದೇಶನದ 'ಎಟೊ ವೆಳ್ಳಿ ಪೋಯಿಂದಿ ಮನಸ್ಸು' ಸಿನಿಮಾದಲ್ಲಿ ನಟಿಸಿದರು. ಆ ನಂತರ ತೆಲುಗಿನಲ್ಲಿ ನಾಯಕನಾಗಿ ಅವರ ಗ್ರಾಫ್ ಇಳಿಯಲೇ ಇಲ್ಲ.

  English summary
  Producer DS Rao said actor Nani is a selfish man. He said i gave him Pilla Zamindar movie overseas release rights as a gift he did not thanked me once.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X