For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್‌ನಲ್ಲಿ ಕಿರಿಯ ಕಲಾವಿದರು, ಟೆಕ್ನಿಷಿಯನ್‌ಗಳು ಭಿಕ್ಷುಕರಿಗಿಂತ ಕಡೆ: ಮೇಕಾ ರಾಮಕೃಷ್ಣ ಬೇಸರ

  |

  ಸಮಾಜದಲ್ಲಿ ಅಸ್ಪೃಶ್ಯತೆ, ಗುಲಾಮಗಿರಿ ಮತ್ತು ಜಾತಿ ತಾರತಮ್ಯವಿದೆ. ಚಿತ್ರರಂಗದಲ್ಲಿ ಇಂತಹ ಮಾತುಗಳು ಅಪರೂಪಕ್ಕೆ ಕೇಳಿಬರುತ್ತಿದ್ದರೂ, ದೊಡ್ಡವರು, ಚಿಕ್ಕವರು ಎಂಬ ವ್ಯತ್ಯಾಸ ದೊಡ್ಡದು. ಹಿರಿಯ ನಟ ಮೇಕಾ ರಾಮಕೃಷ್ಣ ಅವರು ಚಿಕ್ಕ ಕಲಾವಿದರು ಎಷ್ಟು ಕೆಟ್ಟದಾಗಿ ಕಾಣುತ್ತಾರೆ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

  ಆತ ತೆಲುಗು ಮೊದಲ ಡೈಲಿ ಸೀರಿಯಲ್ ಹೀರೋ ತೆಲುಗಿನ ಡೈಲಿ ಸೀರಿಯಲ್‌ಗಳಲ್ಲಿ ಮೊದಲ ಹೀರೋ. ಎರಡನೇ ಡೈಲಿ ಸೀರಿಯಲ್‌ನಲ್ಲೂ ಅವರೇ ಹೀರೋ.. ರುತುರಾಗಲು, ಅಮ್ಮಮ್ಮ. ಡಾಟ್‌ಕಾಮ್‌ನಂತಹ ಜನಪ್ರಿಯ ಧಾರಾವಾಹಿಗಳಲ್ಲಿ ಅವರ ಅದ್ಭುತ ಅಭಿನಯ ಪ್ರೇಕ್ಷಕರಿಗೆ ಅವರಿನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿದೆ. ನೂರಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಬಾಹುಬಲಿ', 'ಸೈರಾ' ಮುಂತಾದ ದೊಡ್ಡ ಸಿನಿಮಾಗಳಲ್ಲೂ ನಟಿಸಿದ್ದಾರೆ. 'ಬಾಹುಬಲಿ' ಚಿತ್ರದಲ್ಲಿ ತಮನ್ನಾ ಅವರ ಸಹೋದರನ ಪಾತ್ರದಲ್ಲಿ ನಟಿಸಿದ್ದರು. ಸುಮಾರು 30 ವರ್ಷಗಳಿಂದ ಚಿತ್ರರಂಗದಲ್ಲಿದ್ದು ನೂರಾರು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿರುವ ಮೇಕಾ ರಾಮಕೃಷ್ಣ ಕಿರುತೆರೆ ಹಾಗೂ ಬೆಳ್ಳಿತೆರೆ ಪ್ರೇಕ್ಷಕರಿಗೆ ಚಿರಪರಿಚಿತರು. ಹೆಚ್ಚಿನವರಿಗೆ ಹೆಸರು ಗೊತ್ತಿರಲಿಕ್ಕಿಲ್ಲ ಆದರೆ ಎದುರಾದರೆ ಮಾತ್ರ 'ಓ...ಈ ವ್ಯಕ್ತಿನಾ ತುಂಬಾ ಚೆನ್ನಾಗಿ ಅಭಿನಯಿಸುತ್ತಾನೆ' ಗುರುತಿಸಿ ಹೇಳುವಷ್ಟು ಜನಪ್ರಿಯರು. ಆದರೆ, ಅವರ ಹಿರಿತನದ ಹೊರತಾಗಿಯೂ, ಅವರು ಇನ್ನೂ ಸರಿಯಾಗಿ ಗುರುತಿಸಲ್ಪಟ್ಟಿಲ್ಲ.' ತನ್ನಂತಹ ಇತರ ಹಲವು ಪೋಷಕ ಕಲಾವಿದರಿಗೆ ಆಗುವ ಘೋರ ಅವಮಾನಗಳ ಬಗ್ಗೆ ತಿಳಿದರೆ ಈ ಸಿನಿಮಾರಂಗ ಹೀಗೂ ಇದೆಯಾ ಅಂತ ನೀವು ಭಾವಿಸಬಹುದು. ಆದರೆ ಪ್ರೊಡಕ್ಷನ್ ಹೌಸ್ ಗಳು ನಿರಂತರವಾಗಿ ಸಣ್ಣ ಕಲಾವಿದರ ಮೇಲೆ ದಬ್ಬಾಳಿಕೆ ನಡೆಸಿಕೊಂಡು ಬರುತ್ತಿದೆ ಅಂತಹ ದಬ್ಬಾಳಿಕೆಗೆ ಬಲಿಯಾದವರಲ್ಲಿ ನಾನು ಕೂಡ ಒಬ್ಬ!" ಎಂದು ನೋವಿನಿಂದ ಹೇಳುತ್ತಾರೆ ಮೇಕಾ ರಾಮಕೃಷ್ಣ.

  ದೊಡ್ಡವರು ಸಣ್ಣವರು ಎಂಬ ಭೇದಭಾವ

  ದೊಡ್ಡವರು ಸಣ್ಣವರು ಎಂಬ ಭೇದಭಾವ

  ಪ್ರೊಡಕ್ಷನ್ ಹೌಸ್ ಗಳಿಂದ ನಡೆಯುವ ಅವಮಾನಗಳಿಂದ ನೊಂದಿರುವ ಮೇಕಾ ರಾಮಕೃಷ್ಣ 'ಇಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ದೊಡ್ಡವರು, ಚಿಕ್ಕವರು ಎಂಬ ಭೇದ ತೋರಿ ಸಣ್ಣ ಕಲಾವಿದರನ್ನು ಅವಮಾನಿಸುತ್ತಾರೆ' ಅಂತ ಪ್ರೊಡಕ್ಷನ್ ಹೌಸ್ ಗಳ ಅಸಲಿ ಮುಖವನ್ನು ತೆರೆದಿಡುತ್ತಾರೆ.

  ನಿಜವಾಗಿ ಹೇಳಬೇಕೆಂದರೆ, ಯಾವೊಬ್ಬ ಪಾತ್ರಧಾರಿ ಕಲಾವಿದನೂ ಇಂಥ ವಿಷಯಗಳನ್ನು ಬಯಲಿಗೆಳೆಯುವ ಸಾಹಸ ಮಾಡುವುದಿಲ್ಲ. ಯಾಕೆಂದರೆ ಇದೆಲ್ಲವನ್ನು ಬಹಿರಂಗಪಡಿಸಿದರೆ ನಾಳೆ ಎಲ್ಲಿ ಪಾತ್ರವನ್ನು ಕೊಡುವುದಿಲ್ಲವೋ ಎಂಬ ಭಯದಿಂದ ಅವಮಾನಗಳನ್ನು ಸಹಿಸಿಕೊಂಡು ಬರುತ್ತಾರೆ ಹೊರತು ಅದನ್ನು ಬಹಿರಂಗಗೊಳಿಸುವುದಿಲ್ಲ. ಆದರೆ ಇಂತಹ ಅನೇಕ ಅವಮಾನಗಳನ್ನು ಸಹಿಸಿಕೊಂಡ ಮೇಕಾ ರಾಮಕೃಷ್ಣ ಪ್ರೊಡಕ್ಷನ್ ಹೌಸ್‌ಗಳಲ್ಲಿ ನಡೆಯುವ ಅರಾಜಕತೆಯನ್ನು ಮೌನ ಮುರಿದು ಬಯಲಿಗೆಳೆದಿದ್ದಾರೆ.

  ಪ್ರೊಡಕ್ಷನ್ ಬಾಯ್ಸ್ ಕೂಡ ಕೀಳಾಗಿ ನೋಡುತ್ತಾರೆ

  ಪ್ರೊಡಕ್ಷನ್ ಬಾಯ್ಸ್ ಕೂಡ ಕೀಳಾಗಿ ನೋಡುತ್ತಾರೆ

  ''ಇಂಡಸ್ಟ್ರಿಯಲ್ಲಿ ನನಗೆ ಬೇಸರ ತರಿಸುವ ಘಟನೆಗಳು ಸಾಕಷ್ಟಿವೆ. ಜೀವನವೇ ವ್ಯರ್ಥ ಎಂದು ಕಣ್ಣೀರು ಹಾಕಿದ ಸಂದರ್ಭಗಳೂ ಇವೆ. ನೀವು ಯಾವುದೇ ಸಿನಿಮಾ ಸೆಟ್ ಗೆ ಹೋದರು ದೊಡ್ಡವರನ್ನೆಲ್ಲಾ ಒಂದು ರೀತಿ ನಡೆಸಿಕೊಳ್ಳುತ್ತಾರೆ. ಚಿಕ್ಕ ಕಲಾವಿದರನ್ನು ಇನ್ನೊಂದು ರೀತಿ ನಡೆಸಿಕೊಳ್ಳುತ್ತಾರೆ. ಆದರೆ ತಪ್ಪಿಲ್ಲ...ದೊಡ್ಡ ಕಲಾವಿದರು ದೊಡ್ಡ ತಾರೆಯರಿಗೆ ಸಿಗಬೇಕಾದ

  ಗೌರವ ಮತ್ತು ಮರ್ಯಾದೆ ಸಿಗಬೇಕು, ಸಿಗಲಿ. ಅದರ ಬಗ್ಗೆ ನನ್ನ ತಕರಾರಿಲ್ಲ. ಆದರೆ ಸಣ್ಣ ಕಲಾವಿದರನ್ನು ನಡೆಸಿಕೊಳ್ಳುವ ರೀತಿ ಇದೆಯಲ್ಲ ಅದು ಘೋರ ಅವಮಾನಕರವಾಗಿ. ಅವರನ್ನು ಕೂಡ ಕಲಾವಿದರಂತೆ ನೋಡಿ ಕನಿಷ್ಠ ಮನುಷ್ಯರಂತೆ ಅಂತಾದರೂ ನೋಡುವ ಪ್ರಯತ್ನ ಮಾಡಿ. ಸಣ್ಣ ಕಲಾವಿದರೆಂದರೆ ಪ್ರೊಡಕ್ಷನ್ ಹುಡುಗರು ಕೂಡ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ತುಂಬಾ ನಾಚಿಕೆಗೇಡಿನ ಅನಿಸುತ್ತದೆ.. ಅವರು ನಡೆಸಿಕೊಳ್ಳುವ ರೀತಿ ನೋಡಿದರೆ ನರಕ ಅನಿಸುತ್ತದೆ"

  ಭಿಕ್ಷುಕರಗಿಂತ ಕಡೆಯಾಗಿ ಟ್ರೀಟ್

  ಭಿಕ್ಷುಕರಗಿಂತ ಕಡೆಯಾಗಿ ಟ್ರೀಟ್

  ಈ ವಿಚಾರದಲ್ಲಿ ನಾನು ಸಿನಿಮಾದ ನಿರ್ಮಾಪಕ ಮೇಲೆ ಆರೋಪ ಮಾಡುವುದಿಲ್ಲ. ಅವರು ಎಲ್ಲವನ್ನೂ ವ್ಯವಸ್ಥಿತವಾಗಿ ಒದಗಿಸಿಕೊಟ್ಟಿರುತ್ತಾರೆ. ಆದರೆ ಈ ಪ್ರೊಡಕ್ಷನ್ ಬಾಯ್ಸ್ ಮಾತ್ರ ಭಿಕ್ಷುಕರಗಿಂತ ಕಡೆಯಾಗಿ ಜೂನಿಯರ್ ಆರ್ಟಿಸ್ಟ್ ಗಳನ್ನು ನೋಡುತ್ತಾರೆ. ಎಷ್ಟು ಸಲ ಇದನ್ನೆಲ್ಲಾ ನೋಡಿ ಕೋಪವನ್ನು ಕಂಟ್ರೋಲ್ ಮಾಡಿಕೊಳ್ಳಲಾಗದೆ ಅಲ್ಲಿಯೇ ಪ್ರತಿಭಟಿಸಿದ್ದು ಇದೆ. ಇಷ್ಟೆಲ್ಲಾ ಗಲಾಟೆ ಯಾಕೆ ಅಂತ ಹೇಳಿ ನಾನೇ ಮನೆಯಿಂದ ಈಗ ಊಟ ತೆಗೆದುಕೊಂಡು ಹೋಗುತ್ತೇನೆ.

  ಊಟಕ್ಕೂ ನಾಲ್ಕಾರು ಕ್ಯಾಟಗರಿ ಇದೆ

  ಊಟಕ್ಕೂ ನಾಲ್ಕಾರು ಕ್ಯಾಟಗರಿ ಇದೆ

  ಬಹುತೇಕ ನಿರ್ಮಾಪಕರು ಮಾಡುತ್ತಿರುವುದು ಹೀಗೆ ಇದೆ. ಆಹಾರ ನೀಡುವ ವಿಚಾರದಲ್ಲಿ ಕೂಡ ನಾಲ್ಕು ವಿಭಾಗಗಳೂ ಇವೆ. ಅಪ್ಪಿತಪ್ಪಿಯೂ ನಮಗೆ ನಿಯೋಜಿಸಿದ ಜಾಗದ ಬದಲು ಮುಂದಿನ ಜಾಗಕ್ಕೆ ಹೋದರೆ ಅವರನ್ನು ಕೆಟ್ಟದಾಗಿ ಕಾಣುತ್ತಾರೆ. ಪೋಷಕ ಕಲಾವಿದರು ಹಾಗೂ ಜೂನಿಯರ್ ಆರ್ಟಿಸ್ಟ್ ಗಳಿಗೆ ಪ್ರತ್ಯೇಕ ಟೆಂಟ್ ಹಾಕಲಾಗುತ್ತಿದೆ. ಅವರು ಅದರಲ್ಲಿ ಇರಬೇಕು.. ಅವರು ಅದರಲ್ಲಿ ತಿನ್ನಬೇಕು. ನಿರ್ಮಾಪಕರು, ಹೀರೋಗಳು, ಹೀರೋಯಿನ್ ಗಳಿಗೆ ಒಂದೆಡೆ. ಇನ್ನೊಂದೆಡೆ ನಿರ್ದೇಶಕ ಮತ್ತು ಇತರ ಸೀನಿಯರ್ ಟೆಕ್ನಿಷನ್‌ಗಳು, ಇನ್ನೊಂದೆಡೆ ಪೋಷಕ ನಟರು ಇನ್ನೊಂದೆಡೆ ಸೆಕೆಂಡ್ ಗ್ರೇಡ್ ಟೆಕ್ನಿಷನ್ ಗಳು ಎರಡನೇ ದರ್ಜೆಯ ಪೋಷಕ ಕಲಾವಿದರಿಗೆ ಮೀಸಲು. ಈ ನಾಲ್ಕನೆಯ ಜಾಗದಲ್ಲಿ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ಎಷ್ಟು ಸಲ ಇಂಥ ವಿಚಾರಗಳು ನಿರ್ಮಾಪಕರ ಗಮನಕ್ಕೆ ಬಂದರೂ ಪ್ರತಿಕ್ರಿಯಿಸುವುದಿಲ್ಲ

  ಕುಡಿಯಲು ಟಾಯ್ಲೆಟ್ ನೀರು ಕೊಡುತ್ತಾರೆ

  ಕುಡಿಯಲು ಟಾಯ್ಲೆಟ್ ನೀರು ಕೊಡುತ್ತಾರೆ

  ಜೂನಿಯರ್ ಆರ್ಟಿಸ್ಟ್ , ಸೆಕೆಂಡ್ ಗ್ರೇಡ್ ಟೆಕ್ನಿಷಿಯನ್ ಗಳ ಜೊತೆ ಪ್ರೊಡಕ್ಷನ್ ಹುಡುಗರು ತುಂಬಾ ಕೆಟ್ಟದಾಗಿ ವರ್ತಿಸುತ್ತಾರೆ. ಅವರು ತಮ್ಮ ಸ್ವಂತ ಮನೆಯಿಂದ ತಂದ ಹಣದಲ್ಲಿ ಇವರಿಗೆಲ್ಲ ಊಟ ಹಾಕುವಂತೆ ವರ್ತಿಸುತ್ತಾರೆ. ಎಷ್ಟೋ ಜನರು ಇವರ ವರ್ತನೆಗಳಿಂದ ಕಣ್ಣೀರು ಹಾಕಿಕೊಂಡಿದ್ದು ಇದೆ. ಎಷ್ಟು ಸಲ ಎಷ್ಟು ವಿಕೃತವಾಗಿ ವರ್ತಿಸುತ್ತಾರೆ ಎಂದರೆ ನೀವು ವಾಟರ್ ಕೇಳಿದರೆ

  ಟಾಯ್ಲೆಟ್ ನೀರನ್ನು ಹಿಡಿದು ತಂದುಕೊಡುತ್ತಾರೆ. ಆದರೂ ಅನೇಕರು ಇದನ್ನೆಲ್ಲಾ ಸಹಿಸಿಕೊಂಡು ಬರುತ್ತಾರೆ. ಏಕೆಂದರೆ ಇವರಿಗೆಲ್ಲಾ ಬದುಕಲಿಕ್ಕೆ ಬೇರೆ ದಾರಿಗಳು ಇಲ್ಲ.ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಕಾರಣಕ್ಕೆ ಇದೆಲ್ಲಾ ಸಹಿಸಿಕೊಳ್ಳುತ್ತಿದ್ದಾರೆ" ಎಂದು ವಿಷಾದದಿಂದ ಹೇಳುತ್ತಾರೆ ರಾಮಕೃಷ್ಣ.

  English summary
  Tollywood production houses treat jounir artists and techinices lesser than beggars: Senior artist Meka Rama Krishna. Senior Artist Meka Rama krishna Reveals Tollywood Production Houses Harassment.
  Tuesday, February 1, 2022, 13:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X