Don't Miss!
- News
ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್ಪ್ರೆಸ್ ರೈಲಿನ ಸಮಯದಲ್ಲಿ ಬದಲಾವಣೆ: ನಿಲುಗಡೆ, ಸಮಯದ ಮಾಹಿತಿ ಇಲ್ಲಿ ಪಡೆಯಿರಿ
- Sports
WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪುಷ್ಪ 2': ಅಲ್ಲು ಅರ್ಜುನ್ ಜೊತೆ ನಟಿಸಲು ಬಂಪರ್ ಆಫರ್, ನೀವೂ ಟ್ರೈ ಮಾಡಬಹುದು!
'ಪುಷ್ಪ 2' ಸಿನಿಮಾದ ಬಗ್ಗೆ ಒಂದಲ್ಲ ಒಂದು ಸುದ್ದಿ ಹೊರ ಬೀಳುತ್ತಲೇ ಇದೆ. ಆದರೆ ಈ ಬಾರಿ 'ಪುಷ್ಪ 2' ಚಿತ್ರತಂಡ ಅಲ್ಲು ಅಭಿಮಾನಿಗಳಿಗೆ ಸಿಹಿ ಸುದ್ದಿಕೊಟ್ಟಿದೆ. ತೆರೆಯ ಮೇಲೆ ನೀವು ಅಲ್ಲು ಅರ್ಜುನ್ ಕಂಡು ಖುಷಿ ಪಡುತ್ತಿದ್ದೀರಿ. ಆದರೆ ಈಗ ಅವರ ಜೊತೆಗೆ ನಟಿಸುವ ಅವಕಾಶ ಬಂದಿದೆ.
ನಿಮಗೂ ಕೂಡ ಅಲ್ಲು ಅರ್ಜುನ್ ಜೊತೆಗೆ ನಟಿಸುವ ಆಸೆ ಇದೆಯಾ. ಹಾಗಿದ್ದರೆ ಹೆಚ್ಚಿನದೇನು ಮಾಡಬೇಕಾಗಿಲ್ಲ. ಚಿತ್ರದ ಆಡಿಷನ್ ಗೆ ಹೋದರೆ ಸಾಕು.
ಪುಷ್ಪ
2
ಮುನ್ನ
ಅಲ್ಲು
ಅರ್ಜುನ್
ಮತ್ತೊಂದು
ಸಿನಿಮಾ:
ಯಾವುದದು?
ಅಲ್ಲು ಅರ್ಜುನ್ ಜೊತೆಗೆ ನಟಿಸಲು ಸೂಪರ್ ಚಾನ್ಸ್ ಇದೆ ಎಂದು ನಿರ್ಮಾಪಕರು ಅಧಿಕೃತ ಹೇಳಿಕೆ ನೀಡಿದ್ದಾರೆ. ಯಾರಾದರೂ ಅಲ್ಲು ಅರ್ಜುನ್ ಜೊತೆ ನಟಿಸಲು ಬಯಸುವಿರಾ? ಹೌದು ಎಂದಾದರೆ, ಈ ಆಡಿಷನ್‌ಗಳಿಗೆ ಹಾಜರಾಗಿ ಎಂದು ನಿರ್ಮಾಣ ಸಂಸ್ಥೆ ಹೇಳಿದೆ.

ಅಲ್ಲು ಅರ್ಜುನ್ ಜೊತೆಗೆ ನೀವೂ ನಟಿಸಿ!
ನಟ ಅಲ್ಲು ಅರ್ಜುನ್ ಜೊತೆಗೆ ನಟಿಸಲು ಯಾರಿಗಾದರು ಇಚ್ಛೇ ಇದ್ದಲ್ಲಿ. ಪುಷ್ಪ 2 ಸಿನಿಮಾದಲ್ಲಿ ಅಭಿನಯಿಸಬಹುದು. ಆದರೆ ಇದಕ್ಕೆ ಚಿತ್ರತಂಡವೇ ಅವಕಾಶ ಮಾಡಿಕೊಟ್ಟಿದೆ. ಹೌದು ನಿರ್ಮಾಣ ಸಂಸ್ಥೆ ಹೀಗೊಂದು ಬಹಿರಂಗ ಹೇಳಿಕೆ ಪ್ರಕಟ ಮಾಡಿದೆ.
'ಪುಷ್ಪ
2'
ರಿಲೀಸ್
ಪೋಸ್ಟ್
ಪೋನ್,
ಈ
ವರ್ಷ
'ಪುಷ್ಪ
2'
ಬರಲ್ಲ!

ತಿರುಪತಿಯಲ್ಲಿ ಸಾರ್ವಜನಿಕವಾಗಿ ಆಡಿಷನ್!
'ಪುಷ್ಪ 2' ಚಿತ್ರದ ಆಡಿಷನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ತಿರುಪತಿಯಲ್ಲಿ ಆಡಿಷನ್ ನಡೆಯಲಿದೆ. ಎಲ್ಲಾ ವಯಸ್ಸಿನ ಮಕ್ಕಳು, ಮಹಿಳೆ, ಪುರುಷರಿಗೆ ಅವಕಾಶ ಇದೆ. ಜುಲೈ 3,4 ಮತ್ತು 5ರಂದು ತಿರುಪತಿಯ ಮೇಕ್ ಮೈ ಬೇಬಿ ಜೀನಿಯಸ್ ಶಾಲಾ ಆವರಣದಲ್ಲಿ ಆಡಿಷನ್ ನಡೆಯಲಿದೆ. ಎಲ್ಲರಿಗೂ ಭಾಗವಹಿಸಲು ಮುಕ್ತ ಅವಕಾಶ ಇದೆ.
|
ಒಂದೇ ಒಂದು ಷರತ್ತು!
ಪುಷ್ಪ 2 ಚಿತ್ರದ ಆಡಿಷನ್‌ನಲ್ಲಿ ಮುಕ್ತವಾಗಿ ಭಾಗವಹಿಸಬಹುದು. ಯಾರು ಬೇಕಾದರೂ, ಯಾವ ವಯಸ್ಸಿನವರು ಬೇಕಾದರೂ ಭಾಗವಹಿಸಬಹುದು. ಆದರೆ ಆಡಿಷನ್‌ನಲ್ಲಿ ಭಾಗಿ ಆಗಲು ಒಂದೇ ಒಂದು ಕಂಬೀಷನ್ ಇದೆ. ಚಿತ್ತೂರು ಶೈಲಿಯ ಭಾಷೆ. ಹೌದು ಚಿತ್ತೂರು ಶೈಲಿಯ ಭಾಷೆ ಬಂದರೆ ಸಾಕು, ಪುಷ್ಪ 2 ಚಿತ್ರದಲ್ಲಿ ನೀವು ಅಭಿನಯಿಸುವುದು ಬಹುತೇಕ ಖಚಿತ ಆದಂತೆ.

ಅಲ್ಲು ಅರ್ಜುನ್-ರಶ್ಮಿಕಾ ಮ್ಯಾಜಿಕ್!
ಪುಷ್ಪ ಚಿತ್ರದಲ್ಲಿ ನಟ ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಮ್ಯಾಜಿಕ್ ಮಾಡಿತ್ತು. ಪ್ರೇಕ್ಷಕರು ಈ ನೋಡಿಯನ್ನು ಮೆಚ್ಚಿ ಜೈಕಾರ ಹಾಕಿದ್ದರು. ಈಗ ಪುಷ್ಪ 2 ಚಿತ್ರದಲ್ಲೂ ಈ ಜೋಡಿ ಕಾಂಬಿನೇಷನ್ ಒಂದಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದೆ. ಆದರೆ ನಿರ್ದೇಶಕ ಸುಕುಮಾರ್ ಮೇಲೆ ಪುಷ್ಪ ಭಾಗ 2 ಜವಾಬ್ದಾರಿ ಹೆಚ್ಚಾಗಿದೆ.