For Quick Alerts
  ALLOW NOTIFICATIONS  
  For Daily Alerts

  ಕನ್ಫರ್ಮ್: ಮೆಗಾಸ್ಟಾರ್ ಅಳಿಯನ ಚಿತ್ರಕ್ಕೆ ರಚಿತಾ ರಾಮ್ ನಾಯಕಿ

  |

  ಕನ್ನಡ ಟಾಪ್ ನಟಿ, ಸ್ಟಾರ್ ನಟರ ಲಕ್ಕಿ ಹೀರೋಯಿನ್ ಡಿಂಪಲ್ ಕ್ವೀನ್ ರಚಿತಾ ರಾಮ್, ಟಾಲಿವುಡ್ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸದ್ದು ಮಾಡ್ತಿದೆ. ಕೇವಲ ಗಾಂಧಿನಗರದಲ್ಲಿ ಮಾತ್ರವಲ್ಲ, ಆ ಕಡೆ ತೆಲುಗು ರಾಜ್ಯದಲ್ಲಿ ಈ ಸುದ್ದಿ ಚರ್ಚೆಯಾಗ್ತಿದೆ.

  ನಂದಮೂರಿ ಬಾಲಕೃಷ್ಣ ಅವರ ಮುಂದಿನ ಚಿತ್ರದಲ್ಲಿ ಕನ್ನಡದ ಹುಡುಗಿ ರಚಿರಾ ರಾಮ್ ನಾಯಕಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟರಲ್ಲೆ ಇನ್ನೊಂದು ತೆಲುಗು ಚಿತ್ರಕ್ಕೆ ಬುಲ್ ಬುಲ್ ಬೆಡಗಿ ಹೀರೋಯಿನ್ ಆಗಲಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

  ಟಾಲಿವುಡ್ ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾದ ಕನ್ನಡತಿ ರಚಿತಾ ರಾಮ್ಟಾಲಿವುಡ್ ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾದ ಕನ್ನಡತಿ ರಚಿತಾ ರಾಮ್

  ಈ ಕುರಿತು ತೆಲುಗು ಪತ್ರಿಕೆ ಹಾಗೂ ವೆಬ್ ಸೈಟ್ ಗಳಲ್ಲಿ ಸುದ್ದಿ ಪ್ರಕಟವಾಗಿದೆ. ಸರಿ, ರಚಿತಾ ನಾಯಕಿ ಎಂದು ಹೇಳಲಾಗುತ್ತಿರುವ ಆ ಸಿನಿಮಾಗೆ ನಾಯಕ ಯಾರು ಎಂದು ನೋಡಿದ್ರೆ, ದೊಡ್ಮನೆ ಕುಟುಂಬದ ನಟ. ಯಾರದು? ಮುಂದೆ ಓದಿ....

  ಮೆಗಾಸ್ಟಾರ್ ಅಳಿಯನ ಚಿತ್ರ

  ಮೆಗಾಸ್ಟಾರ್ ಅಳಿಯನ ಚಿತ್ರ

  ಮೆಗಾಸ್ಟಾರ್ ಚಿರಂಜೀವಿ ಅವರ ಸೋದರಳಿಯ ಕಲ್ಯಾಣ್ ದೇವ್ ನಟಿಸುತ್ತಿರುವ ಎರಡನೇ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದಾರಂತೆ. ಕಲ್ಯಾಣ್ ದೇವ್ ನಟಿಸಿದ್ದ ಚೊಚ್ಚಲ ಚಿತ್ರ 'ವಿಜೇತ' ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿತ್ತು. ಈಗ ಎರಡನೇ ಸಿನಿಮಾ ಕೈಗೆತ್ತಿಕೊಂಡಿದ್ದು, ಈ ಪ್ರಾಜೆಕ್ಟ್ ನಲ್ಲಿ ಡಿಂಪಲ್ ಕ್ವೀನ್ ಇರಲಿದ್ದಾರಂತೆ.

  ಪ್ರಿಯಾ ವಾರಿಯರ್ ರಿಜೆಕ್ಟ್ ಮಾಡಿದ್ರು!

  ಪ್ರಿಯಾ ವಾರಿಯರ್ ರಿಜೆಕ್ಟ್ ಮಾಡಿದ್ರು!

  ಈ ಹಿಂದೆ ಕಲ್ಯಾಣ್ ದೇವ್ ಅವರ ಚಿತ್ರದಲ್ಲಿ ನಟಿಸಲು ಪ್ರಿಯಾ ಪ್ರಕಾಶ್ ವಾರಿಯರ್ ಅವರನ್ನ ಸಂಪರ್ಕಿಸಲಾಗಿತ್ತಂತೆ. ಆದರೆ, ಪ್ರಿಯಾ ಈ ಚಿತ್ರವನ್ನ ಒಪ್ಪಿಕೊಂಡಿರಲಿಲ್ಲ. ಈಗ, ಅದೇ ಚಿತ್ರ ಟೇಕ್ ಆನ್ ಆಗ್ತಿದ್ದು, ಈ ಸಿನಿಮಾಗೆ ರಚಿತಾ ನಾಯಕಿಯಾಗಿದ್ದಾರೆ.

  ಟಾಲಿವುಡ್ ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾದ ಕನ್ನಡತಿ ರಚಿತಾ ರಾಮ್ಟಾಲಿವುಡ್ ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾದ ಕನ್ನಡತಿ ರಚಿತಾ ರಾಮ್

  ಪುಲಿ ವಾಸು ಡೈರೆಕ್ಟರ್

  ಪುಲಿ ವಾಸು ಡೈರೆಕ್ಟರ್

  ಕಲ್ಯಾಣ್ ದೇವ್ ಮತ್ತು ರಚಿತಾ ರಾಮ್ ನಟಿಸಲಿರುವ ಆ ಚಿತ್ರಕ್ಕೆ 'ಸೂಪರ್ ಮಚ್ಚಿ' ಎಂದು ಹೆಸರಿಡಲಾಗಿದೆ. ಈ ಸಿನಿಮಾಗೆ ಪುಲಿ ವಾಸು ನಿರ್ದೇಶನ ಮಾಡಲಿದ್ದಾರೆ. ಇದು ಇವರಿಗೆ ಮೊದಲ ಸಿನಿಮಾ. ಟಾಲಿವುಡ್ ಮಾಧ್ಯಮಗಳು ವರದಿ ಮಾಡಿರುವಂತೆ ನವೆಂಬರ್ 22 ರಂದು ರಚಿತಾ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ.

  ಪ್ರೊಡಕ್ಷನ್ ಸಂಸ್ಥೆ ಘೋಷಿಸಿದೆ

  ಪ್ರೊಡಕ್ಷನ್ ಸಂಸ್ಥೆ ಘೋಷಿಸಿದೆ

  'ಸೂಪರ್ ಮಿರ್ಚಿ' ಚಿತ್ರವನ್ನ ರಿಜ್ವಾನ್ ಎಂಟರ್ ಟೈನ್ಮಂಟ್ ನಿರ್ಮಿಸುತ್ತಿದೆ. ಈಗಾಗಲೇ ಪೋಸ್ಟರ್ ಬಿಡುಗಡೆ ಮಾಡಿದ್ದು, ರಿಯಾ ಚಕ್ರವರ್ತಿ ನಾಯಕಿಯಾಗಿದ್ದರು. ಈ ಮಧ್ಯೆ ಚಿತ್ರದ ನಿರ್ಮಾಪಕ ಖುಷಿ ಅವರು, ರಚಿತಾ ರಾಮ್ ಅವರನ್ನ ಭೇಟಿ ಮಾಡಿದ್ದಾರೆ. ನಂತರ, ಫೋಟೋ ಹಂಚಿಕೊಂಡಿದ್ದ ಖುಷಿ, 'ವಲ್ ಕಮ್' ಎಂದು ಅಧಿಕೃತವಾಗಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದಾರೆ. ಅಲ್ಲಿಗೆ ಕಲ್ಯಾಣ್ ದೇವ್ ಚಿತ್ರದಲ್ಲಿ ರಚಿತಾ ನಟಿಸುವುದು ಪಕ್ಕಾ. ಆದರೆ, ಒಬ್ಬರೇ ಹೀರೋಯಿನ್ ಅಥವಾ ಎರಡನೇ ಹೀರೋಯಿನ್ ಎಂಬುದರ ಬಗ್ಗೆ ಮಾಹಿತಿ ಇಲ್ಲ.

  ರಚಿತಾ ರಾಮ್ ಆಡಿದ್ದ ಈ ಮಾತಿನಿಂದ ನಿರ್ದೇಶಕ ಪಿ ವಾಸು ಬೇಸರರಚಿತಾ ರಾಮ್ ಆಡಿದ್ದ ಈ ಮಾತಿನಿಂದ ನಿರ್ದೇಶಕ ಪಿ ವಾಸು ಬೇಸರ

  ಬಾಲಕೃಷ್ಣ ಸಿನಿಮಾದಲ್ಲೂ ರಚಿತಾ?

  ಬಾಲಕೃಷ್ಣ ಸಿನಿಮಾದಲ್ಲೂ ರಚಿತಾ?

  ಇತ್ತೀಚಿಗಷ್ಟೆ ಬಯೋಪಟಿ ಸೀನು ನಿರ್ದೇಶನ ಹಾಗೂ ಬಾಲಕೃಷ್ಣ ನಟನೆಯಲ್ಲಿ ಬರಲಿರುವ ಚಿತ್ರಕ್ಕಾಗಿ ರಚಿತಾ ರಾಮ್ ಅವರನ್ನ ಕರೆತರುವ ಪ್ಲಾನ್ ಆಗಿತ್ತಂತೆ. ಆದರೆ, ಈ ಬಗ್ಗೆ ಚಿತ್ರತಂಡವಾಗಲಿ ಅಥವಾ ರಚಿತಾ ರಾಮ್ ಆಗಲಿ ಅಧಿಕೃತವಾಗಿ ಹೇಳಿಲ್ಲ. ಈ ಕಡೆ ಕಲ್ಯಾಣ್ ದೇವ್ ಸಿನಿಮಾ ಪಕ್ಕಾ ಆಗಿದೆ.

  English summary
  Kannada actress Rachita Ram joins Kalyan Dev's second movie super mirchi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X