For Quick Alerts
  ALLOW NOTIFICATIONS  
  For Daily Alerts

  'ಈ' ಕಾರಣಕ್ಕಾಗಿ ಪವನ್ ಕಲ್ಯಾಣ್ ಗೆ ನಿರ್ದೇಶನ ಮಾಡುವುದಿಲ್ಲವಂತೆ ರಾಜಮೌಳಿ

  |

  ಖ್ಯಾತ ನಿರ್ದೇಶಕ ರಾಜಮೌಳಿ ಸಿನಿಮಾ ಅಂದರೆ ಸಿನಿಪ್ರಿಯರ ನಿರೀಕ್ಷೆ ದುಪ್ಪಟ್ಟಾಗಿರುತ್ತೆ. ರಾಜಮೌಳಿ ಜೊತೆ ಕೆಲಸ ಮಾಡಲು ಭಾರತೀಯ ಚಿತ್ರರಂಗದ ಪ್ರತಿಯೊಬ್ಬ ಸ್ಟಾರ್ ನಟನು ತುದಿಗಾಲಿನಲ್ಲಿ ನಿಂತಿರುತ್ತಾರೆ. ಬಾಹುಬಲಿ ಸಿನಿಮಾ ನಂತರ ಮತ್ತಷ್ಟು ಖ್ಯಾತಿ ಗಳಿಸಿರುವ ರಾಜಮೌಳಿ ಭಾರತೀಯ ಚಿತ್ರರಂಗದ ಹೆಮ್ಮೆಯ ನಿರ್ದೇಶಕ.

  ಕನ್ನಡದಲ್ಲೇ ಧನ್ಯವಾದ ಹೇಳಿದ ಬಾಹುಬಲಿ ಮಾಂತ್ರಿಕ | RRR | Rajmouli | NTR | Ram Charan

  ಕನ್ನಡದ ನಟ ಸುದೀಪ್ ಸೇರಿದಂತೆ ಟಾಲಿವುಡ್ ನ ಬಹುತೇಕ ಸ್ಟಾರ್ ನಟರಿಗೆ ನಿರ್ದೇಶನ ಮಾಡಿರುವ ರಾಜಮೌಳಿ, ಪವರ್ ಸ್ಟಾರ್ ಪವನ್ ಕಲ್ಯಾಣ್ ಗೆ ಮಾತ್ರ ನಿರ್ದೇಶನ ಮಾಡುವುದಿಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿದ್ದಾರೆ. ಪವನ್ ಕಲ್ಯಾಣ್ ಕಾಲ್ ಶೀಟ್ ಗಾಗಿ ಅನೇಕ ನಿರ್ದೇಶಕರು ಕಾದು ಕುಳಿತಿದ್ದಾರೆ. ಆದರೆ ರಾಜಮೌಳಿ ಮಾತ್ರ ಸಿನಿಮಾ ಮಾಡುವುದಿಲ್ಲವಂತೆ. ಮುಂದೆ ಒದಿ...

  ಪವನ್ ಕಲ್ಯಾಣ್ ಗೆ ನಿರ್ದೇಶನ ಮಾಡಲ್ಲ ಎಂದ ರಾಜಮೌಳಿ

  ಪವನ್ ಕಲ್ಯಾಣ್ ಗೆ ನಿರ್ದೇಶನ ಮಾಡಲ್ಲ ಎಂದ ರಾಜಮೌಳಿ

  ಸಾಕಷ್ಟು ಸ್ಟಾರ್ ನಟರಿಗೆ ನಿರ್ದೇಶನ ಮಾಡಿರುವ ರಾಜಮೌಳಿ ಸದ್ಯ ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ಜೊತೆ ಆರ್ ಆರ್ ಆರ್ ಸಿನಿಮಾ ಮಾಡುತ್ತಿದ್ದಾರೆ. ಈ ನಡುವೆ ರಾಜಮೌಳಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರಿಗೆ ನಿರ್ದೇಶನ ಮಾಡಲು ಸಾಧ್ಯವಿಲ್ಲ ಎನ್ನುವ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಂದರೆ ಪವನ್ ಕಲ್ಯಾಣ್ ಮತ್ತು ರಾಜಮೌಳಿ ನಡುವೆ ಏನಾಗಿದೆ? ಇಬ್ಬರ ಸ್ನೇಹ ಸಂಬಂಧ ಚೆನ್ನಾಗಿಲ್ಲವಾ?ಅಂತ ಅಂದುಕೊಳ್ಳಬೇಡಿ. ಕಾರಣ ಬೇರೆಯದ್ದೆ ಇದೆ.

  ಕಾರಣವೇನು?

  ಕಾರಣವೇನು?

  ನಟ ಪವನ್ ಕಲ್ಯಾಣ್ ಗೆ ರಾಜಮೌಳಿ ಸಿನಿಮಾ ನಿರ್ದೇಶನ ಮಾಡದಿರಲು ಬಲವಾದ ಕಾರಣವಿದೆ. ರಾಜಮೌಳಿ ಹೇಳುವ ಪ್ರಕಾರ "ಪವನ್ ಕಲ್ಯಾಣ್ ಒಬ್ಬ ಬದ್ಧ ನಾಯಕ. ಅವರ ಮುಖ್ಯ ಗಮನ ರಾಜಕೀಯದ ಕಡೆ. ವರ್ಷದದಲ್ಲಿ ಸಿನಿಮಾಗೆ ನೀಡುವುದು ಕೆಲವೇ ಕೆಲವು ದಿನಗಳು ಮಾತ್ರ. ಆದರೆ ರಾಜಮೌಳಿ ಚಿತ್ರಗಳು ಸಂಪೂರ್ಣವಾಗಿ ಮುಗಿಯಲು ವರ್ಷವೆ ಆಗುತ್ತೆ. ಹಾಗಾಗಿ ಪವನ್ ಕಲ್ಯಾಣ್ ಅವರಿಂದ ಎರಡೂ ಮೂರು ವರ್ಷ ಸಮಯ ಕೇಳುವುದು ಸೂಕ್ತವಲ್ಲ ಎನ್ನುವ ಕಾರಣಕ್ಕೆ ಅವರಿಗೆ ನಿರ್ದೇಶನ ಮಾಡುವುದಿಲ್ಲ" ಎಂದು ಹೇಳಿದ್ದಾರೆ.

  ವಕೀಲ್ ಸಾಬ್ ಸಿನಿಮಾದಲ್ಲಿ ಪವನ್ ಕಲ್ಯಾಣ್

  ವಕೀಲ್ ಸಾಬ್ ಸಿನಿಮಾದಲ್ಲಿ ಪವನ್ ಕಲ್ಯಾಣ್

  ಪವನ್ ಕಲ್ಯಾಣ್ ರಾಜಕೀಯದ ಜೊತೆಗೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಪವನ್ ವಕೀಲ್ ಸಾಬ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನ ಪಿಂಕ್ ಸಿನಿಮಾದ ತೆಲುಗು ರಿಮೇಕ್ ಇದಾಗಿದ್ದು ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅಭಿನಯಿಸಿದ್ದ ಪಾತ್ರದಲ್ಲಿ ಪವನ್ ಕಲ್ಯಾಣ್ ಕಾಣಿಸಿಕೊಳ್ಳುತ್ತಿದ್ದಾರೆ.

  ಮಹೇಶ್ ಬಾಬುಗೆ ರಾಜಮೌಳಿ ನಿರ್ದೇಶನ

  ಮಹೇಶ್ ಬಾಬುಗೆ ರಾಜಮೌಳಿ ನಿರ್ದೇಶನ

  ರಾಜಮೌಳಿ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆ ರಾಜಮೌಳಿ ಪ್ರಿನ್ಸ್ ಮಹೇಶ್ ಬಾಬುಗೆ ನಿರ್ದೇಶನ ಮಾಡುತ್ತಿದ್ದಾರೆ. ಮಹೇಶ್ ಬಾಬು ಸದ್ಯ ಪರಶುರಾಮ್ ಸಿನಿಮಾದ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮುಗಿದ ಬಳಿಕ ರಾಜಮೌಳಿ ಸಿನಿಮಾ ಪ್ರಾರಂಭವಾಗಲಿದೆ.

  English summary
  Famous Director Rajamouli cannot direct to Actor Pawan Kalyan for this reason.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X