twitter
    For Quick Alerts
    ALLOW NOTIFICATIONS  
    For Daily Alerts

    ಜಗತ್ತೇ ಮೆಚ್ಚಿದ ಸಿನಿಮಾ ರಾಜಮೌಳಿಗೆ ಬೋರ್ ಹೊಡೆಸಿತಂತೆ! ಯಾವುದಾ ಸಿನಿಮಾ?

    |

    ಸಿನಿಮಾ ವೊಂದು ಆಸ್ಕರ್ ಪ್ರಶಸ್ತಿ ಪಡೆದಿದೆಯೆಂದರೆ ಸಹಜವಾಗಿಯೇ ಅದೊಂದು ಅತ್ಯುತ್ತಮ ಸಿನಮಾ ಆಗಿರಲಕ್ಕೇ ಬೇಕು. ತೀರಾ ಕೆಲವೊಂದು ಸಿನಿಮಾಗಳು ಇದಕ್ಕೆ ವ್ಯತಿರಿಕ್ತವಾಗಿಯೂ ಇವೆ.

    Recommended Video

    ಆಸ್ಕರ್ ಗೆಲ್ಲೋಕೆ ಭಾರತ ಏನ್ ಮಾಡ್ಬೇಕು? | Oscar | Sandalwood | Filmibeat Kannada

    ಆದರೆ ಇತ್ತೀಚೆಗೆ ಆಸ್ಕರ್ ಗೆದ್ದ ಪ್ಯಾರಾಸೈಟ್ ಸಿನಿಮಾವನ್ನು ಬಹುತೇಕರು ಮೆಚ್ಚಿಕೊಂಡಿದ್ದಾರೆ. ಅದೊಂದು ಅತ್ಯುತ್ತಮ ಸಿನಿಮಾ, ಆಸ್ಕರ್ ಪಡೆಯಲು ಅರ್ಹ ಸಿನಿಮಾ ಎಂದು ಹೇಳಿದ್ದಾರೆ.

    ಆದರೆ ಈ ಸಿನಿಮಾ ಖ್ಯಾತ ನಿರ್ದೇಶಕ ಎಸ್‌.ಎಸ್.ರಾಜಮೌಳಿ ಅವರಿಗೆ ಇಷ್ಟವಾಗಲಿಲ್ಲವಂತೆ. ಜಗತ್ತೇ ಮೆಚ್ಚಿರುವ ಸಿನಿಮಾ ಸ್ವತಃ ಅತ್ಯುತ್ತಮ ನಿರ್ದೇಶಕ ರಾಜಮೌಳಿ ಗೆ ಏಕೆ ಇಷ್ಟವಾಗಲಿಲ್ಲ? ಮುಂದೆ ಓದಿ...

    ಪ್ಯಾರಾಸೈಟ್ ಸಿನಿಮಾ ನನಗೆ ಇಷ್ಟವಾಗಲಿಲ್ಲ:ರಾಜಮೌಳಿ

    ಪ್ಯಾರಾಸೈಟ್ ಸಿನಿಮಾ ನನಗೆ ಇಷ್ಟವಾಗಲಿಲ್ಲ:ರಾಜಮೌಳಿ

    ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಜಮೌಳಿ, 'ನನಗೆ ಪ್ಯಾರಾಸೈಟ್ ಸಿನಿಮಾ ಬಹಳಾ ಬೋರ್ ಹೊಡೆಸಿತು. ಸಿನಿಮಾ ನೋಡುವಾಗ ಅರ್ಧಕ್ಕೆ ನಿದ್ದೆ ಹೋಗಿ ಬಿಟ್ಟೆ' ಎಂದು ಹೇಳಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ

    ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ

    ರಾಜಮೌಳಿ ಹೇಳಿಕೆ ಸಮಾಜಿಕ ಜಾಲತಾಣದಲ್ಲಿ ಬಹಳವಾಗಿ ಚರ್ಚೆಗೆ ಒಳಗಾಗುತ್ತಿದೆ. ಪ್ಯಾರಾಸೈಟ್ ಸಿನಿಮಾ ಚೆನ್ನಾಗಿದೆ ಎನ್ನುವವರು, ಚೆನ್ನಾಗಿಲ್ಲ ಎನ್ನುವವರು ಪರಸ್ಪರ ಮಾತಿನ ಯುದ್ಧದಲ್ಲಿ ತೊಡಗಿದ್ದಾರೆ.

    ಬಡವ-ಸಿರಿವಂತರ ನಡುವಿನ ಕಂದರ ತೋರುವ ಸಿನಿಮಾ

    ಬಡವ-ಸಿರಿವಂತರ ನಡುವಿನ ಕಂದರ ತೋರುವ ಸಿನಿಮಾ

    ಪ್ಯಾರಾಸೈಟ್ ಸಿನಿಮಾ, ಸಿರಿವಂತರ ಬಡವರ ಪರಸ್ಪರ ತಾಕಲಾಟಗಳು, ಸಮಾಜದ ಆರ್ಥಿಕ ಅಸಮಾನತೆ ತೋರಿಸುವ ಸಿನಿಮಾ ಆಗಿದೆ. ಕೊರಿಯಾದ ಈ ಸಿನಿಮಾವನ್ನು ಬೋಂಗ್ ಜೂನ್ ಹೋ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಈಗ ಅಮೆಜಾನ್ ಪ್ರೈಂ ನಲ್ಲಿ ಲಭ್ಯವಿದೆ.

    ಹಲವು ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಪ್ಯಾರಾಸೈಟ್

    ಹಲವು ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಪ್ಯಾರಾಸೈಟ್

    ಪ್ಯಾರಾಸೈಟ್ ಸಿನಿಮಾ ಈ ಬಾರಿಯ ಆಸ್ಕರ್ ನಲ್ಲಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡು ಅತ್ಯುತ್ತಮ ಸಿನಿಮಾ ಆಗಿ ಹೊರಹೊಮ್ಮಿತು. ಅತ್ಯುತ್ತಮ ವಿದೇಶಿ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಚಿತ್ರಕತೆ ವಿಭಾಗಗಳಲ್ಲಿ ಆಸ್ಕರ್ ಜಯಿಸಿದೆ.

    English summary
    Director SS Rajamouli did not like Oscar award winning movie Parasite. He said i slept while watching movie.
    Tuesday, April 21, 2020, 14:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X