For Quick Alerts
  ALLOW NOTIFICATIONS  
  For Daily Alerts

  ನಿಜ ಘಟನೆ ಆಧರಿಸಿದೆ ಮಹೇಶ್ ಬಾಬು-ರಾಜಮೌಳಿ ಸಿನಿಮಾ!

  |

  ರಾಜಮೌಳಿ ನಿರ್ದೇಶನದ 'RRR' ಸಿನಿಮಾ ವಿಶ್ವದೆಲ್ಲೆಡೆ ದೊಡ್ಡ ಮಟ್ಟದ ಹವಾ ಸೃಷ್ಟಿಸಿದೆ. ಈ ಬಾರಿ 'RRR' ಗೆ ಆಸ್ಕರ್ ಪಕ್ಕಾ ಎನ್ನಲಾಗುತ್ತಿದೆ.

  ಇದರ ನಡುವೆ ರಾಜಮೌಳಿ ಹೊಸ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕಾರ್ಯಗಳಲ್ಲಿ ರಾಜಮೌಳಿ ತೊಡಗಿಕೊಂಡಿದ್ದಾರೆ. 'RRR' ಮಾದರಿಯಲ್ಲಿ ಹಳೆಯ ಕಾಲದ ಕತೆಯಲ್ಲದೆ, ಆಧುನಿಕ ಜಮಾನಾದ ಕತೆಯನ್ನು ಹೊಂದಿರಲಿದೆ.

  ಆಸ್ಕರ್ ವೇದಿಕೆ ಮೇಲೆ ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಡ್ಯಾನ್ಸ್?ಆಸ್ಕರ್ ವೇದಿಕೆ ಮೇಲೆ ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಡ್ಯಾನ್ಸ್?

  ಮಹೇಶ್ ಬಾಬು ನಾಯಕ ನಟನ ಪಾತ್ರದಲ್ಲಿ ನಟಿಸುತ್ತಿರುವ ಈ ಸಿನಿಮಾಕ್ಕೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕತೆ ಬರೆದಿದ್ದು, ಈ ಸಿನಿಮಾದ ಕತೆ ನಿಜ ಘಟನೆಯನ್ನು ಆಧರಿಸಿದ್ದಾಗಿದೆ.

  ವಿಜಯೇಂದ್ರ ಪ್ರಸಾದ್ ಅವರು, ಪಿಂಕ್‌ವಿಲ್ಲಾಗೆ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಸಿನಿಮಾದ ಕತೆಯು ನಿಜ ಘಟನೆಯನ್ನು ಆಧರಿಸಿದೆ. ಸಿನಿಮಾವು ಕಾಡಿನಲ್ಲಿ ನಡೆಯುವ ಸಾಹಸಗಳುಳ್ಳ ಕತೆಯಾಗಿದೆ. ಸಿನಿಮಾ ಮುಂದಿನ ವರ್ಷಾಂತ್ಯಕ್ಕೆ ಬಿಡುಗಡೆ ಆಗಲಿದೆ'' ಎಂದಿದ್ದಾರೆ.

  ಕತೆ ನಿಜ ಘಟನೆ ಆಧರಿಸಿದ್ದು ಎಂದಿದ್ದಾರಾದರೂ, ಯಾವ ಘಟನೆ ಆಧರಿಸಿದ ಕತೆ ಎಂಬುದನ್ನು ಕೆವಿ ವಿಜಯೇಂದ್ರ ಪ್ರಸಾದ್ ಸ್ಪಷ್ಟಗೊಳಿಸಿಲ್ಲ. ಆದರೆ ಸಿನಿಮಾವು ಪಕ್ಕಾ ಆಕ್ಷನ್ ಸಿನಿಮಾ ಎನ್ನಲಾಗುತ್ತಿದ್ದು, ಹಲವು ದೊಡ್ಡ ಸ್ಟಾರ್‌ಗಳು ಸಿನಿಮಾದಲ್ಲಿರಲಿದ್ದಾರಂತೆ.

  Rajamouli Mahesh Babu Upcoming Movie Is Inspired From Real Incident

  ಮಹೇಶ್ ಬಾಬು ಎದುರಿಗೆ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ವಿಲನ್ ಪಾತ್ರವನ್ನು ಸಹ ದೊಡ್ಡ ಸ್ಟಾರ್ ನಟರೊಬ್ಬರು ಮಾಡಲಿರುವುದು ವಿಶೇಷ. ಸಿನಿಮಾಕ್ಕಾಗಿ ಕೆಲವು ಹೊಸ ತಂತ್ರಜ್ಞಾನಗಳನ್ನು ರಾಜಮೌಳಿ ಬಳಸಲಿದ್ದಾರೆ. ಸಿನಿಮಾದ ಚಿತ್ರೀಕರಣವು ಆಫ್ರಿಕಾದ ದಟ್ಟ ಕಾಡುಗಳಲ್ಲಿ ಆಗಲಿದೆ. ಆಫ್ರಿಕಾ ಮಾತ್ರವಲ್ಲ ಇನ್ನೂ ಕೆಲವು ರಾಷ್ಟ್ರಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ.

  English summary
  SS Rajamouli and Mahesh Babu's upcoming movie is inspired by real life incident. Story writer KV Vijayendra Prasad confirms it.
  Tuesday, October 18, 2022, 23:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X