For Quick Alerts
  ALLOW NOTIFICATIONS  
  For Daily Alerts

  17 ದಿನಕ್ಕೆ ಜಪಾನ್‌ನಲ್ಲಿ 'RRR' ಕಲೆಕ್ಷನ್ ಎಷ್ಟು? 'KGF - 2' ಮೀರಿಸಲು ಇನ್ನು ಎಷ್ಟು ಬೇಕು?

  |

  ಎಸ್. ಎಸ್‌ ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಜಪಾನ್‌ನಲ್ಲಿ ಬಿಡುಗಡೆಯಾಗಿ ಸದ್ದು ಮಾಡ್ತಿದೆ. ಇತ್ತೀಚೆಗೆ ಜಪಾನಿ ಭಾಷೆಗೆ ಚಿತ್ರವನ್ನು ಡಬ್ ಮಾಡಿ ಭರ್ಜರಿ ಪ್ರಮೋಷನ್ ಜೊತೆಗೆ ರಿಲೀಸ್ ಮಾಡಲಾಗಿತ್ತು. ಆರಂಭದಲ್ಲಿ ಒಳ್ಳೆ ಓಪನಿಂಗ್ ಸಿಗದೇ ಇದ್ದರೂ ನಿಧಾನವಾಗಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಕ್ಸಸ್ ಕಂಡಿದೆ. ತೆರೆಮೇಲೆ ರಾಮ್‌ - ಭೀಮ್ ಬ್ರೋಮ್ಯಾನ್ಸ್ ನೋಡೋಕೆ ಜಪಾನಿಯರು ಮುಗಿಬಿದ್ದಿದ್ದಾರೆ.

  ಮಾರ್ಚ್ 25ಕ್ಕೆ ತೆರೆಗಪ್ಪಳಿಸಿದ್ದ 'RRR' ಸಿನಿಮಾ 1200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಕನ್ನಡಕ್ಕೂ ಸಿನಿಮಾ ಡಬ್ ಆಗಿ ಪ್ರೇಕ್ಷಕರ ಮನಗೆದ್ದಿತ್ತು. ಅಲ್ಲೂರಿ ಸೀತಾರಾಮರಾಜು ಆಗಿ ರಾಮ್‌ಚರಣ್ ಹಾಗೂ ಕೋಮುರಂ ಭೀಮ್ ಪಾತ್ರದಲ್ಲಿ ಜ್ಯೂ. ಎನ್‌ಟಿಆರ್ ನಟಿಸಿ ಸಕ್ಸಸ್ ಕಂಡಿದ್ದರು. ರಾಜಮೌಳಿ ನಿರ್ದೇಶನ, ಮೇಕಿಂಗ್ ಎಲ್ಲವೂ ನೋಡುಗರಿಗೆ ಅದ್ಭುತ ಅನುಭವ ನೀಡಿತ್ತು. ವಿಶ್ವದಾದ್ಯಂತ ಸಿನಿಮಾ ಭರ್ಜರಿ ಸದ್ದು ಮಾಡಿತ್ತು. ನೆಟ್‌ಫ್ಲಿಕ್ಸ್‌ಗೆ ಬಂದ ಮೇಲೆ ಹಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ಸಿನಿಮಾ ನೋಡಿ ಬಹುಪರಾಕ್ ಎಂದಿದ್ದರು. ಇದೆಲ್ಲದರ ಬೆನ್ನಲ್ಲೇ ಚಿತ್ರವನ್ನು ಜಪಾನ್‌ನಲ್ಲಿ ರಿಲೀಸ್ ಮಾಡುವ ಪ್ರಯತ್ನ ನಡೀತು.

  ರಾಜಮೌಳಿ- ಮಹೇಶ್ ಬಾಬು ಚಿತ್ರದಲ್ಲಿ ಮತ್ತೊಬ್ಬ ಸೂಪರ್ ಸ್ಟಾರ್ ? ಜಕ್ಕಣ್ಣ ಮಾಸ್ಟರ್ ಪ್ಲ್ಯಾನ್ ಹೇಗಿದೆ ಗೊತ್ತಾ?ರಾಜಮೌಳಿ- ಮಹೇಶ್ ಬಾಬು ಚಿತ್ರದಲ್ಲಿ ಮತ್ತೊಬ್ಬ ಸೂಪರ್ ಸ್ಟಾರ್ ? ಜಕ್ಕಣ್ಣ ಮಾಸ್ಟರ್ ಪ್ಲ್ಯಾನ್ ಹೇಗಿದೆ ಗೊತ್ತಾ?

  ರಾಮ್‌ಚರಣ್, ಜ್ಯೂ. ಎನ್‌ಟಿಆರ್ ಜೊತೆಗೆ ಆಲಿಯಾ ಭಟ್, ಅಜಯ್ ದೇವಗನ್ 'RRR' ಸಿನಿಮಾ ತಾರಾಗಣದಲ್ಲಿದ್ದಾರೆ. ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳನ್ನು ಬಳಸಿಕೊಂಡು ಒಂದು ಕಾಲ್ಪನಿಕ ಕಥೆ ಕಟ್ಟಿಕೊಟ್ಟು ಮೌಳಿ ಗೆದ್ದಿದ್ದರು. ಡಿವಿವಿ ದಾನಯ್ಯ ಬಹುಕೋಟಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಿದ್ದರು.

   17 ದಿನಕ್ಕೆ ಜಪಾನ್‌ನಲ್ಲಿ 10 ಕೋಟಿ ಗಳಿಕೆ

  17 ದಿನಕ್ಕೆ ಜಪಾನ್‌ನಲ್ಲಿ 10 ಕೋಟಿ ಗಳಿಕೆ

  ಅಕ್ಟೋಬರ್ 21ಕ್ಕೆ 'RRR' ಸಿನಿಮಾ ಜಪಾನ್ ದೇಶದಲ್ಲಿ ತೆರೆಗೆ ಬಂದಿತ್ತು. ರಾಜಮೌಳಿ, ರಾಮ್‌ಚರಣ್ ಹಾಗೂ ತಾರಕ್ ಅಲ್ಲಿಗೆ ಹೋಗಿ ಸಿನಿಮಾ ಪ್ರಮೋಷನ್ ಮಾಡಿ ಬಂದಿದ್ದರು. ತಂಡಕ್ಕೆ ಭರ್ಜರಿ ಸ್ವಾಗತವೇ ಸಿಕ್ಕಿತ್ತು. ಸದ್ಯ 17 ದಿನಕ್ಕೆ ಸಿನಿಮಾ 10 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇನ್ನು 1, 22,727 ಮಂದಿ ಜಪಾನಿ ಪ್ರೇಕ್ಷಕರು ಈಗಾಗಲೇ ಸಿನಿಮಾ ಕಣ್ತುಂಬಿಕೊಂಡಿದ್ದಾರೆ.

   'KGF - 2' ಮೀರಿಸಲು ಎಷ್ಟು ಬೇಕು?

  'KGF - 2' ಮೀರಿಸಲು ಎಷ್ಟು ಬೇಕು?

  ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ 1250 ಕೋಟಿ ರೂ. ಕಲೆಕ್ಷನ್ ಮಾಡಿದ 'KGF - 2' ಸಿನಿಮಾ 3ನೇ ಸ್ಥಾನದಲ್ಲಿದೆ. 1200 ಕೋಟಿ ರೂ. ಗಳಿಸಿರುವ 'RRR' ಸಿನಿಮಾ 4ನೇ ಸ್ಥಾನದಲ್ಲಿತ್ತು. ಆದರೆ ಜಪಾನ್‌ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸದ್ದು ಮಾಡುತ್ತಿದ್ದಂತೆ 'KGF - 2' ಕಲೆಕ್ಷನ್ ದಾಖಲೆ ಮೀರಿಸುತ್ತಾ ಎನ್ನುವ ಚರ್ಚೆ ನಡೀತಿದೆ. ಸದ್ಯ 10 ಕೋಟಿ ರೂ. ಅಷ್ಟೇ ಕಲೆಕ್ಷನ್ ಮಾಡಿದ್ದು ಇನ್ನು 40 ಕೋಟಿ ಬಾಕಿಯಿದೆ. ಹಾಗಾಗಿ ಜಪಾನ್‌ ಕಲೆಕ್ಷನ್‌ನಿಂದ ಮಾತ್ರ ಅದು ಸಾಧ್ಯವಿಲ್ಲ ಎನ್ನಬಹುದು. ಆದರೆ ಬೇರೆ ದೇಶಗಳಲ್ಲೂ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದ್ದು, ಹಾಗೇನಾದರೂ ಆದರೆ 'RRR' 3ನೇ ಸ್ಥಾನಕ್ಕೆ ಜಿಗಿದರೂ ಅಚ್ಚರಿಪಡಬೇಕಿಲ್ಲ.

   ಜಪಾನ್‌ನಲ್ಲಿ 3ನೇ ಸ್ಥಾನಕ್ಕೆ 'RRR'

  ಜಪಾನ್‌ನಲ್ಲಿ 3ನೇ ಸ್ಥಾನಕ್ಕೆ 'RRR'

  ಈಗಾಗಲೇ ಸಾಕಷ್ಟು ಭಾರತೀಯ ಸಿನಿಮಾಗಳು ಜಪಾನ್ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿವೆ. ದಶಕಗಳ ಹಿಂದಿಯೇ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಮುತ್ತು' ಡಬ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. 1998ರಲ್ಲಿ ಈ ಸಿನಿಮಾ ಜಪಾನ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಜಪಾನ್‌ನಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಸಿನಿಮಾಗಳ ಪಟ್ಟಿಯಲ್ಲಿ ಪ್ರಭಾಸ್ ನಟನೆಯ 'ಬಾಹುಬಲಿ ದಿ ಕನ್ಲೂಷನ್' ಎರಡನೇ ಸ್ಥಾನದಲ್ಲಿದೆ. 17 ದಿನಕ್ಕೆ 10 ಕೋಟಿ ರೂ. ಕಲೆಕ್ಷನ್ ಮಾಡಿರುವ 'RRR' ಈಗ 3ನೇ ಸ್ಥಾನಕ್ಕೇರಿದೆ. 'ತ್ರೀ ಈಡಿಯಟ್ಸ್', 'ಇಂಗ್ಲೀಷ್ ವಿಂಗ್ಲೀಷ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ಜಪಾನ್ ಪ್ರೇಕ್ಷಕರ ಮನಗೆದ್ದಿದೆ.

   ಬೇರೆ ದೇಶಗಳಲ್ಲಿ 'KGF - 2' ರಿಲೀಸ್?

  ಬೇರೆ ದೇಶಗಳಲ್ಲಿ 'KGF - 2' ರಿಲೀಸ್?

  ರಾಕಿಂಗ್ ಸ್ಟಾರ್ ಯಶ್ ನಟನೆಯ 'KGF - 2' ಸಿನಿಮಾ ದೇಶ ವಿದೇಶಗಳಲ್ಲಿ ರಿಲೀಸ್ ಆಗಿ ಸದ್ದು ಮಾಡಿದ್ದು ಗೊತ್ತೇಯಿದೆ. 5 ಭಾಷೆಗಳಿಗೆ ಸಿನಿಮಾ ಡಬ್ ಆಗಿ ಸಕ್ಸಸ್ ಕಂಡಿತ್ತು. ಆದರೆ ವಿದೇಶ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಿಲ್ಲ. 'RRR' ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗಿರುವುದನ್ನು ನೋಡಿ 'KGF - 2' ಚಿತ್ರವನ್ನು ಇದೇ ರೀತಿ ತೆರೆಗೆ ಕೊಂಡೊಯ್ಯುವಂತೆ ಕೆಲವರು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ.

  ರಾಜಮೌಳಿ ಸಿನಿಮಾ ಚಿತ್ರೀಕರಣಕ್ಕೆ ಬಳಸುವ ಕ್ಯಾಮೆರಾ ಯಾವುದು? ವಿಶೇಷತೆ ಏನು? ಬೆಲೆ ಎಷ್ಟು?ರಾಜಮೌಳಿ ಸಿನಿಮಾ ಚಿತ್ರೀಕರಣಕ್ಕೆ ಬಳಸುವ ಕ್ಯಾಮೆರಾ ಯಾವುದು? ವಿಶೇಷತೆ ಏನು? ಬೆಲೆ ಎಷ್ಟು?

  English summary
  Rajamouli’s RRR crosses 10 Cr mark at Japan box office KGF 2 global record in danger. Know More.
  Tuesday, November 8, 2022, 16:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X