ಚಿರಂಜೀವಿ, ಕೊರಟಾಲ ಶಿವು ಮೇಲೆ ಸಿನಿಮಾ ಕತೆ ಕದ್ದ ಆರೋಪ

ಮೆಗಾಸ್ಟಾರ್ ಚಿರಂಜೀವಿ ಹಾಗೂ ನಿರ್ದೇಶಕ ಕೊರಟಾಲ ಶಿವ ಮೇಲೆ ಸಿನಿಮಾ ಕತೆ ಕದ್ದಿರುವ ಗುರುತರ ಆರೋಪವನ್ನು ಹೊರಿಸಲಾಗಿದೆ.

Recommended Video

Ayogya ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದ ತೆರೆ ಹಿಂದಿನ ದೃಶ್ಯ | Ayogya Climax Making | Filmibeat Kannada

ಚಿತ್ರ ಲೇಖಕ, ಸಹ ನಿರ್ದೇಶಕ ರಾಜೇಶ್ ಮಂಡೂರಿ ಎಂಬುವರು ಈ ಗುರುತರ ಆರೋಪವನ್ನು ಮಾಡಿದ್ದು, ಈ ಕುರಿತು ನಿರ್ದೇಶಕರ ಸಂಘ ಹಾಗೂ ಚಿತ್ರಕತೆ ಬರಹಗಾರರ ಸಂಘಕ್ಕೆ ದೂರು ಸಹ ನೀಡಿದ್ದಾರೆ.

ಚಿರಂಜೀವಿ ಅಭಿನಯಿಸುತ್ತಿರುವ ಆಚಾರ್ಯ ಸಿನಿಮಾದ ಕತೆ ತಮ್ಮದು ಎಂದು ರಾಜೇಶ್ ಮಂಡೂರಿ ಹೇಳಿದ್ದಾರೆ. ಆ ಕತೆಯನ್ನು ಕೆಲವು ತಿಂಗಳುಗಳ ಹಿಂದೆ ನಿರ್ಮಾಣ ಸಂಸ್ಥೆಯೊಂದಕ್ಕೆ ಹೇಳಿದ್ದೆ ಎಂದು ಅವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಮೈತ್ರಿ ಮೂವೀಸ್‌ ಗೆ ಕತೆ ಹೇಳಿದ್ದ ರಾಜೇಶ್‌

ಮೈತ್ರಿ ಮೂವೀಸ್‌ ಗೆ ಕತೆ ಹೇಳಿದ್ದ ರಾಜೇಶ್‌

ಕೆಲವು ತಿಂಗಳುಗಳ ಹಿಂದೆ ಕತೆಯೊಂದನ್ನು ನಾನು, 'ಮೈತ್ರಿ ಮೂವಿ ಮೇಕರ್ಸ್' ಎಂಬ ನಿರ್ಮಾಣ ಸಂಸ್ಥೆಗೆ ಹೇಳಿದ್ದೆ. ಅವರು ಆಗಲೇ ಆ ಕತೆಯನ್ನು ಮಾರಿಕೊಳ್ಳುವಂತೆ ಹೇಳಿದ್ದರು. ಆದರೆ ನಾನು ಹಾಗೆ ಮಾಡಿರಲಿಲ್ಲ ಎಂದು ರಾಜೇಶ್ ಹೇಳಿದ್ದಾರೆ.

ನಿರ್ಮಾಣ ಸಂಸ್ಥೆಯೇ ಕತೆಯನ್ನು ಮಾರಿದೆ: ಆರೋಪ

ನಿರ್ಮಾಣ ಸಂಸ್ಥೆಯೇ ಕತೆಯನ್ನು ಮಾರಿದೆ: ಆರೋಪ

ಈಗ ರಾಜೇಶ್ ಮಾಡುತ್ತಿರುವ ಆರೋಪವೆಂದರೆ, ನಿರ್ಮಾಣ ಸಂಸ್ಥೆಯು ತನ್ನ ಕತೆಯನ್ನು ಕೊರಟಾಲ ಶಿವ ಹಾಗೂ ಚಿರಂಜೀವಿಗೆ ಮಾರಿದೆ. ಚಿತ್ರ ತಂಡವು ನನಗೆ ಹಣ ಕೊಡದಿದ್ದರೂ ಪರವಾಗಿಲ್ಲ, ಸಿನಿಮಾದ ಕತೆ ನನ್ನದು ಎಂದು ಟೈಟಲ್ ಕಾರ್ಡ್‌ನಲ್ಲಿ ಹೆಸರು ಹಾಕಿದರೆ ಸಾಕು ಎಂದು ರಾಜೇಶ್ ಒತ್ತಾಯಿಸಿದ್ದಾರೆ.

ಮೈತ್ರಿ ಮೂವೀಸ್‌ ನಿಂದ ಸ್ಪಷ್ಟನೆ

ಮೈತ್ರಿ ಮೂವೀಸ್‌ ನಿಂದ ಸ್ಪಷ್ಟನೆ

ಮೈತ್ರಿ ಮೂವಿಸ್ ಸಹ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ರಾಜೇಶ್ ಮಾಡಿರುವ ಆರೋಪಗಳು ಸುಳ್ಳು ಎಂದು ಹೇಳಿವೆ. ಕಳೆದ ವರ್ಷ ನಮ್ಮ ಸಂಸ್ಥೆಯಿಂದ ಮೂರು ಹೊಸ ನಿರ್ದೇಶಕರಿಗೆ ಅವಕಾಶ ನೀಡಿದ್ದೇವೆ. ರಾಜೇಶ್ ಹೇಳಿದಂತೆ ಕತೆ ನಮಗೆ ಅಷ್ಟೋಂದು ಇಷ್ಟವಾಗಿದ್ದಿದ್ದರೆ ನಾವೇ ಅವರಿಗೆ ಅವಕಾಶ ನೀಡಿರುತ್ತಿದ್ದೆವು ಎಂದಿದೆ ಮೈತ್ರಿ ಮೂವೀಸ್. ಅಲ್ಲದೆ ಇಂಥಹಾ ಸುಳ್ಳು ಆರೋಪಗಳಿಗೆ ಸಿನಿಪ್ರೇಮಿಗಳು ತಲೆ ಕೆಡಿಸಿಕೊಳ್ಳಬಾರದು ಎಂದು ವಿನಂತಿಸಿಕೊಂಡಿದೆ.

ಆರೋಪ ತಳ್ಳಿಹಾಕಿದ ಕೊರಟಾಲ ಶಿವ

ಆರೋಪ ತಳ್ಳಿಹಾಕಿದ ಕೊರಟಾಲ ಶಿವ

ಆದರೆ ಆಚಾರ್ಯ ಸಿನಿಮಾದ ನಿರ್ದೇಶಕ ಕೊರಟಾಲ ಶಿವ ಈ ಆರೋಪವನ್ನು ತಳ್ಳಿ ಹಾಕಿದ್ದು, ಆಚಾರ್ಯ ಸಿನಿಮಾದ ಕತೆ, ಚಿತ್ರಕತೆ ತಮ್ಮದೊಬ್ಬರದ್ದೇ ಎಂದು ಹೇಳಿದ್ದಾರೆ. ದೊಡ್ಡ ಸಿನಿಮಾ ಎಂದಮೇಲೆ ಇಂಥಹಾ ಸಮಸ್ಯೆಗಳು ಇದ್ದೇ ಇರುತ್ತವೆ ಎಂದು ಅವರು ಹೇಳಿದ್ದಾರೆ.

More from Filmibeat

English summary
Story writer and associate director Rajesh Mandoori alleged that director Koratala Siva stolen his story and making Acharya movie with Chiranjeevi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X