For Quick Alerts
  ALLOW NOTIFICATIONS  
  For Daily Alerts

  ರಾಮ್ ಚರಣ್ ತೇಜ ದಂಪತಿಗಳಿಗೆ ಕಾಡುತ್ತಿದೆ ಜಾತಕ ದೋಷ

  By ರವೀಂದ್ರ ಕೊಟಕಿ
  |

  ಆತನ ತಂದೆ ತೆಲುಗು ಚಲನಚಿತ್ರ ರಂಗದ ಮೆಗಾಸ್ಟಾರ್. ಚಿಕ್ಕಪ್ಪ ಪವರ್ ಸ್ಟಾರ್. ಸೋದರಮಾವ ಭಾರತ ಚಿತ್ರರಂಗದ ಅತಿದೊಡ್ಡ ಪ್ರೊಡ್ಯೂಸರ್ ಗಳಲ್ಲಿ ಒಬ್ಬ. ಸಿಲ್ವರ್ ಸ್ಪೂನ್ ಬಾಯಲ್ಲಿಟ್ಟುಕೊಂಡು ಹುಟ್ಟಿದ ಹುಡುಗ, ಸಿನಿಮಾರಂಗ ಪ್ರವೇಶಿಸಿ ತನ್ನ ಎರಡನೇ ಚಿತ್ರ 'ಮಗಧೀರ" ಮೂಲಕ 'ಮೆಗಾ ಪವರ್ ಸ್ಟಾರ್' ಅಂತ ಅಭಿಮಾನಿಗಳಿಂದ ಕರೆಸಿಕೊಳ್ಳುವ ಮಟ್ಟಕ್ಕೆ ಬೆಳೆದ ರಾಮ್ ಚರಣ್ ತೇಜ ವಿವಾಹವಾಗಿರುವುದು ಸಾಮಾನ್ಯ ಕುಟುಂಬದ ಹೆಣ್ಣುಮಗಳನ್ನಲ್ಲ. ರಾಮ್ ಚರಣ್ ತೇಜ ಪತ್ನಿ ಉಪಾಸನಾ ಕಾಮಿನೇನಿ ಮಹಿಳಾ ಉದ್ಯಮಿಯಾಗಿದ್ದು ಅಪೋಲೋ ಲೈಫ್ ಉಪಾಧ್ಯಕ್ಷೆಯಾಗಿ, ಬಿ ಪಾಸಿಟಿವ್ ನಿಯತಕಾಲಿಕೆ ಎಡಿಟರ್ ಇನ್ ಚೀಫ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  ಉಪಾಸನಾ ಕಾಮಿನೇನಿ ಮೂಲತಃ ಆಗರ್ಭ ಶ್ರೀಮಂತರ ಕುಟುಂಬಕ್ಕೆ ಸೇರಿದವರು. ಇವರ ತಾಯಿ ಶೋಭಾನಾ ಕಾಮಿನೇನಿ 'ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್' ಇದರ ಹಾಲಿ ಅಧ್ಯಕ್ಷರಾಗಿದ್ದು ಜೊತೆಗೆ ಅಪೋಲೋ ಆಸ್ಪತ್ರೆಗಳ ಸಮೂಹದ ಉಪಾಧ್ಯಕ್ಷೆ ಯಾಗಿದ್ದಾರೆ. ಇನ್ನು ತಂದೆ ಅನಿಲ್ ಕಮಿನೇನಿ KEI Group ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ತಾತ ಪದ್ಮವಿಭೂಷಣ ಪುರಸ್ಕೃತರಾದ ಪ್ರತಾಪರೆಡ್ಡಿ ಭಾರತದಾದ್ಯಂತ ವಿಸ್ತರಿಸಿಕೊಂಡಿರುವ ಅಪೋಲೋ ಆಸ್ಪತ್ರೆಗಳ ಸ್ಥಾಪಕರಾಗಿ, ಹಾಲಿ ಅಧ್ಯಕ್ಷರು ಸಹ ಆಗಿದ್ದಾರೆ.

  2012 ರಲ್ಲಿ ವಿವಾಹವಾದ ಜೋಡಿ

  2012 ರಲ್ಲಿ ವಿವಾಹವಾದ ಜೋಡಿ

  ಇಬ್ಬರದು ಮೂಲತಃ ಬೇರೆ ಬೇರೆ ಹಿನ್ನೆಲೆ. ಒಬ್ಬರದು ಪೂರ್ತಿಯಾಗಿ ಸಿನಿಮಾ ಕುಟುಂಬ. ಮತ್ತೊಬ್ಬರದು ಪೂರ್ತಿಯಾಗಿ ವ್ಯಾಪಾರ ರಂಗಕ್ಕೆ ಸೇರಿದ ಕುಟುಂಬ. ಇಬ್ಬರೂ ಪ್ರೀತಿಸಿ ಎರಡು ಕುಟುಂಬಗಳ ಒಪ್ಪಿಗೆಯೊಂದಿಗೆ ಜೂನ್ 14, 2012ರಂದು ಹೈದರಾಬಾದ್ ನಲ್ಲಿ ಮದುವೆಯಾದರು. ಇಂದಿಗೂ ಕೂಡ ಇಬ್ಬರು ವೈವಾಹಿಕ ಜೀವನವನ್ನು ನೆಮ್ಮದಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಮದುವೆಯಾಗಿ ಒಂಬತ್ತು ವರ್ಷಗಳೇ ಕಳೆದರೂ ಇವರಿಗೆ ಇನ್ನೂ ಸಂತಾನವಾಗದೆ ಇರುವುದು ಮೆಗಾಸ್ಟಾರ್ ಅಭಿಮಾನಿಗಳಿಗೆ ದೊಡ್ಡ ನೋವಿನಂತೆ ಕಾಡುತ್ತಿದೆ. ಹೀಗಾಗಿ ಅವರು ಸದಾ ತಮ್ಮ ಅಭಿಮಾನಿ ನಟನ ಕಡೆಯಿಂದ ಗುಡ್ ನ್ಯೂಸ್ ಸಿಗಬಹುದು ಅಂತ ಕಾತರದಿಂದ ಎದುರು ನೋಡುತ್ತಲೇ ಇದ್ದಾರೆ.

  ಕಾಡುತ್ತಿದೆ ಜಾತಕ ದೋಷ

  ಕಾಡುತ್ತಿದೆ ಜಾತಕ ದೋಷ

  ಮದುವೆಯಾಗಿ ಒಂಬತ್ತು ವರ್ಷ ಕಳೆದರೂ ಈ ದಂಪತಿಗಳಿಗೆ ಇನ್ನೂ ಮಕ್ಕಳು ಆಗದೆ ಇರುವುದರ ಬಗ್ಗೆ ಅನೇಕ ತರದ ರೂಮರ್ಸ್‌ಗಳು ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಲೇ ಇರುತ್ತದೆ. ಒಂಬತ್ತು ವರ್ಷ ಕಳೆದರೂ ಇನ್ನೂ ಇವರಿಗೆ ಮಕ್ಕಳು ಆಗದೆ ಇರುವುದರ ಬಗ್ಗೆ ಜ್ಯೋತಿಷಿ ಹರೀಶಾಸ್ತ್ರಿಯವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಂದರ್ಶಕರು ಇವರ ಸಂತಾನ ಭಾಗ್ಯದ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನನ್ನು ಹೇಳುತ್ತದೆ ಎಂದು ಕೇಳಿದಾಗ ಜ್ಯೋತಿಷ್ಯದ ಪ್ರಕಾರ ಇವರಿಗಿರುವ ಸಮಸ್ಯೆಯ ಬಗ್ಗೆ ಹರಿ ಶಾಸ್ತ್ರಿ ಹೀಗೆ ಹೇಳುತ್ತಾರೆ.

  ಜ್ಯೋತಿಷಿ ಕೊಟ್ಟ ಕಾರಣವೇನು?

  ಜ್ಯೋತಿಷಿ ಕೊಟ್ಟ ಕಾರಣವೇನು?

  'ರಾಮ್ ಚರಣ್ ಅವರದು ಧನಸ್ಸು ಲಗ್ನ. ಪಂಚಮದಲ್ಲಿ ಕುಜರಾಹುಗಳಿದ್ದಾರೆ. ಸಾಧಾರಣವಾಗಿ ರಾಹು 5ನೇ ಮನೆಯಲ್ಲಿದ್ದರೆ ಹೆಚ್ಚು ಸಂತಾನ ಪ್ರಾಪ್ತವಾಗುತ್ತದೆ. ಏಕೆಂದರೆ ರಾಹು ಯಾವುದನ್ನಾದರೂ ಡಬಲ್ ಮಾಡುವ ಲಕ್ಷಣ ಹೊಂದಿರುತ್ತಾನೆ. ಆದರೆ ರಾಮಚರಣ್ ಜಾತಕದಲ್ಲಿ ಕುಜ ಕೂಡ ರಾಹು ಜೊತೆ ಅದೇ ಮನೆಯಲ್ಲಿ ಇರುವುದರಿಂದ ಸಂತಾನಪ್ರಾಪ್ತಿ ತಡವಾಗುತ್ತಿದೆ. ಗೋಚಾರ ಫಲಗಳು ಪ್ರಕಾರ ಗ್ರಹಸ್ಥಿತಿ ಕೂಡ ಈಗ ಅವರಿಗೆ ಹೆಚ್ಚು ಅನುಕೂಲಕರವಾಗಿಲ್ಲ. ಹೀಗಾಗಿ ಅವರಿಗೆ ಸಂತಾನವಾಗುವುದು ತಡವಾಗುತ್ತಿದೆ ಹೊರತು ಸಂತಾನದ ಭಾಗ್ಯ ಮಾತ್ರ ಅವರಿಗೆ ಖಂಡಿತವಾಗಿ ಹೊಂದಿದ್ದಾರೆ.ಎಲ್ಲಾ ಮಕ್ಕಳನ್ನು ತಮ್ಮ ಮಕ್ಕಳೆಂದೇ ಭಾವಿಸುವ ಮನಸ್ತತ್ವವನ್ನು ಇಬ್ಬರೂ ಹೊಂದಿದ್ದಾರೆ. ಹೀಗಾಗಿ ಅವರಿಬ್ಬರು ಅನೇಕ ತರದ ಸಾಮಾಜಿಕ ಚಟುವಟಿಕೆಗಳಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಅವರ ಜೀವನದಲ್ಲಿ ಒಂದು ಒಳ್ಳೆಯ ಸುದ್ದಿ ಖಂಡಿತಾ ಬರುತ್ತದೆ' ಎಂದು ಹರಿಶಾಸ್ತ್ರಿ ಅವರು ಆ ಸಂದರ್ಶನದಲ್ಲಿ ಹೇಳಿದ್ದಾರೆ.

  ಸ್ವಬಲದಿಂದ ಸ್ಟಾರ್ ಪಟ್ಟ ಸಂಪಾದಿಸಿರುವ ರಾಮ್ ಚರಣ್

  ಸ್ವಬಲದಿಂದ ಸ್ಟಾರ್ ಪಟ್ಟ ಸಂಪಾದಿಸಿರುವ ರಾಮ್ ಚರಣ್

  ರಾಮ್ ಚರಣ್ ತೇಜ ತಮ್ಮ ವೃತ್ತಿ ಬದುಕಿನಲ್ಲಿ ಏರುಗತಿಯಲ್ಲಿಯೇ ಸಾಗುತ್ತಿದ್ದಾರೆ. ಅಪ್ಪನ ಹೆಸರು ಬೆನ್ನಿಗಿದ್ದರೂ ಸ್ವ ಪ್ರತಿಭೆಯಿಂದಲೇ ಸ್ಟಾರ್ ಪಟ್ಟ ಸಂಪಾದಿಸಿರುವ ರಾಮ್ ಚರಣ್ ತೇಜ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಈಗಾಗಲೇ ನೀಡಿದ್ದು, ರಾಮ್ ಚರಣ್ ನಟನೆಯ ಹೊಸ ಸಿನಿಮಾ 'ಆರ್‌ಆರ್‌ಆರ್' ಇದೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ಇದರ ಜೊತೆಗೆ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ ಹೊಸ ಸಿನಿಮಾದಲ್ಲಿಯೂ ರಾಮ್ ಚರಣ್ ತೇಜ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಕಿಯಾರಾ ಅಡ್ವಾಣಿ ನಾಯಕಿ. ಜೊತೆಗೆ ಸಿನಿಮಾ ನಿರ್ಮಾಪಕರೂ ಆಗಿರುವ ರಾಮ್ ಚರಣ್ ತೇಜ ತಂದೆ ಚಿರಂಜೀವಿಯ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಅವರೇ ನಿರ್ಮಿಸಿ, ಚಿರಂಜೀವಿ ನಟಿಸಿರುವ 'ಆಚಾರ್ಯ' ಸಿನಿಮಾ ಡಿಸೆಂಬರ್‌ನಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದಲ್ಲಿ ರಾಮ್ ಚರಣ್ ತೇಜ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

  English summary
  Famous Astrologer reveals Tollywood couple Ram Charan and His Wife Upasana Having Jatak Dosha in their Horoscope, that's the reason behind Ram Charan and Upasana did not have kids even after 9 years of their marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X