Just In
Don't Miss!
- News
ದಿಢೀರ್ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕಾರಣ ನೀಡಿದ ಸಚಿವ ಕೆ. ಸುಧಾಕರ್
- Education
KSCCF Recruitment 2021: 45 ಲೆಕ್ಕಿಗರು, ಎಫ್ಡಿಎ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಮಾರ್ಚ್ ತಿಂಗಳಿನಲ್ಲಿ ಹ್ಯುಂಡೈ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ
- Sports
ಐಎಸ್ಎಲ್: ಸಮಬಲ ಸಾಧಿಸಿದ ಗೋವಾ ಎಫ್ಸಿ, ಮುಂಬೈ ಎಫ್ಸಿ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 05ರ ಮಾರುಕಟ್ಟೆ ದರ ಇಲ್ಲಿದೆ
- Lifestyle
ಮಹಾಶಿವರಾತ್ರಿ 2021: ದಿನಾಂಕ, ಪೂಜಾಸಮಯ, ಮಹತ್ವ ಹಾಗೂ ವಿಧಿವಿಧಾನದ ಸಂಪೂರ್ಣ ಮಾಹಿತಿ ನಿಮಗಾಗಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
RRR ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ರಾಜಮೌಳಿ
ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ RRR ನ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.
ಜೂ.ಎನ್‌ಟಿಆರ್-ರಾಮ್‌ಚರಣ್ ತೇಜ ಮೊದಲ ಬಾರಿಗೆ ಒಟ್ಟಿಗೆ ನಟಿಸಿ, ರಾಜಮೌಳಿ ನಿರ್ದೇಶಿಸುತ್ತಿರುವ ಈ ಸಿನಿಮಾ ಅಕ್ಟೋಬರ್ 13 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಬಿಡುಗಡೆ ಬಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ ರಾಜಮೌಳಿ, 'ಅಕ್ಟೋಬರ್ 13 ರಂದು ಬೆಂಕಿ, ನೀರಿನ ತಡೆರಹಿತ ಶಕ್ತಿಗೆ ಸಾಕ್ಷಿಯಾಗಿ' ಎಂದು ಹೇಳಿದ್ದಾರೆ.
ತೆಲುಗು ರಾಜ್ಯದ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಕುರಿತಾದ ಸಿನಿಮಾ ಆರ್‌ಆರ್ಆರ್ ಆಗಿದ್ದು. ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್, ಕೋಮರಂ ಭೀಮ್ ಪಾತ್ರದಲ್ಲಿ ಜೂ.ಎನ್‌ಟಿಆರ್ ನಟಿಸಿದ್ದಾರೆ.

ಆಲಿಯಾ ಭಟ್, ಅಜಯ್ ದೇವಗನ್ ಸಹ ಇದ್ದಾರೆ
ಆರ್‌ಆರ್ಆರ್ ಸಿನಿಮಾದಲ್ಲಿ ಬಾಲಿವುಡ್‌ನ ಖ್ಯಾತ ನಟಿ ಆಲಿಯಾ ಭಟ್ ನಟಿಸಿದ್ದು, ಅವರ ಜೊತೆ ನಟ ಅಜಯ್ ದೇವಗನ್ ಸಹ ಸಿನಿಮಾದಲ್ಲಿದ್ದಾರೆ. ವಿದೇಶಿ ನಟಿ ಒಲಿವಾ ಮೋರಿಸ್ ಸಹ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ.

ಬೇಗನೇ ಚಿತ್ರೀಕರಣ ಮುಗಿಸಿದ ತಂಡ
ಕೊರೊನಾ ಕಾರಣಕ್ಕೆ ಹಲವು ತಿಂಗಳು ಸಿನಿಮಾದ ಚಿತ್ರೀಕರಣ ಬಂದ್ ಆಗಿತ್ತು. ಆದರೆ ಅನ್‌ಲಾಕ್ ನ ಬಳಿಕ ವೇಗವಾಗಿ ಚಿತ್ರೀಕರಣ ಮುಗಿಸಿದ ಚಿತ್ರತಂಡ ಇದೀಗ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣದಲ್ಲಿ ತೊಡಗಿದೆ. ಅದರ ನಂತರ ಪೋಸ್ಟ್ ಪ್ರೊಡಕ್ಷನ್‌ಗೆ ಸಾಕಷ್ಟು ಅವಧಿ ಹಿಡಿಯಲಿದೆ.

ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ
ಬಾಹುಬಲಿ ಸಿನಿಮಾದ ನಂತರ ರಾಜಮೌಳಿ ನಿರ್ದೇಶಿಸುತ್ತಿರುವ ಮೊದಲ ಸಿನಿಮಾ ಇದಾಗಿದ್ದು. ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿವೆ. ಅದರಲ್ಲಿಯೂ ತೆಲುಗಿನ ಇಬ್ಬರು ಸೂಪರ್ ಸ್ಟಾರ್‌ಗಳು ಸಿನಿಮಾದಲ್ಲಿ ನಟಿಸಿರುವುದು ಸಹ ನಿರೀಕ್ಷೆಯನ್ನು ನೂರ್ಮಡಿಗೊಳಿಸಿದೆ.

ಹೊಸ ಪೋಸ್ಟರ್ ಬಿಡುಗಡೆ
ಸಿನಿಮಾವನ್ನು ಡಿವಿವಿ ದಾನಯ್ಯ ನಿರ್ಮಿಸಿದ್ದು, ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ. ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ಈಗಾಗಲೇ ಭಾರಿ ವೈರಲ್ ಆಗಿದ್ದು. ಇಂದು ಸಹ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ.