For Quick Alerts
  ALLOW NOTIFICATIONS  
  For Daily Alerts

  ಮೊದಲ ಬಾರಿಗೆ ಚಿಕ್ಕಪ್ಪನ ಸಿನಿಮಾದಲ್ಲಿ ರಾಮ್ ಚರಣ್: ಪಾತ್ರ ಯಾವುದು?

  |

  ಟಾಲಿವುಡ್ ಸ್ಟಾರ್ ನಟ ಪವನ್ ಕಲ್ಯಾಣ್ ಸದ್ಯ ವಕೀಲ್ ಸಾಬ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ರಾಜಕೀಯದ ಮೇಲಿನ ಕಡುಮೋಹದಿಂದ ಸಿನಿಮಾಗೆ ಬ್ರೇಕ್ ನೀಡಿದ್ದ ಪವನ್ ಗೆ, ಸಿನಿಮಾ ಸೆಳೆತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ರಾಜಕೀಯದ ನಡುವೆಯೂ ಪವನ್ ಕಲ್ಯಾಣ್ ಎರಡು ವರ್ಷಗಳ ಬಳಿಕ ವಕೀಲ್ ಸಾಬ್ ಸಿನಿಮಾ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

  ಕನ್ನಡದಲ್ಲೇ ಧನ್ಯವಾದ ಹೇಳಿದ ಬಾಹುಬಲಿ ಮಾಂತ್ರಿಕ | RRR | Rajmouli | NTR | Ram Charan

  ಅಂದ್ಹಾಗೆ ವಕೀಲ್ ಸಾಬ್ ಬಾಲಿವುಡ್ ನ ಪಿಂಕ್ ಸಿನಿಮಾದ ರಿಮೇಕ್. ಬಾಲಿವುಡ್ ನಲ್ಲಿ ಅಮಿತಾಬ್ ಬಚ್ಚನ್ ಅಭಿನಯಿಸಿದ್ದ ಪಾತ್ರದಲ್ಲಿ ಪವನ್ ಕಲ್ಯಾಣ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ನಂತರ ಪವನ್ ಹಿಸ್ಟಾರಿಕಲ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶೇಷ ಅಂದರೆ ಚಿತ್ರದಲ್ಲಿ ಅಣ್ಣ ಚಿರಂಜೀವಿ ಪುತ್ರ ರಾಮ್ ಚರಣ್ ಕೂಡ ಕಾಣಿಸಿಕೊಳ್ಳುತ್ತಿದ್ದಾರಂತೆ. ಮುಂದೆ ಓದಿ...

  ಸೊಸೆಯನ್ನು ಹೊಗಳಿದ ಚಿರಂಜೀವಿ, ರಾಮ್‌ ಚರಣ್‌ಗೆ ಚಿಕ್ಕಪ್ಪ ಪವನ್ ಶಹಭಾಸ್ಸೊಸೆಯನ್ನು ಹೊಗಳಿದ ಚಿರಂಜೀವಿ, ರಾಮ್‌ ಚರಣ್‌ಗೆ ಚಿಕ್ಕಪ್ಪ ಪವನ್ ಶಹಭಾಸ್

  ಚಿಕ್ಕಪ್ಪನ ಸಿನಿಮಾದಲ್ಲಿ ರಾಮ್ ಚರಣ್

  ಚಿಕ್ಕಪ್ಪನ ಸಿನಿಮಾದಲ್ಲಿ ರಾಮ್ ಚರಣ್

  ವಕೀಲ್ ಸಾಬ್ ಸಿನಿಮಾ ಮುಗಿಯುತ್ತಿದ್ದಂತೆ ಪವನ್ ಕಲ್ಯಾಣ್ ಮತ್ತೊಂದು ಬಿಗ್ ಬಜೆಟ್ ಹಿಸ್ಟಾರಿಕಲ್ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಟ ರಾಮ್ ಚರಣ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅತಿಥಿ ಪಾತ್ರದ ಮೂಲಕ ರಾಮ್ ಚರಣ್ ಪವನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಮೊದಲ ಬಾರಿಗೆ ರಾಮ್ ಚರಣ್ ಮತ್ತು ಪವನ್ ಕಲ್ಯಾಣ್ ಒಟ್ಟಿಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಪಾತ್ರ ನೀಡಲು ಕಾಂಪ್ರಮೈಸ್ ಮಾಡಿಕೊಳ್ಳಲು ಹೇಳಿದ್ದರು: ಪವನ್ ಕಲ್ಯಾಣ್ ನಾಯಕಿಪಾತ್ರ ನೀಡಲು ಕಾಂಪ್ರಮೈಸ್ ಮಾಡಿಕೊಳ್ಳಲು ಹೇಳಿದ್ದರು: ಪವನ್ ಕಲ್ಯಾಣ್ ನಾಯಕಿ

  ಕ್ರಿಶ್ ನಿರ್ದೇಶನದ ಸಿನಿಮಾ

  ಕ್ರಿಶ್ ನಿರ್ದೇಶನದ ಸಿನಿಮಾ

  ಖ್ಯಾತ ನಿರ್ದೇಶಕ ಕ್ರಿಶ್ ಪವನ್ ಕಲ್ಯಾಣ್ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. 'ಕಥಾನಾಯಕುಡು' ಮತ್ತು ಹಿಂದಿಯಲ್ಲಿ 'ಮಣಿಕರ್ಣಿಕಾ' ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಕ್ರಿಶ್ ಈಗ ಪವರ್ ಸ್ಟಾರ್ ಪವನ್ ಕಲ್ಯಾಣ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಕ್ರಿಶ್, ಚಿತ್ರದ ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಮುಗಿಯುತ್ತಿದ್ದಂತೆ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

  ಮೊಘಲ್ ಸಾಮ್ರಾಜ್ಯದ ಹಿನ್ನಲೆಯ ಸಿನಿಮಾ

  ಮೊಘಲ್ ಸಾಮ್ರಾಜ್ಯದ ಹಿನ್ನಲೆಯ ಸಿನಿಮಾ

  ಪವನ್ ಕಲ್ಯಾಣ್ ಅಭಿನಯಿಸುವ ಹಿಸ್ಟಾರಿಕಲ್ ಸಿನಿಮಾ ಮೊಘಲ್ ಸಾಮ್ರಾಜ್ಯದ ಕಥೆಯಂತೆ. ಈ ಚಿತ್ರದ ವಿಶೇಷ ಪಾತ್ರಕ್ಕೆ ಈಗಾಗಲೆ ರಾಮ್ ಚರಣ್ ಅವರನ್ನು ವಿಶೇಷ ಪಾತ್ರಕ್ಕೆ ಆಹ್ವಾನಿಸುವ ಬಗ್ಗೆ ಪವನ್ ಕಲ್ಯಾಣ್ ಜೊತೆ ಚರ್ಚೆ ಮಾಡಿದೆಯಂತೆ ಚಿತ್ರತಂಡ. ಕಥಾನಾಯಕನ ಹಿನ್ನಲೆಯನ್ನು ವಿವರಿಸುವ ಪಾತ್ರಧಾರಿಯಾಗಿ ರಾಮ್ ಚರಣ್ ಕಾಣಿಸಿಕೊಳ್ಳಲಿದ್ದಾರಂತೆ.

  ಆರ್ ಆರ್ ಆರ್ ಸಿನಿಮಾದಲ್ಲಿ ರಾಮ್ ಚರಣ್

  ಆರ್ ಆರ್ ಆರ್ ಸಿನಿಮಾದಲ್ಲಿ ರಾಮ್ ಚರಣ್

  ರಾಜಮೌಳಿ ಸಿನಿಮಾದ ಆರ್ ಆರ್ ಆರ್ ಸಿನಿಮಾದಲ್ಲಿ ರಾಮ್ ಚರಣ್ ಬ್ಯುಸಿಯಾಗಿದ್ದಾರೆ. ಜೊತೆಗೆ ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾದಲ್ಲಿಯೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಪವನ್ ಕಲ್ಯಾಣ್ ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆರ್ ಆರ್ ಆರ್ ಸಿನಿಮಾ ಮುಗಿಯುತ್ತಿದ್ದಂತೆ ರಾಮ್ ಚರಣ್ ಪವನ್ ಕಲ್ಯಾಣ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

  English summary
  Telugu Actor Ram Charan may play a guest role in his uncle Pawan Kalyan's new film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X