twitter
    For Quick Alerts
    ALLOW NOTIFICATIONS  
    For Daily Alerts

    ಹತ್ತು ವರ್ಷವಾದರೂ ಮಕ್ಕಳಿಲ್ಲ: ಸದ್ಗುರು ಬಳಿ ಸಮಸ್ಯೆ ಹೇಳಿಕೊಂಡ ಚಿರಂಜೀವಿ ಸೊಸೆ

    |

    ತೆಲುಗು ನಟ ಚಿರಂಜೀವಿಯವರದ್ದು ಬಹುದೊಡ್ಡ ಕುಟುಂಬ. ತೆಲುಗಿನ ಹಲವು ಸ್ಟಾರ್ ನಟರು ಈ ಕುಟುಂಬದವರೇ. ಚಿರಂಜೀವಿ ನಂತರದ ಜನರೇಷನ್‌ನವರು ಈಗ ತೆಲುಗು ಚಿತ್ರರಂಗದಲ್ಲಿ ಪ್ರಮುಖ ನಾಯಕ ನಟರಾಗಿ ಬೆಳೆಯುತ್ತಿದ್ದದಾರೆ.

    ಸ್ವತಃ ನಟ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ತೆಲುಗಿನ ಟಾಪ್ ನಟರಾಗಿದ್ದಾರೆ. ಪುತ್ರನ ಬಗ್ಗೆ ಬಹಳ ಹೆಮ್ಮೆ ಪಡುತ್ತಿರುವಾಗಿ ನಟ ಚಿರಂಜೀವಿ ಈ ಹಿಂದೆ ಹಲವು ಬಾರಿ ಹೇಳಿಕೊಂಡಿದ್ದಾರೆ.

    ಮತ್ತೊಮ್ಮೆ ಚಿರಂಜೀವಿ ಸಿನಿಮಾದಿಂದ ಹೊರನಡೆದ ರವಿತೇಜಮತ್ತೊಮ್ಮೆ ಚಿರಂಜೀವಿ ಸಿನಿಮಾದಿಂದ ಹೊರನಡೆದ ರವಿತೇಜ

    ಚಿರಂಜೀವಿ ಬಹುತೇಕ ಸಂತೃಪ್ತ ಜೀವನ ಕಳೆಯುತ್ತಿದ್ದಾರಾದರೂ ಮೊಮ್ಮಕ್ಕಳಿಲ್ಲವೆಂಬ ಕೊರತೆ ಕಾಡಿರಲಕ್ಕೂ ಸಾಕು. ರಾಮ್ ಚರಣ್ ಹಾಗೂ ಉಪಾಸನಾ ವಿವಾಹವಾಗಿ ಹತ್ತು ವರ್ಷಗಳಾಗಿವೆ ಆದರೆ ಈವರೆಗೆ ಮಕ್ಕಳಾಗಿಲ್ಲ. ಈ ಬಗ್ಗೆ ಉಪಾಸನಾ ಈ ವರೆಗೆ ಬಹಿರಂಗವಾಗಿ ಮಾತನಾಡಿಲ್ಲ. ಸಂದರ್ಶನವೊಂದರಲ್ಲಿ ಈ ಬಗ್ಗೆ ಕೇಳಿದಾಗಲೂ ಸಿಟ್ಟಿನಿಂದಲೇ ಪ್ರತಿಕ್ರಿಯಿಸಿದ್ದರು, ಆದರೆ ಈಗ ಸದ್ಗುರು ಬಳಿ ತಮ್ಮ ಈ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

    ಸದ್ಗುರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ನಿರೂಪಕಿಯಾಗಿ ಭಾಗವಹಿಸಿದ್ದ ಚಿರಂಜೀವಿ ಸೊಸೆ, ರಾಮ್ ಚರಣ್ ತೇಜ ಪತ್ನಿ ಉಪಾಸನಾ ಕೋನಿಡೇಲ, ಸದ್ಗುರು ಅವರಿಗೆ ಕೆಲವು ಫನ್ನಿ ಪ್ರಶ್ನೆಗಳನ್ನು ಕೇಳಿದರು. ಜೊತೆಗೆ ತಮ್ಮ ಖಾಸಗಿ ಪ್ರಶ್ನೆಯನ್ನು ಸಹ ಕೇಳಿದರು. ''ನಾನು ಹತ್ತು ವರ್ಷದಿಂದಲೂ ಖುಷಿಯಾಗಿ ಸಾಂಸಾರಿಕ ಜೀವನ ನಡೆಸುತ್ತಿದ್ದೇನೆ. ಆದರೂ ಹಲವರು ನನ್ನ RRR ಬಗ್ಗೆ ಜನ ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಅದೇನೆಂದರೆ ರಿಲೇಶನ್‌ಶಿಪ್ (ನನ್ನ ಸಂಬಂಧ), ರಿಪ್ರೊಡ್ಯೂಸ್ (ಸಂತಾನೋತ್ಪತ್ತಿ) ಹಾಗೂ ರೋಲ್ ಆಫ್ ಲೈಫ್ (ಜೀವನದ ಉದ್ದೇಶ) ಎಂದಿದ್ದಾರೆ ಉಪಾಸನಾ.

    ವೈಯಕ್ತಿಕ ಜೀವನದ RRR ಗಳ ಬಗ್ಗೆ ಪ್ರಶ್ನೆ ಕೇಳುತ್ತಾರೆ: ಉಪಾಸನಾ

    ವೈಯಕ್ತಿಕ ಜೀವನದ RRR ಗಳ ಬಗ್ಗೆ ಪ್ರಶ್ನೆ ಕೇಳುತ್ತಾರೆ: ಉಪಾಸನಾ

    ಇದಕ್ಕೆ ಉತ್ತರಿಸಿರುವ ಸದ್ಗುರು, 'ರಿಲೇಶನ್‌ಶಿಪ್' ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಅದು ಸಂಪೂರ್ಣವಾಗಿ ನಿಮಗೆ ಬಿಟ್ಟ ವಿಚಾರ. ಆದರೆ ರಿಪ್ರೊಡ್ಯೂಸ್ (ಸಂತಾನೋತ್ಪತ್ತಿ) ಬಗ್ಗೆ ಹೇಳಬಲ್ಲೆ. ಭಾರತದ ಯಾವ ಹೆಣ್ಣು ಮಕ್ಕಳು ಸಂತಾನೋತ್ಪತ್ತಿ ಮಾಡುವ ಶಕ್ತಿ ಹೊಂದಿದ್ದರೂ, ಸಂತಾನೋತ್ಪತ್ತಿ ಮಾಡದೇ ಇರುವ ನಿರ್ಧಾರ ಮಾಡಿದ್ದಾರೊ ಅವರಿಗೆ ನಾನು ಪ್ರಶಸ್ತಿ ನೀಡಲು ಬಯಸುತ್ತೇನೆ. ನಿಜವಾಗಿಯೂ ಆ ಮಹಿಳೆಯರು ಅಭಿನಂದನಾರ್ಹರು'' ಎಂದಿದ್ದಾರೆ ಸದ್ಗುರು.

    ''ಹುಲಿಗಳು ಅಳಿವಿನ ಅಂಚಿನಲ್ಲಿವೆ, ಆದರೆ ಮನುಷ್ಯರು ಹಾಗಲ್ಲ''

    ''ಹುಲಿಗಳು ಅಳಿವಿನ ಅಂಚಿನಲ್ಲಿವೆ, ಆದರೆ ಮನುಷ್ಯರು ಹಾಗಲ್ಲ''

    ''ಹೌದಾ, ಅದೇಕೆ ಸದ್ಗುರು'' ಎಂದು ಆಸಕ್ತಿಯಿಂದ ಕೇಳಿದ ಉಪಾಸಾನಾಗೆ ತಮ್ಮ ಉತ್ತರ ವಿವರಿಸಿರುವ ಸದ್ಗುರು, ''ನೀವೊಬ್ಬ ಹುಲಿ ಆಗಿದ್ದಿದ್ದರೆ ನಾನು ಖಂಡಿತ ಹೇಳುತ್ತಿದ್ದೆ ಸಂತಾನೋತ್ಪತ್ತಿ ಮಾಡು ಎಂದು ಏಕೆಂದರೆ ಹುಲಿಗಳು ಅಳಿವಿನ ಅಂಚಿನಲ್ಲಿವೆ, ಆದರೆ ನಾವು ಮನುಷ್ಯರು ಅಳಿವಿನಂಚಿನಲ್ಲೇನೂ ಇಲ್ಲ, ಹಾಗಿದ್ದಮೇಲೆ ಏಕೆ ನಾವು ಸಂತಾನೋತ್ಪತ್ತಿ ಮಾಡಬೇಕು'' ಎಂದು ಸದ್ಗುರು ಪ್ರಶ್ನೆ ಮಾಡಿದ್ದಾರೆ.

    ನಾವು ಬಹಳ ಮಂದಿ ಆಗಿಬಿಟ್ಟಿದ್ದೀವಿ: ಸದ್ಗುರು

    ನಾವು ಬಹಳ ಮಂದಿ ಆಗಿಬಿಟ್ಟಿದ್ದೀವಿ: ಸದ್ಗುರು

    ''ನಾವು ಮನುಷ್ಯರು ಒಳ್ಳೆಯವರೇನೋ ಸರಿ ಆದರೆ ನಾವು ಬಹಳ ಮಂದಿ ಆಗಿಬಿಟ್ಟಿದ್ದೇವೆ, ನಮ್ಮಿಂದ ಬೇರೆ ಜೀವಿಗಳಿಗೆ ಸ್ಥಳವಿಲ್ಲದೇ ಆಗುತ್ತಿದೆ. ಹಾಗಾಗಿ ಯಾವ ಮಹಿಳೆಗೆ ಸಂತಾನೋತ್ಪತ್ತಿ ಮಾಡುವ ಶಕ್ತಿ ಇದ್ದೂ ಆಕೆ ಸಂತಾನೋತ್ಪತ್ತಿ ಮಾಡದೇ ಇರುತ್ತಾರೆಯೋ ಅವರು ಖಂಡಿತ ಅಭಿನಂದನಾರ್ಹರು, ಅವರಿಗೆ ನನ್ನ ಶುಭ ಹಾರೈಕೆಗಳು'' ಎಂದಿರುವ ಸದ್ಗುರು, ''ತಲೆಯಲ್ಲಿ ವಿಷಯ ಹೆಚ್ಚಿರುವವರಿಗೆ ತಲೆ ಹೆಚ್ಚು ಕೆಲಸ ಮಾಡುತ್ತದೆ, ಇಲ್ಲವಾದವರಿಗೆ ಜನನಾಂಗಗಳು ಹೆಚ್ಚು ಜಾಗೃತವಾಗಿರುತ್ತವೆ, ಜನಸಂಖ್ಯೆ ಹೆಚ್ಚಾಗುತ್ತವೆ'' ಎಂದಿದ್ದಾರೆ ಸದ್ಗುರು.

    ನನ್ನ ಅಮ್ಮ, ಅತ್ತೆ ನಿಮಗೆ ಕರೆ ಮಾಡುತ್ತಾರೆ: ಉಪಾಸನಾ

    ನನ್ನ ಅಮ್ಮ, ಅತ್ತೆ ನಿಮಗೆ ಕರೆ ಮಾಡುತ್ತಾರೆ: ಉಪಾಸನಾ

    ಸದ್ಗುರು ಮಾತು ಕೇಳಿ ನಿಜ ಎಂದ ಉಪಾಸನಾ, ''ನಿಮಗೆ ನನ್ನ ತಾಯಿ ಹಾಗೂ ನನ್ನ ಅತ್ತೆಯ ಕರೆಗಳು ಶೀಘ್ರದಲ್ಲಿಯೇ ಬರಲಿವೆ'' ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಸದ್ಗುರು ಬರಲಿ ಬಿಡಿ, ಇಂಥಹಾ ಸಾಕಷ್ಟು ಅತ್ತೆಯಂದಿರ ಕರೆಗಳಿಗೆ ನಾನು ಉತ್ತರಿಸಿದ್ದೇನೆ, ಅವರ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನೂ ನೀಡಿದ್ದೇನೆ'' ಎಂದಿದ್ದಾರೆ.

    English summary
    Ram Charan Tej's wife Upasana Konidela talked with Sadguru about not having baby. He said should congratulate you for not having baby.
    Monday, July 11, 2022, 9:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X