Don't Miss!
- News
ಮೋದಿ, ಅಮಿತ್ ಶಾ ಗೆ ಟೀಕೆ ಮಾಡಿದರೆ ದೊಡ್ಡವರಾಗ್ತೀವಿ ಅನ್ನೋ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ: ಈಶ್ವರಪ್ಪ
- Automobiles
ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಮ್ ಚರಣ್ ಪತ್ನಿ ಉಪಾಸನಾಗೆ ಕೊರೊನಾ ಪಾಸಿಟಿವ್: ವಾರದ ಬಳಿಕ ವಿಚಾರ ರಿವೀಲ್!
ಕೋವಿಡ್ 19 ಪ್ರಕರಣಗಳು ಕಡಿಮೆ ಆದ ಬಳಿಕ, ಸಿನಿಮಾ ತಾರೆಯರಿಗೆ ಕೊರೊನಾ ಬಂದ ಬಗ್ಗೆಯೂ ಸುದ್ದಿ ಕಡಿಮೆ ಆಗಿತ್ತು ಆದರೆ ಈಗ ಮತ್ತೆ ಕೊರೊನಾ ಹಾವಳಿ ಶುರುವಾದಂತೆ ಕಾಣುತ್ತಿದೆ. ತೆಲುಗು ನಟ ರಾಮ್ ಚರಣ್ ಪತ್ನಿ ಉಪಾಸನಾ ಅವರಿಗೆ ಕೊರೊನಾ ಕಾಣಿಸಿಕೊಂಡಿದೆ. ಆದರೆ ಕೊರೊನಾ ಬಂದು ಒಂದು ವಾರ ಆದ ಬಳಿಕ ಈ ವಿಚಾರವನ್ನು ಉಪಾಸನಾ ಹಂಚಿಕೊಂಡಿದ್ದಾರೆ.
ಉಪಾಸನಾ ಸಾಮಾಜಿಕ ಜಾಲತಾಣದ ಮೂಲಕ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಆದರೆ ತಮಗೆ ಕೊರೊನಾ ಬಂದಿದೆ ಎಂದಲ್ಲ, ಕೊರೊನಾ ಬಂದು ಗುಣಮುಖಳಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹೌದು ಸದ್ಯ ಕೊರೊನಾದಿಂದ ಉಪಾಸನಾ ಗುಣಮುಖರಾಗಿದ್ದಾರೆ. ಹಾಗಾಗಿ ಈ ವಿಚಾರವನ್ನು ಈಗ ಹಂಚಿಕೊಂಡಿದ್ದಾರೆ.
ನಯನತಾರ
ವಿಘ್ನೇಶ್
ಮದುವೆ:
ಗುರುಬಲ
ಇಲ್ಲ
ಎಂದ
ಜ್ಯೋತಿಷಿ!
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದಾರೆ. ಉಪಾಸನ ಅವರು ಕೊರೊನಾ ಕೊರೊನಾ ಪರಿಣಾಮ ಹೇಗೋ ಏನೋ ಎಂದು ತುಂಬಾ ಹೆದರಿಕೊಂಡಿದ್ದರಂತೆ. ಆದರೆ ಈಗ ತನ್ನ ದೇಹದ ಮಾತನ್ನು ಕೇಳಲು ಕಲಿದ್ದಾರಂತೆ. ಈ ಬಗ್ಗೆ ಫೋಟೋ ಹಂಚಿಕೊಂಡು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಪೋಸ್ಟ್‌ನಲ್ಲಿ ಉಪಾಸನಾ ಹೀಗೆ ಬರೆದುಕೊಂಡಿದ್ದಾರೆ. "ಕಳೆದ ವಾರ ಕೋವಿಡ್ ಇತ್ತು. ನನಗೆ ಲಸಿಕೆ ಹಾಕಿದ್ದರಿಂದ ಸೌಮ್ಯ ದಾಳಿ ಆಗಿದೆ. ವೈದ್ಯರು ಪ್ಯಾರಸಿಟಮಾಲ್ ಮತ್ತು ವಿಟಮಿನ್ ಗಳನ್ನು ಮಾತ್ರ ಶಿಫಾರಸು ಮಾಡಿದರು. ನಂತರದ ಪರಿಣಾಮಗಳ ಬಗ್ಗೆ ತುಂಬಾ ಹೆದರಿದ್ದೆ. ಶಕ್ತಿ ಕುಂದುತ್ತದೆ, ಕೂದಲು ಉದುರುತ್ತದೆ, ದೇಹದಲ್ಲಿ ನೋವುಗಳು ಕಾಣಿಸಿಕೊಳ್ಳುತ್ತವೆ ಎಂದು ಹಲವರು ಹೇಳಿದ್ದರು. ಆದ್ರೆ ಆ ರೀತಿ ಏನು ಆಗುತ್ತಿಲ್ಲ. ಕೋವಿಡ್ ಮತ್ತೆ ಮರುಕಳಿಸುತ್ತೆಯೇನೋ ಎಂಬುದು ಗೊತ್ತಿಲ್ಲ. ಆದರೆ ಸುರಕ್ಷಿತವಾಗಿರುವುದು ಉತ್ತಮ. ಜೀವನವನ್ನು ಪೂರ್ತಿಯಾಗಿ ಜೀವಿಸಿ. ಚೆನ್ನೈನಲ್ಲಿ ಇರುವ ನನ್ನ ಅಜ್ಜಿಯನ್ನು ಭೇಟಿಯಾಗಲು ಹೊರಟಿದ್ದೆ, ಆಗ ಪರೀಕ್ಷೆ ಮಾಡಿಸಿದ ಕಾರಣ ಈ ವಿಚಾರ ತಿಳಿಯಿತು. ಇಲ್ಲದಿದ್ದರೆ ಗೊತ್ತಾಗುತ್ತಿರಲಿಲ್ಲ." ಎಂದು ಬರೆದುಕೊಂಡಿದ್ದಾರೆ.
ಉಪಾಸನಾ ಕೋನಿಡೆಲಾ ಸಿನಿಮಾದಲ್ಲಿ ಅಭಿನಯಿಸಿಲ್ಲ, ಬದಲಿಗೆ ಆಕೆ ಉದ್ಯಮಿ, ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರುವ ಉಪಾಸನ ತಮ್ಮ ಕುಟುಂಬದ ಫೊಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.