For Quick Alerts
  ALLOW NOTIFICATIONS  
  For Daily Alerts

  ಅಕ್ಕನಿಗಾಗಿ ಗನ್ ಹಿಡಿದ ರಾಮ್ ಚರಣ್ ತೇಜ

  |

  ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ತೆಲುಗಿನ ಸ್ಟಾರ್ ನಟರಲ್ಲಿ ಒಬ್ಬರು. ಅಪ್ಪನ ನೆರಳಿನಿಂದ ಹೊರಗೆ ಬಂದು ತಮ್ಮದೇ ಆದ ಪ್ರತ್ಯೇಕ ಸ್ಟೈಲ್ ಹಾಗೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ರಾಮ್ ಚರಣ್ ತೇಜ.

  ಚಿರಂಜೀವಿಗೆ ಮೂವರು ಮಕ್ಕಳು ಅದರಲ್ಲಿ ಮೊದಲಿಗೆ ಸುದ್ದಿಗೆ ಬಂದವರು ಸಿರಜಾ ಕೊನಿಡೇಲಾ. ಇವರು 2007 ರಲ್ಲಿ ಮನೆಯಿಂದ ಹೊರಹೋಗಿ ಮದುವೆ ಆಗಿದ್ದು ದೊಡ್ಡ ಸುದ್ದಿಯಾಗಿತ್ತು. ನಂತರ 2011 ರಲ್ಲಿ ಗಂಡನ ವಿರುದ್ಧ ಪ್ರಕರಣ ದಾಖಲಿಸಿ ಡಿವೋರ್ಸ್ ಪಡೆದು, ನಂತರ 2016 ರಲ್ಲಿ ಎರಡನೇ ಮದುವೆಯಾದರು.

  ಆದರೆ ಚಿರಂಜೀವಿ ಅವರ ಮತ್ತೊಬ್ಬ ಮಗಳು ಸುಶ್ಮಿತಾ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಆಕೆ ಈಗ ನಿರ್ಮಾಪಕಿ ಆಗಿದ್ದಾರೆ. ಅಕ್ಕ ಸುಶ್ಮಿತಾ ಎಂದರೆ ರಾಮ್ ಚರಣ್ ತೇಜಾ ಗೆ ಬಹುಪ್ರೀತಿ. ಅಕ್ಕ ಕೈ ಹಾಕಿರುವ ಹೊಸ ಸಾಹಕ್ಕೆ ರಾಮ್ ಚರಣ್ ಬೆಂಬಲವಾಗಿ ನಿಂತಿದ್ದಾರೆ.

  'ಶೂಟೌಟ್ ಅಟ್ ಆಲಿಯಾ' ಎಂಬ ಸಿನಿಮಾ ಒಂದನ್ನು ತೆಗೆದಿದ್ದಾರೆ ಸುಶ್ಮಿತಾ ಕೊನಿಡೇಲಾ. ಆ ಸಿನಿಮಾ ಝೀ5 ನಲ್ಲಿ ಪ್ರಸಾರವಾಗಲಿದೆ. ಅದರ ಪ್ರಚಾರ ಕಾರ್ಯಕ್ರಕ್ಕೆ ಬಂದಿದ್ದ ರಾಮ್‌ ಚರಣ್ ಅಕ್ಕನ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ.

  ಇದೇ ಸಮಯದಲ್ಲಿ ಸಿನಿಮಾದ ಪ್ರಚಾರದ ಸಲುವಾಗಿ ರಾಮ್ ಚರಣ್ ತೇಜ ಗನ್ನು ಹಿಡಿದು ಕ್ಯಾಮೆರಾಗೆ ಫೋಸು ನೀಡಿದ್ದಾರೆ. ರಾಮ್ ಚರಣ್ ಗನ್ ಹಿಡಿದ ಚಿತ್ರಗಳು ಸಖತ್ ವೈರಲ್ ಆಗಿವೆ.

  Arjun Sarja ಎಂಗೇಜ್ಮೆಂಟ್ ನಲ್ಲಿ Chiru ಹೇಗಿದ್ರು ನೋಡಿ | Filmibeat Kannada

  'ಶೂಟೌಟ್ ಅಟ್ ಆಲಿಯಾ' ದಲ್ಲಿ ಹಿಂದು ಮುಸ್ಲಿಂ ಸಂಘರ್ಷದ ಕತೆ ಹೇಳಲಾಗಿದೆ. ಮುಸ್ಲಿಂ ವ್ಯಕ್ತಿಗಳು ಪೊಲೀಸರನ್ನು ಸರಣಿಯಾಗಿ ಕೊಲ್ಲುವ ಕತೆ ಹಾಗೂ ಅವರನ್ನು ತಡೆಯಲು ಪೊಲೀಸರು ಮಾಡುವ ಪ್ರಯತ್ನಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿ ಪ್ರಕಾಶ್ ರೈ, ಶ್ರೀಕಾಂತ್, ಸಂಪತ್‌ ರಾಜ್ ಇನ್ನೂ ಹಲವರು ನಟಿಸಿದ್ದಾರೆ.

  English summary
  Actor Ram Charan Teja supports his sisters first produced movie Shootout At Aliar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X