For Quick Alerts
  ALLOW NOTIFICATIONS  
  For Daily Alerts

  ಟೀಸರ್ ವಿಷಯವಾಗಿ ಪರಸ್ಪರ ಕಾಲೆಳೆದುಕೊಂಡ ಜೂ.ಎನ್‌ಟಿಆರ್-ರಾಮ್ ಚರಣ್

  |

  ಬಹು ನಿರೀಕ್ಷಿತ ಸಿನಿಮಾ ಆರ್‌ಆರ್ಆರ್ ಚಿತ್ರೀಕರಣ ಆರಂಭಗೊಂಡಿದೆ. ಇಷ್ಟು ದಿನ ಕಾಯುತ್ತಿದ್ದ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಕೊಡುತ್ತಿದೆ ಚಿತ್ರತಂಡ.

  ಸಿನಿಮಾದ ನಾಯಕ ಜೂ.ಎನ್‌ಟಿಆರ್ ಅವರ ಲುಕ್ ಟೀಸರ್ ಬಿಡುಗಡೆ ನಾಳೆ ಆಗಲಿದೆ. ಲುಕ್ ಟೀಸರ್ ಬಿಡುಗಡೆ ಮಾಡಲಿದ್ದಾರೆ ಸಿನಿಮಾದ ಮತ್ತೊಬ್ಬ ನಾಯಕ ನಟ ರಾಮ್ ಚರಣ್ ತೇಜ.

  'RRR' ಸಿನಿಮಾದ ಡಿಜಿಟಲ್ ಮತ್ತು ಸ್ಯಾಟಲೈಟ್ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟ

  ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿರುವ ರಾಮ್ ಚರಣ್ ತೇಜ ಸಣ್ಣದಾಗಿ ಜೂ.ಎನ್‌ಟಿಆರ್ ಕಾಲೆಳೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಜೂ.ಎನ್‌ಟಿಆರ್ ಸಹ ರಾಮ್‌ ಚರಣ್ ತೇಜ ಗೆ ತಿರುಗುತ್ತರ ನೀಡಿದ್ದಾರೆ. ಜೊತೆಗೆ ರಾಜಮೌಳಿ ಬಗ್ಗೆ ಸಹ ತಮಾಷೆ ಮಾಡಿದ್ದಾರೆ.

  ನಿನ್ನ ಹಾಗೆ ತಡ ಮಾಡುವುದಿಲ್ಲ ಎಂದ ರಾಮ್ ಚರಣ್

  ನಿನ್ನ ಹಾಗೆ ತಡ ಮಾಡುವುದಿಲ್ಲ ಎಂದ ರಾಮ್ ಚರಣ್

  'ಬ್ರದರ್, ನಿನ್ನನ್ನು 'ಟೀಸ್' ಮಾಡಲಿದ್ದೇನೆ. ಆದರೆ ನಿನ್ನ ಹಾಗೆ ನಾನು ತಡ ಮಾಡುವುದಿಲ್ಲ, ಹೇಳಿದ ಸಮಯಕ್ಕೆ ಟೀಸರ್ ಬಿಡುಗಡೆ ಮಾಡುತ್ತೇನೆ' ಎಂದಿದ್ದಾರೆ ರಾಮ್‌ಚರಣ್ ತೇಜ. ಆರ್‌ಆರ್‌ಆರ್‌ ಸಿನಿಮಾದ ಜೂ.ಎನ್‌ಟಿಆರ್ ಪಾತ್ರದ ಸಣ್ಣ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.

  'ನೀನು ಈಗಾಗಲೇ ಐದು ತಿಂಗಳು ತಡವಾಗಿದ್ದೀಯ'

  'ನೀನು ಈಗಾಗಲೇ ಐದು ತಿಂಗಳು ತಡವಾಗಿದ್ದೀಯ'

  ಇದಕ್ಕೆ ತಮಾಷೆಯಾಗಿಯೇ ಪ್ರತಿಕ್ರಿಯಿಸಿರುವ ಜೂ.ಎನ್‌ಟಿಆರ್, 'ನೀನು ಈಗಾಗಲೇ ಐದು ತಿಂಗಳು ತಡ ಮಾಡಿದ್ದೀಯ. ಅದೂ ಅಲ್ಲದೆ ರಾಜಮೌಳಿ ಜೊತೆಗೆ ಕೆಲಸ ಮಾಡಬೇಕಾದರೆ ಏನು ಬೇಕಾದರೂ ಆಗಬಹುದು, ಆದರೂ ಟೀಸರ್ ನೋಡಲು ಉತ್ಸುಕನಾಗಿದ್ದೇನೆ' ಎಂದಿದ್ದಾರೆ ಜೂ.ಎನ್‌ಟಿಆರ್.

  ಈ ಒಂದು ಕಾರಣಕ್ಕಾಗಿ ತೆಲುಗು ಕಲಿಯುತ್ತಿರುವ ಅಲಿಯಾ ಭಟ್: ರಾಜಮೌಳಿ ಸಿನಿಮಾದ ಬಗ್ಗೆ ಹೇಳಿದ್ದೇನು?

  ಕೋಮರಂ ಭೀಂ ಪಾತ್ರದಲ್ಲಿ ಜೂ.ಎನ್‌ಟಿಆರ್

  ಕೋಮರಂ ಭೀಂ ಪಾತ್ರದಲ್ಲಿ ಜೂ.ಎನ್‌ಟಿಆರ್

  ಆರ್‌ಆರ್‌ಆರ್ ಸಿನಿಮಾದಲ್ಲಿ ಜೂ.ಎನ್‌ಟಿಆರ್ ಕೋಮರಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರದ ಲುಕ್ ಟೀಸರ್ ನಾಳೆ (ಅಕ್ಟೋಬರ್ 22) ರಂದು ಬಿಡುಗಡೆ ಆಗಲಿದೆ. ಟೀಸರ್ ಅನ್ನು ಸಿನಿಮಾದ ಮತ್ತೊಬ್ಬ ನಾಯಕ ರಾಮ್ ಚರಣ್ ತೇಜ ಬಿಡುಗಡೆ ಮಾಡಲಿದ್ದಾರೆ.

  ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ

  ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ

  ಆರ್‌ಆರ್‌ಆರ್‌ ಸಿನಿಮಾದಲ್ಲಿ ರಾಮ್ ಚರಣ್ ತೇಜ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್, ನಟ ಅಜಯ್ ದೇವಗನ್ ಸಹ ಇದ್ದಾರೆ. ವಿದೇಶಿ ನಟಿ ಒಲಿವಿಯಾ ಮೋರಿಸ್ ಸಹ ಇದ್ದಾರೆ.

  English summary
  Actor Ram Charan to Introduce Jr NTR as Ramaraju for Bheem In the New RRR Teaser October 22. Rajamouli director of the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X