For Quick Alerts
  ALLOW NOTIFICATIONS  
  For Daily Alerts

  ವರ್ಮಾ ಬಯೋಪಿಕ್ ಆರಂಭ: ಆರ್‌ಜಿವಿ ಚಿತ್ರಕ್ಕೆ ತಾಯಿಯಿಂದ ಆಶೀರ್ವಾದ

  |

  ನೈಜ ಘಟನೆಗಳು, ಬಯೋಪಿಕ್ ಚಿತ್ರಗಳನ್ನು ಮಾಡುವುದರಲ್ಲಿ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಎತ್ತಿದ ಕೈ. ಇದೀಗ, ವರ್ಮಾ ಅವರೇ ಜೀವನವೇ ತೆರೆಮೇಲೆ ಬರ್ತಿದೆ. ಹೌದು, ಆರ್‌ಜಿವಿಯ ಬಯೋಪಿಕ್ ಸಿನಿಮಾ ಇಂದು ಸೆಟ್ಟೇರಿದೆ.

  ಸ್ಟಾರ್ ನಿರ್ದೇಶಕನ ಬದುಕು ಪರದೆ ಮೇಲೆ ಮೂಡುತ್ತಿದೆ. ಇಷ್ಟು ದಿನ ಇತರರ ಜೀವನ ಹಾಗೂ ಅವರ ಜೀವನದಲ್ಲಿ ನಡೆದ ಘಟನೆಗಳನ್ನು ಯಾವುದೇ ಅಂಜಿಕೆಯಿಲ್ಲದೇ ಕೆದುಕುತ್ತಿದ್ದ ರಾಮ್ ಗೋಪಾಲ್ ವರ್ಮಾ, ಈಗ ತಮ್ಮದೇ ಜೀವನವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಆದರೆ, ಈ ಚಿತ್ರವನ್ನು ನಿರ್ದೇಶನ ಅಥವಾ ನಿರ್ಮಾಣ ಮಾಡುತ್ತಿರುವ ವರ್ಮಾ ಅಲ್ಲ. ಹಾಗಾದ್ರೆ, ತೆರೆಮೇಲೆ ಆರ್‌ಜಿವಿ ಪಾತ್ರ ಮಾಡುತ್ತಿದ್ದಾರೆ, ಈ ಸಿನಿಮಾಗೆ ಯಾರು ಆಕ್ಷನ್ ಕಟ್ ಹೇಳಲಿದ್ದಾರೆ? ಮುಂದೆ ಓದಿ....

  ಬೇರೆಯವರ ಜೀವನ ಕೆದಕುವ ರಾಮ್‌ಗೋಪಾಲ್ ವರ್ಮಾ ಜೀವನದ ಬಗ್ಗೆ ಸಿನಿಮಾ!ಬೇರೆಯವರ ಜೀವನ ಕೆದಕುವ ರಾಮ್‌ಗೋಪಾಲ್ ವರ್ಮಾ ಜೀವನದ ಬಗ್ಗೆ ಸಿನಿಮಾ!

  ಆರ್‌ಜಿವಿ ತಾಯಿ ಆಶೀರ್ವಾದ

  ಆರ್‌ಜಿವಿ ತಾಯಿ ಆಶೀರ್ವಾದ

  ರಾಮ್ ಗೋಪಾಲ್ ವರ್ಮಾ ಅವರ ಬಯೋಪಿಕ್ ಚಿತ್ರಕ್ಕೆ 'ರಾಮು' ಎಂದು ಹೆಸರಿಟ್ಟಿದ್ದು, ಮೊದಲ ಅಧ್ಯಾಯದ ಚಿತ್ರೀಕರಣ ಇಂದಿನಿಂದ ಅಧಿಕೃತವಾಗಿ ಆರಂಭವಾಗಿದೆ. ವರ್ಮಾ ಅವರ ತಾಯಿ ಸೂರ್ಯವತಿ ಚಿತ್ರಕ್ಕೆ ಆಶೀರ್ವಾದ ಮಾಡಿದ್ದು, ಕ್ಯಾಮೆರಾಗೆ ಚಾಲನೆ ನೀಡಿದ್ದಾರೆ.

  ಮೊದಲ ದೃಶ್ಯಕ್ಕೆ ಸಹೋದರಿ ಕ್ಲಾಪ್

  ಮೊದಲ ದೃಶ್ಯಕ್ಕೆ ಸಹೋದರಿ ಕ್ಲಾಪ್

  ಆರ್‌ಜಿವಿ ಅವರ ಬಯೋಪಿಕ್ ಚಿತ್ರಕ್ಕೆ ಕುಟುಂಬಸ್ಥರು ಸಂಪೂರ್ಣವಾಗಿ ಸಹಕಾರ ನೀಡಿದ್ದು, ಚಿತ್ರದ ಮುಹೂರ್ತ ಸಮಾರಂಭ ಕಾರ್ಯಕ್ರಮಕ್ಕೆ ಅವರ ತಾಯಿ ಸೂರ್ಯವತಿ ಹಾಗೂ ಸಹೋದರಿ ವಿಜಯ ಪಾಲ್ಗೊಂಡಿದ್ದರು. ಚಿತ್ರದ ಮೊದಲ ದೃಶ್ಯಕ್ಕೆ ವರ್ಮಾ ಸಹೋದರಿ ವಿಜಯ ಕ್ಲಾಪ್ ಮಾಡಿರುವುದು ವಿಶೇಷವಾಗಿದೆ.

  ವರ್ಮಾ ಪಾತ್ರದಲ್ಲಿ ದೊರಸಾಯಿ ತೇಜ

  ವರ್ಮಾ ಪಾತ್ರದಲ್ಲಿ ದೊರಸಾಯಿ ತೇಜ

  'ರಾಮು' ಚಿತ್ರದ ಮೊದಲ ಅಧ್ಯಾಯದಲ್ಲಿ ಆರ್‌ಜಿವಿ ಅವರ ಪಾತ್ರದಲ್ಲಿ ಯುವ ಕಲಾವಿದ ದೊರಸಾಯಿ ತೇಜ ಕಾಣಿಸಿಕೊಳ್ಳುತ್ತಿದ್ದಾರೆ. ಇದು ವರ್ಮಾ ಅವರ ಕಾಲೇಜು ಬದುಕಿನ ಸುತ್ತ ನಡೆಯಲಿದ್ದು, ವಿದ್ಯಾರ್ಥಿ ಜೀವನವನ್ನು ಸೆರೆಹಿಡಿಯಲಾಗುತ್ತಿದೆ. ಮೊದಲ ದೃಶ್ಯದಲ್ಲಿ ತಾಯಿಯಿಂದ ಆಶೀರ್ವಾದ ಪಡೆಯುವ ದೃಶ್ಯವನ್ನು ಸೆರೆಹಿಡಿಲಾಯಿತು.

  ಕೊನೆಗೂ ಅಪ್ಪಾಜಿ ಜೊತೆ ಆಕ್ಟ್ ಮಾಡೋ ಆಸೆ ಈಡೇರಲಿಲ್ಲ | Shruthi Krishna | Filmibeat Kannada
  ಮೂರು ಭಾಗದಲ್ಲಿ 'ರಾಮು' ಬಯೋಪಿಕ್

  ಮೂರು ಭಾಗದಲ್ಲಿ 'ರಾಮು' ಬಯೋಪಿಕ್

  ಅಂದ್ಹಾಗೆ, ರಾಮ್ ಗೋಪಾಲ್ ವರ್ಮಾ ಅವರ ಈ ಬಯೋಪಿಕ್ ಮೂರು ಭಾಗಗಳಾಗಿ ಮೂಡಿ ಬರಲಿದ್ದು, ಈ ಮೂರು ಪ್ರಾಜೆಕ್ಟ್‌ನ್ನು ಬೊಮ್ಮಕು ಮುರಳಿ ನಿರ್ಮಿಸಲಿದ್ದಾರೆ. ಇನ್ನು ವರ್ಮಾ ಪಾತ್ರದಲ್ಲಿ ನಟಿಸುತ್ತಿರುವ ದೊರಸಾಯಿ ತೇಜ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

  English summary
  Ram gopal varma mother Suryavathi switched on the camera today for the first shot of RGV biopic part 1 RAMU. the movie directed by dora sai teja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X