For Quick Alerts
  ALLOW NOTIFICATIONS  
  For Daily Alerts

  ವರ್ಮಾಗೆ ಕೊರೊನಾ.....! ವಿಡಿಯೋ 'ಕೌಂಟರ್' ಕೊಟ್ಟ ನಿರ್ದೇಶಕ

  |

  ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಏನೇ ಮಾಡಿದ್ರು ವಿಭಿನ್ನ. ತಮ್ಮ ವಿರುದ್ಧ ಟೀಕೆ, ಆರೋಪ, ದೂರು ಏನೇ ಬಂದರೂ ಅದಕ್ಕೆ ವಿಭಿನ್ನವಾಗಿ ತಮ್ಮದೇ ವಿಧಾನದಲ್ಲಿ ಉತ್ತರಿಸುವುದು ಅವರ ಜಾಣ್ಮೆ.

  ಹಾಗ್ನೋಡಿದ್ರೆ ಈ ಹಿಂದಿನ ದಿನಗಳಿಗಿಂತ ಈಗ ಆರ್ ಜಿ ವಿ ಹೆಚ್ಚು ಸಕ್ರಿಯರಾಗಿದ್ದಾರೆ. ಸತತವಾಗಿ ಒಂದಲ್ಲ ಒಂದು ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ಸ್ವಂತವಾಗಿ ತನ್ನದೇ ವೆಬ್‌ಸೈಟ್ ಲಾಂಚ್ ಮಾಡಿ ಸಿನಿಮಾಗಳನ್ನು ಬಿಡುಗಡೆ ಮಾಡಿದ್ರು.

  ರಾಮ್ ಗೋಪಾಲ್ ವರ್ಮಾ ವಿರುದ್ಧ ಯುವತಿಯ ಕಾನೂನು ಹೋರಾಟರಾಮ್ ಗೋಪಾಲ್ ವರ್ಮಾ ವಿರುದ್ಧ ಯುವತಿಯ ಕಾನೂನು ಹೋರಾಟ

  ಕೊರೊನಾ ವೈರಸ್‌ ಲಾಕ್‌ಡೌನ್ ವೇಳೆ ಇಡೀ ಇಂಡಸ್ಟ್ರಿ ಸ್ತಬ್ದವಾಗಿದ್ದರೂ ತಾನು ಮಾತ್ರ ಬ್ಯುಸಿಯಿರುವಂತೆ ನೋಡಿಕೊಂಡಿದ್ದರು. ಇಷ್ಟೆಲ್ಲಾ ಸುದ್ದಿಯಾಗುತ್ತಿದ್ದ ರಾಮ್ ಗೋಪಾಲ್‌ ವರ್ಮ ಕುರಿತು ಇತ್ತೀಚಿನ ದಿನಗಳಲ್ಲಿ ವದಂತಿಗಳು ಹಬ್ಬಿವೆ. ಆರ್ ಜಿ ವಿ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಅವರಿಗೆ ಕೊರೊನಾ ಸೋಂಕು ತಗುಲಿರಬಹುದು ಎಂದು ಹೇಳಲಾಗಿದೆ.

  ಈ ವದಂತಿಗಳಿಗೆ ವಿಡಿಯೋ ಮೂಲಕ ಕೌಂಟರ್ ಕೊಟ್ಟಿರುವ ರಾಮ್ ಗೋಪಾಲ್ ವರ್ಮಾ, ''ನಾನು ಫಿಟ್ ಆಗಿದ್ದೀನಿ, ಜ್ವರನೂ ಇಲ್ಲ, ಕೊರೊನಾನೂ ಇಲ್ಲ'' ಎಂದು ಹೇಳಿದ್ದಾರೆ.

  ವ್ಯಾಯಾಮ ಮಾಡುತ್ತಿರುವ ವಿಡಿಯೋ ಶೇರ್ ಮಾಡಿರುವ ಆರ್ ಜಿ ವಿ ''ನಾನು ಸತತವಾಗಿ ಕೆಲಸ ಮಾಡುತ್ತಿದ್ದೇನೆ. ಸ್ಪೆಷಲ್ ಸಿನಿಮಾಗಳನ್ನು ಸಹ ತೆಗೆಯುತ್ತಿದ್ದೇನೆ. ನಿರಂತರವಾಗು ವರ್ಕೌಟ್ ಸಹ ಮಾಡುತ್ತಿದ್ದೇನೆ. ನಾನು ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ಸಂತಸಪಡುತ್ತಿರುವವರಿಗೆ ನಿರಾಸೆ ಮಾಡುತ್ತಿರುವುದಕ್ಕೆ ನನ್ನನ್ನು ಕ್ಷಮಿಸಿ ಬಿಡಿ. ಭವಿಷ್ಯದಲ್ಲಿ ನಿಮ್ಮ ಆಸೆ ನೆರವೇರಲಿ ಎಂದು ಪ್ರಾರ್ಥಿಸುತ್ತೇನೆ. ಆದರೆ ನಾನು ಮಾತ್ರ ವರ್ಕೌಟ್ ಮಾಡ್ಕೊಂಡು ಆರಾಮಾಗಿ ಇರ್ತೇನೆ'' ಎಂದು ತಿರುಗೇಟು ನೀಡಿದ್ದಾರೆ.

  ಪವರ್ ಸ್ಟಾರ್, ಮರ್ಡರ್ ಅಂತಹ ಚಿತ್ರಗಳನ್ನು ಮಾಡಿರುವ ರಾಮ್ ಗೋಪಾಲ್ ವರ್ಮಾ, ಟ್ರೈಲರ್ ಬಿಡುಗಡೆ ಮಾಡಿ ಕುತೂಹಲ ಕೆರಳಿಸಿದ್ದಾರೆ. ಈ ನಡುವೆ ಡೇಂಜರ್ಸ್ ಎಂಬ ಸಲಿಂಗಕಾಮದ ಕುರಿತು ಹೊಸ ಸಿನಿಮಾ ಘೋಷಣೆ ಮಾಡಿದ್ದು, ಫಸ್ಟ್ ಲುಕ್ ಸಹ ಬಿಡುಗಡೆ ಮಾಡಿದ್ದಾರೆ.

  English summary
  South Indian controversial director Ram gopal varma has give counter reply to coronavirus rumors.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X