For Quick Alerts
  ALLOW NOTIFICATIONS  
  For Daily Alerts

  ಗುಡ್ ನ್ಯೂಸ್: ತಾತ ಆದ ರಾಮ್ ಗೋಪಾಲ್ ವರ್ಮ.!

  |

  ತೆಲುಗು ಸಿನಿ ಅಂಗಳದಲ್ಲಿ ಸೆನ್ಸೇಷನಲ್ ಮತ್ತು ಕಾಂಟ್ರವರ್ಶಿಯಲ್ ಡೈರೆಕ್ಟರ್ ಅಂತಲೇ ಗುರುತಿಸಿಕೊಂಡಿರುವ ರಾಮ್ ಗೋಪಾಲ್ ವರ್ಮ ಇದೀಗ ಸಂತಸದಲ್ಲಿ ಇದ್ದಾರೆ. ಅದಕ್ಕೆ ಕಾರಣ ಮೊಮ್ಮಗಳ ಆಗಮನ.!

  ಹೌದು, ನಿರ್ದೇಶಕ ರಾಮ್ ಗೋಪಾಲ್ ವರ್ಮ ತಾತ ಆಗಿದ್ದಾರೆ. ರಾಮ್ ಗೋಪಾಲ್ ವರ್ಮ ಪುತ್ರಿ ರೇವತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ಭಾನುವಾರ (ಫೆಬ್ರವರಿ 9) ಯು.ಎಸ್ ನಲ್ಲಿ ರಾಮ್ ಗೋಪಾಲ್ ವರ್ಮ ಪುತ್ರಿ ರೇವತಿ ಮುದ್ದಾದ ಹೆಣ್ಣು ಮಗುವಿಗೆ ತಾಯಿ ಆಗಿದ್ದಾರೆ. ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

  2013 ರಲ್ಲಿ ಮದುವೆ ಆಗಿದ್ದ ರೇವತಿ ವರ್ಮ

  2013 ರಲ್ಲಿ ಮದುವೆ ಆಗಿದ್ದ ರೇವತಿ ವರ್ಮ

  ನಿರ್ದೇಶಕ ರಾಮ್ ಗೋಪಾಲ್ ವರ್ಮ ಪುತ್ರಿ ರೇವತಿ ವರ್ಮ ವೃತ್ತಿಯಲ್ಲಿ ಡಾಕ್ಟರ್. 2013 ರಲ್ಲಿ ವೈದ್ಯ ಪ್ರಣವ್ ವರ್ಮ ಜೊತೆಗೆ ರೇವತಿ ವರ್ಮ ಮದುವೆ ಹೈದರಾಬಾದ್ ನಲ್ಲಿ ನಡೆದಿತ್ತು. ಬಳಿಕ ಅಮೇರಿಕಾಗೆ ತೆರಳಿದ ಈ ದಂಪತಿ ಇದೀಗ ಅಲ್ಲೇ ಸೆಟಲ್ ಆಗಿದ್ದಾರೆ.

  'ರೋಜಾ ಅಂದವನ್ನು ಬಾಲಕೃಷ್ಣ ಹಾಳು ಮಾಡ್ತಿದ್ದಾರೆ': ವರ್ಮ ವಿರುದ್ಧ ಫ್ಯಾನ್ಸ್ ಆಕ್ರೋಶ'ರೋಜಾ ಅಂದವನ್ನು ಬಾಲಕೃಷ್ಣ ಹಾಳು ಮಾಡ್ತಿದ್ದಾರೆ': ವರ್ಮ ವಿರುದ್ಧ ಫ್ಯಾನ್ಸ್ ಆಕ್ರೋಶ

  ಸಂತಸದ ಹೊನಲಿನಲ್ಲಿ ವರ್ಮ ಫ್ಯಾಮಿಲಿ

  ಸಂತಸದ ಹೊನಲಿನಲ್ಲಿ ವರ್ಮ ಫ್ಯಾಮಿಲಿ

  ರಾನಾ ದಗ್ಗುಬಾಟಿ, ಅಕ್ಕಿನೇನಿ ನಾಗ ಚೈತನ್ಯ, ಲಕ್ಷ್ಮೀ ಮಂಚು, ರವಿ ತೇಜಾ, ಜೆಡಿ ಚಕ್ರವರ್ತಿ, ಜಯಸುಧಾ, ಚಾರ್ಮಿ ಕೌರ್ ಸೇರಿದಂತೆ ಟಾಲಿವುಡ್ ನ ಖ್ಯಾತನಾಮರು ರೇವತಿ ವರ್ಮ-ಪ್ರಣವ್ ವರ್ಮ ವಿವಾಹಕ್ಕೆ ಸಾಕ್ಷಿ ಆಗಿದ್ದರು. ರೇವತಿ ವರ್ಮ ಮತ್ತು ಪ್ರಣವ್ ವರ್ಮ ದಂಪತಿಗೆ ಇದೀಗ ಹೆಣ್ಣು ಮಗು ಹುಟ್ಟಿದ್ದು, ಇಡೀ ವರ್ಮ ಫ್ಯಾಮಿಲಿ ಸಂತಸದ ಹೊನಲಿನಲ್ಲಿದೆ.

  ಮುಂಬೈ ಭೂಗತ ಜಗತ್ತಿಗೆ ರಾಮ್ ಗೋಪಾಲ್ ವರ್ಮಾ ಮತ್ತೊಮ್ಮೆ ಎಂಟ್ರಿಮುಂಬೈ ಭೂಗತ ಜಗತ್ತಿಗೆ ರಾಮ್ ಗೋಪಾಲ್ ವರ್ಮಾ ಮತ್ತೊಮ್ಮೆ ಎಂಟ್ರಿ

  ಟ್ವೀಟ್ ಮಾಡದ ಆರ್.ಜಿ.ವಿ

  ಟ್ವೀಟ್ ಮಾಡದ ಆರ್.ಜಿ.ವಿ

  ಪ್ರಸ್ತುತ ವಿದ್ಯಮಾನಗಳ ಕುರಿತು ಟ್ವಿಟ್ಟರ್ ನಲ್ಲಿ ತಮ್ಮ ಮನಸ್ಸಿಗೆ ಅನಿಸಿದ್ದನ್ನ ಥಟ್ ಅಂತ ರಾಮ್ ಗೋಪಾಲ್ ವರ್ಮ ಪ್ರತಿಕ್ರಿಯೆ ಕೊಡುತ್ತಾರೆ. ಆದ್ರೆ, ಇದೀಗ ತಾತ ಆಗಿ ಬಡ್ತಿ ಪಡೆದಿರುವ ಸಂತಸದ ವಿಚಾರವನ್ನು ಮಾತ್ರ ರಾಮ್ ಗೋಪಾಲ್ ವರ್ಮ ಟ್ವೀಟ್ ಮಾಡಿಲ್ಲ. ಇದಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

  ರಾಮ್ ಗೋಪಾಲ್ ವರ್ಮಾ ಮುಂದಿನ ಸಿನಿಮಾದಲ್ಲಿ 'ಮೆಗಾಸ್ಟಾರ್' ಟಾರ್ಗೆಟ್!ರಾಮ್ ಗೋಪಾಲ್ ವರ್ಮಾ ಮುಂದಿನ ಸಿನಿಮಾದಲ್ಲಿ 'ಮೆಗಾಸ್ಟಾರ್' ಟಾರ್ಗೆಟ್!

  ಶುಭಾಶಯ ತಿಳಿಸಿದ ರಾಜಮೌಳಿ

  ಶುಭಾಶಯ ತಿಳಿಸಿದ ರಾಜಮೌಳಿ

  ''ಶುಭಾಶಯಗಳು ರಾಮು ತಾತಯ್ಯ.. ಕೊನೆಗೂ ನಿಮ್ಮನ್ನ ಆಳಲು ಮೊಮ್ಮಗಳು ಬಂದಿದ್ದಾಳೆ. ಅಂದ್ಹಾಗೆ, ನಿಮಗೆ ಯಾವುದು ಇಷ್ಟ.? ರಾಮು ತಾತ.? ರಾಮು ನಾನಾ.? ಅಥವಾ ಗ್ರ್ಯಾಂಡ್ ಪಾ ರಾಮು.?'' ಎಂದು ಹಾಸ್ಯದಿಂದ ನಿರ್ದೇಶಕ ರಾಜಮೌಳಿ, ರಾಮ್ ಗೋಪಾಲ್ ವರ್ಮಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

  English summary
  Director Ram Gopal Varma Daughter Revathi gives birth to a baby girl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X