For Quick Alerts
  ALLOW NOTIFICATIONS  
  For Daily Alerts

  RGV 'ಕೊಂಡಾ' ತೆಲಂಗಾಣ ರಾಜಕೀಯದಲ್ಲಿ ಹಲ್ಚಲ್

  By ರವೀಂದ್ರ ಕೊಟಕಿ
  |

  ಸದಾ ಸುದ್ದಿಯಲ್ಲಿರುವುದು, ತಾನು ಏನೇ ಮಾಡಿದರೂ ಅದು ಸುದ್ದಿ ಆಗುವಂತೆ ನೋಡಿಕೊಳ್ಳುವ ಕಲೆ

  ರಾಮ್ ಗೋಪಾಲ್ ವರ್ಮಾಗೆ ಚೆನ್ನಾಗಿ ಗೊತ್ತಿರುವುದು. ಹೀಗಾಗಿಯೇ ರಾಮ್ ಗೋಪಾಲ್ ವರ್ಮಾ ಏನೇ ಮಾತನಾಡಿದರು, ಯಾವುದೇ ಸಿನಿಮಾ ಮಾಡಿದರು ಅದೊಂದು ಸುದ್ದಿಯಾಗುವುದು. ಅದರಲ್ಲೂ ವಿಶೇಷವಾಗಿ ರಾಜಕೀಯದ ಹಿನ್ನಲೆಯಲ್ಲಿ ರಾಮು ಮಾಡುವ ಚಿತ್ರಗಳು ವಿವಾದಗಳ ಕಾರಣದಿಂದಲೇ ಸುದ್ದಿಯಾಗುತ್ತವೆ. ರಾಯಲಸೀಮೆಯ ರಕ್ತಸಿಕ್ತ ಇತಿಹಾಸದ 'ರಕ್ತಚರಿತ್ರ' ಪೆರಿಟಾಲರವಿ ಮತ್ತು ಆತನ ಕಡುವೈರಿ ಮದ್ದಲಚೇರುವು ಸೂರಿ ನಡುವಿನ ದ್ವೇಷ-ಹಗೆತನ,ಹತ್ಯಾ ರಾಜಕೀಯದ ಸುತ್ತಲೂ ಹೆಣೆದ ನೈಜ್ಯ ಘಟನೆಗಳನ್ನು ಆಧಾರಿತ ಚಿತ್ರಗಳಾಗಿತ್ತು.

  ಆನಂತರ ಆಂಧ್ರಪ್ರದೇಶದ ರಾಜಕೀಯವನ್ನು ಟಾರ್ಗೆಟ್ ಮಾಡಿದವ ವರ್ಮಾ 'ಕಮ್ಮ ರಾಜ್ಯಂ ಲೋ ಕಡಪ ರೆಡ್ಲು' ಚಿತ್ರ ಮಾಡಿದರು. ಇದರಲ್ಲಿ ಮುಖ್ಯವಾಗಿ ಚಂದ್ರಬಾಬು ನಾಯ್ಡು,ಆತನ ಮಗ ಲೋಕೇಶ್ ಮತ್ತು ಪವನ್ ಕಲ್ಯಾಣ್ ಅವರನ್ನು ಟಾರ್ಗೆಟ್ ಮಾಡಿದ ವರ್ಮಾ ನಡೆಗೆ ತೆಲುಗು ದೇಶ ಮತ್ತು ಜನಸೇನಾ ಪಾರ್ಟಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳದ ವರ್ಮಾ ಮತ್ತೊಂದು ಚಿತ್ರ 'ಪವರ್ ಸ್ಟಾರ್' ಮೂಲಕ ಪವನ್ ಕಲ್ಯಾಣ್ ಅಭಿಮಾನಿಗಳನ್ನು ಕೆಣಕಿದರು.

  ಹೀಗೆ ಯಾವುದೋ ಒಂದು ವಿವಾದಾತ್ಮಕ ಸಬ್ಜೆಕ್ಟ್ ಗಳ ಮೂಲಕ ಸುದ್ದಿಯಲ್ಲಿರುವ ಆರ್ಜಿವಿ ಈ ಬಾರಿ ತನ್ನ ಫೋಕಸ್ ತೆಲಂಗಾಣ ರಾಜಕೀಯದ ಮೇಲೆ ನೆಟ್ಟಿದ್ದಾರೆ.

  ಆರ್ಜಿವಿ ಅವರ ಮುಂದಿನ ಚಿತ್ರ 'ಕೊಂಡಾ'ದ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ. ಈ ಪೋಸ್ಟರ್ ನಲ್ಲಿ ಹೀರೋ ಕ್ಯಾರೆಕ್ಟರ್ ರಿವಿಲ್ ಮಾಡುವುದಕ್ಕಾಗಿ ಒಂದು ಡೈಲಾಗ್ ಕೂಡ ಅದರೊಂದಿಗೆ ಪ್ರಸ್ತುತಪಡಿಸಿದ್ದಾರೆ. ಪೋಸ್ಟರ್ ನಲ್ಲಿರುವ " ಗಾಂಧಿಯಂತೆ ಎರಡನೇ ಕೆನ್ನೆ ತೋರಿಸುವನಲ್ಲ ನಾನು. ಕೊಂದು ಬಿಡ್ತೀನಿ..ಅರ್ಥ ಆಗ್ಲಿಲ್ವಾ?" ಅನ್ನೋ ಪವರ್ ಫುಲ್ ಡೈಲಾಗ್ ಈಗ ಎಲ್ಲೆಡೆ ಹಲ್ಚಲ್ ಆಗುತ್ತಿದೆ.

  'ಕೊಂಡಾ' ಚಿತ್ರ ಯಾರ ಜೀವನಾಧಾರಿತ ಚಿತ್ರ?

  'ಕೊಂಡಾ' ಚಿತ್ರ ಯಾರ ಜೀವನಾಧಾರಿತ ಚಿತ್ರ?

  ಹಿಂದೆ 'ಪೆರಿಟಾಲ ರವಿ' ಜೀವನದ ನೈಜ ಘಟನೆಗಳನ್ನು ಆಧರಿಸಿ 'ರಕ್ತಚರಿತ್ರ-1, 2' ಮಾಡಿದ ಆರ್‌ಜಿವಿ ಈ ಬಾರಿ ತೆಲಂಗಾಣ ರಾಜಕಾರಣಿಗಳಾದ 'ಕೊಂಡಾ ಮುರಳಿ-ಸುರೇಖಾ' ದಂಪತಿಗಳ ಜೀವನದ ನೈಜ ಘಟನೆಗಳನ್ನು ಆಧರಿಸಿ 'ಕೊಂಡಾ' ಚಿತ್ರವನ್ನು ಬೆಳ್ಳಿತೆರೆಗೆ ತರಲು ಹೊರಟಿದ್ದಾರೆ. ''ನಾನು ಸಿನಿಮಾ ತೆಗೆಯುತ್ತಿಲ್ಲ ಬದಲಿಗೆ ತೆಲಂಗಾಣದ ರಕ್ತ ಚರಿತ್ರೆ ಹೇಳುತ್ತಿದ್ದೇನೆ'' ಎಂದು ಟೀಸರ್‌ನಲ್ಲಿ ಹೇಳಿದ್ದಾರೆ ರಾಮ್ ಗೋಪಾಲ್ ವರ್ಮಾ.

  ನಕ್ಸಲ್ ಹಿನ್ನಲೆಯ ಕಥಾವಸ್ತು

  ನಕ್ಸಲ್ ಹಿನ್ನಲೆಯ ಕಥಾವಸ್ತು

  RGV ಇತ್ತೀಚೆಗೆ 'ಕೊಂಡಾ ಮುರಳಿ-ಸುರೇಖಾ' ದಂಪತಿಗಳ ಮೇಲೆ ಒಂದು ಚಿತ್ರವನ್ನು ಘೋಷಿಸಿದ್ದಾರೆ. ಎನ್‍ಕೌಂಟರ್‌ನಲ್ಲಿ ಕೊಲೆಯಾದ ನಕ್ಸಲೈಟ್ ಆರ್‌ಕೆ ಅಲಿಯಾಸ್ ರಾಮಕೃಷ್ಣ ಮತ್ತು ಕೊಂಡಾ ಮುರಳಿ ನಡುವಿನ ವಿಶೇಷ ಸಂಬಂಧದ ಬಗ್ಗೆ ಹೇಳಲು ಹೊರಟಿದ್ದೇನೆ ಎಂದು ವರ್ಮಾ ಅಂತ ಹೇಳಿದ್ದಾರೆ. 'ತಾನು ಮಾಡುತ್ತಿರುವುದು ಚಲನಚಿತ್ರವಲ್ಲ, ನಂಬಲಾಗದ ನೈಜ ಜೀವನ ಆಧಾರಿತ ತೆಲಂಗಾಣದ ರಕ್ತಸಿಕ್ತ ಇತಿಹಾಸ' ಎಂದು ಅವರು ಮಾಡಲಿರುವ ಚಿತ್ರದ ಹಿನ್ನಲೆಯ ಸುಳಿವು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ 'ಕೊಂಡಾ' ಪೋಸ್ಟರ್ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.

  ವಾರಂಗಲ್ ರಾಜಕೀಯದ ಮೇಲೆ ಕೊಂಡಾ ದಂಪತಿಗಳ ಹಿಡಿತ

  ವಾರಂಗಲ್ ರಾಜಕೀಯದ ಮೇಲೆ ಕೊಂಡಾ ದಂಪತಿಗಳ ಹಿಡಿತ

  "ಈ ಚಿತ್ರವು 80 ರ ದಶಕದ ನಕ್ಸಲ್ ಹಿನ್ನೆಲೆಯಲ್ಲಿದೆ 'ಪಿರಿಯಾಡಿಕ್ ಲ್ ಲವ್ ಸ್ಟೋರಿ" ಎಂದು ವರ್ಮಾ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. ಈ ಚಿತ್ರ ಘೋಷಣೆಯಾಗುತ್ತಿದ್ದಂತೆ ತೆಲಂಗಾಣದಲ್ಲಿ ಅದರಲ್ಲೂ ವಿಶೇಷವಾಗಿ ಕೊಂಡಾ ದಂಪತಿಗಳ ಒಂದು ಕಾಲದ ಭದ್ರಕೋಟೆಯಾಗಿದ್ದ ವಾರಂಗಲ್ ಜಿಲ್ಲೆಯಲ್ಲಿ ಇದು ಸಂಚಲನವನ್ನು ಉಂಟು ಮಾಡಿದೆ. ಕೆಲವು ವರ್ಷಗಳ ಹಿಂದಿನವರೆಗೂ ವಾರಂಗಲ್ ರಾಜಕೀಯದಲ್ಲಿ ಶಕ್ತಿ ಕೇಂದ್ರವಾಗಿದ್ದ ಕೊಂಡಾ ಸುರೇಖಾ-ಮುರಳಿ ದಂಪತಿಗೆ ಸಂಬಂಧಿಸಿದ ಪ್ರಮುಖ ಸಂಗತಿಗಳನ್ನು ಸಂಗ್ರಹಿಸಿರುವ ವರ್ಮಾ, ಈ ಚಿತ್ರದ ಮೂಲಕ ತೆಲಂಗಾಣ ರಾಜಕೀಯ ಹಿನ್ನೆಲೆಯ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ.

  ಭೂಮಾಲಿಕರ ರಾಕ್ಷಸತ್ವದ ಕತೆ

  ಭೂಮಾಲಿಕರ ರಾಕ್ಷಸತ್ವದ ಕತೆ

  80 ಮತ್ತು 90 ರ ದಶಕದ ಭೂಮಾಲೀಕರ ರಾಕ್ಷಸತ್ವವನ್ನು 'ಕೊಂಡಾ' ಚಿತ್ರದ ಮೂಲಕ ತೆರೆಯ ಮೇಲೆ ತೋರಿಸಲು ಹೊರಟಿರುವುದಾಗಿ RGV ಹೇಳಿಕೊಂಡಿದ್ದಾರೆ. ಇದರೊಂದಿಗೆ, ರಾಜಕಾರಣಿಗಳಾಗಿ ತಮ್ಮ ಛಾಪು ಮೂಡಿಸಿರುವ ಈ ದಂಪತಿಗಳನ್ನು ಸಿನಿಮಾದಲ್ಲಿ ಹೇಗೆ ತೋರಿಸಬಹುದು ಎಂಬ ಬಗ್ಗೆ ಸಾರ್ವತ್ರಿಕ ಚರ್ಚೆ ನಡೆಯುತ್ತಿದೆ. ಚಿತ್ರದಲ್ಲಿ ಆದಿತ್ ಅರುಣ್ ಮತ್ತು ಇರಾ ಮೋರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  English summary
  Ram Gopal Varma directing new movie named Konda. It is based on politicians Konda Surekha and Konda Murali.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X